ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣಕ್ಕೆ ಜಾರ್ಜ್ ಫೆರ್ನಾಂಡಿಸ್ ರ ಹೆಸರಿಡುವ ಪ್ರಸ್ತಾವನೆ ಬಗ್ಗೆ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪತ್ರ ರವಾನೆ – ತೋನ್ಸೆ ಜಯಕೃಷ್ಣ ಎ ಶೆಟ್ಟಿ
ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ ಅವಿಭಜಿತ ದಕ್ಷಿಣ ಕನ್ನಡ,. ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು. ಮಹಾನಗರದ ವಿವಿಧ ಜಾತೀಯ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಜಿಲ್ಲೆಗಳ ಪ್ರಗತಿಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಯಶಸ್ವಿ ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಆರಂಭದಿಂದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ, ಕೊಂಕಣ ರೈಲ್ವೆಯ ಶಿಲ್ಪಿ ಎಂದೇ ಗುರುತಿಸಿಕೊಂಡಿರುವ , ಮಾಜಿ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡೀಸ್ ಅವರ ಜನ್ಮ ದಿನವನ್ನು ಪ್ರತೀ ವರ್ಷ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಸಾರ್ವಜನಿಕ ಜೀವನದಲ್ಲಿನ ಸಾಧಕರೊಬ್ಬರನ್ನು ಗುರುತಿಸಿ ಪ್ರಶಸ್ತಿ ನೀಡಿ ಆಚರಿಸುತ್ತಾ ಬಂದಿದ್ದು ಇದೀಗ ಜಗತ್ತಿಗೇ ಆತಂಕವನ್ನುಂಟುಮಾಡಿದ ಮಹಾಮಾರಿ ಕೊರೋನಾದ ಬಗೆಗಿನ ಸರಕಾರದ ಲಾಕ್ ಡೌನ್ ನಿರ್ಬಂಧಗಳಿಂದಾಗಿ ಈ ವರ್ಷವೂ ದಿ. ಶ್ರೀ ಜಾರ್ಜ್ ಫೆರ್ನಾಂಡಿಸ್ ರ 91 ನೇ ಹುಟ್ಟುಹಬ್ಬದ ಸಂಸ್ಮರಣೆ ಸಮಾರಂಭವನ್ನು ವೆಬಿನಾರ್ ಮೂಲಕ ಆಚರಿಸಲಾಯಿತು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾರ್ಗದರ್ಶಕರೂ, ದೇಶದ ಅಪ್ರತಿಮ ಜನ ಮೆಚ್ಚಿದ ನಾಯಕರೂ, ಕಾರ್ಮಿಕ ಮುಖಂಡರೂ ಮತ್ತು ಮಾಜಿ ರಕ್ಷಣಾ ಮಂತ್ರಿಯಾಗಿದ್ದ ಶ್ರೀ ಜಾರ್ಜ್ ಫೆರ್ನಾಂಡಿಸ್ ಅವರು 2 ವರ್ಷಗಳ ಹಿಂದೆ ಧೈವಾಧೀನರಾಗಿದ್ದು ಅವರ 91 ನೇ ಹುಟ್ಟುಹಬ್ಬದ ಸಂಸ್ಮರಣೆಯನ್ನು ಜೂ. 3 ರಂದು ಜಾಲತಾಣದಲ್ಲಿ ನಡೆಸಿದ ಸಭೆಯಲ್ಲಿ ಆಚರಿಸಲಾಗಿದ್ದು ಪ್ರಾರಂಭದಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಅವರು ಸರ್ವರನ್ನೂ ಸ್ವಾಗತಿಸಿ ಸಮಿತಿಯ ದಿವ್ಯ ಚೇತನರಾಗಿದ್ದ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹುಟ್ಟುಹಬ್ಬದ ಸಾಂಕೇತಿಕ ಆಚರಣೆಯ ಬಗ್ಗೆ ತಿಳಿಸಿದರು. ಅಲ್ಲದೆ ಜಾರ್ಜ್ ಅವರು ಸಮಿತಿ ಸಮಿತಿಯೊಂದಿಗೆ ಇದ್ದ ಒಡನಾಟವನ್ನು ಅವರು ನೀಡಿದ ಬೆಂಬಲದಿಂದ ಸಮಿತಿ ಮಾಡಿದ ಸಾಧನೆಗಳನ್ನು ತಿಳಿಸಿದರು
ಜಾರ್ಜ್ ಫೆರ್ನಾಂಡಿಸ್ ರ ನಿಕಟ ವರ್ತಿಗಳೂ, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರೂ ಮತ್ತು ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜಾರ್ಜ್ ಫೆರ್ನಾಂಡಿಸ್ ರಂತಹ ವ್ಯಕ್ತಿ ನಮ್ಮ ದೇಶಕ್ಕೆ ಸದ್ಯಕ್ಕೆ ಸಿಗಲು ಅಸಾಧ್ಯ. ಇವರು ನಮ್ಮ ಜಿಲ್ಲೆಯವರಾಗಿದ್ದು ಇವರ ನೆನಪು ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿ ಇರಬೇಕಾಗಿದೆ . ಇಂದು ನಡೆದ ಸಭೆಯಲ್ಲಿ ಮಾತನಾಡಿನ ಜಾತೀಯ ಸಂಘಟನೆಗಳ ಎಲ್ಲಾ ಅಧ್ಯಕ್ಷರುಗಳು /ಪ್ರತಿನಿಧಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪುನಃರ್ನಾಮಕರಣಕ್ಕೆ ಬೆಂಬಲ ನೀಡಿದ್ದು ಮಾತ್ರವಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ನಾಮಕರಣ ಮಾಡಲು ಅನೇಕ ಗಣ್ಯರು, ರಾಜಕಾರಿಣಿಗಳು ಪಕ್ಷಬೇಧ ವಿಲ್ಲದೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈ ಬಗ್ಗೆ ಸಮಿತಿಯು ಸೂಕ್ತ ಠರಾವು ವನ್ನು ಮಾಡಿದೆ. ಈಗಾಗಲೇ ಮಂಗಳೂರು ವಿಮಾನ ನಿಲ್ಧಾಣದ ಹೆಸರನ್ನು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ಪುನರ್ ನಾಮಕರಣ ಮಾಡಲು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪರವಾಗಿ ಕೇಂದ್ರ ಸರಕಾರವನ್ನು ಸಂಪರ್ಕಿಸಲಾಗಿದೆ. ಈ ಬಗ್ಗೆ ಕಳೆದ ತಿಂಗಳ ಹಿಂದೆ ಪ್ರಧಾನ ಮಂತ್ರಿಯವರ ಕಾರ್ಯಾಲಯವು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ವ್ಯವಹಾರ ನಡೆಸಿದ್ದು ಅದರ ಪ್ರತಿಯನ್ನು ನಮಗೆ ಕಳುಹಿಸಿದ್ದಾರೆ. ಪ್ರಧಾನ ಮಂತ್ರಿಯವರ ಕಾರ್ಯಾಲಯದಿಂದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಒಂದೂವರೆ ತಿಂಗಳ ಮೊದಲೇ ಪತ್ರ ಬರೆಯಲಾಗಿದ್ದು ಇದುವರೆಗೆ ಯಾವುದೇ ಕ್ರಮ ಕೈಕೊಳ್ಳದ ಕಾರಣ ನಾವು ಕರ್ನಾಟಕದ ಮುಖ್ಯ ಮಂತ್ರಿಗಳಾದ ಮಾನ್ಯ ಬಿ. ಎಸ್. ಯಡಿಯೂರಪ್ಪ ಮತ್ತು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಪ್ರಧಾನ ಮಂತ್ರಿಯವರ ಕಾರ್ಯಾಲಯದ ಪತ್ರದಂತೆ ಮಾನ್ಯ ಮುಖ್ಯ ಮಂತ್ರಿಯವರಲ್ಲಿ ಚರ್ಚಿಸಿ ಮಂಗಳೂರು ವಿಮಾನ ನಿಲ್ಧಾಣದ ಹೆಸರನ್ನು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ನಾಮಕರಣ ಮಾಡಲು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿ ವಿನಂತಿಸಲಾಗಿದ್ದು ಕೊರೋನಾ ಮುಗಿದಂತೆ ಮತ್ತೆ ಈ ಕಾರ್ಯವನ್ನು ಅಭಿಮಾನಿಗಳ ಸಹಕಾರದಿಂದ ನಾವು ಸ್ವತ: ಸರಕಾರವನ್ನು ಸಂಪರ್ಕಿಸಿಕೊಂಡು ಮುಂದುವರಿಸಲಿದ್ದೇವೆ, ಎಂದು ಜಯಕೃಷ್ಣ ಶೆಟ್ಟಿ ಯವರು ತಿಳಿಸಿದರು.
ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ ಮಾಡಾ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ, ಉಪಾಧ್ಯಕ್ಷರುಗಳಾದ ಎಲ್ ವಿ ಅಮೀನ್, ಸಿ ಎ ಐ ಆರ್ ಶೆಟ್ಟಿ, ಪಿ .ಡಿ. ಶೆಟ್ಟಿ, ಜಿ. ಟಿ. ಆಚಾರ್ಯ, ಬಂಟ್ಸ್ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ ಶೆಟ್ಟಿ, ಬಂಟ್ಸ್ ಚೇಂಬರ್ ಆಪ್ ಕಾಮರ್ಸ್ ನ ಕಾರ್ಯಾಧ್ಯಕ್ಷ, . ಕೆ ಸಿ. ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿ ನ ಅಧ್ಯಕ್ಷರಾದ ಹರೀಶ್ ಅಮೀನ್, ವಿದ್ಯಾದಾಯಿನಿ ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ ಎಮ್ . ಕೋಟ್ಯಾನ್, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್, , ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್ ಆರ್ ಎಮ್ ಭಂಡಾರಿ, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್ ದೇವಾಡಿಗ, ಕನ್ನಡಿಗರ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರಕುಮಾರ್ ಹೆಗ್ಡೆ, ಸಮಿತಿಯ ಗೌರವ ಕಾರ್ಯದರ್ಶಿ ಪ್ರೊಫೆಸರ್ ಶಂಕರ್ ಉಡುಪಿ, ಸಮಿತಿಯ ವಕ್ತಾರ ಹಿರಿಯ ಪತ್ರಕರ್ತರಾದ ದಯಾಸಾಗರ ಚೌಟ, ಮಾಲತಿ ಮೊಯ್ಲಿ, ಸುರೇಖಾ ದೇವಾಡಿಗ, ಕೇಶವ ಆಳ್ವ, ದುಬೈಯ ಹಿರಿಯ ಉದ್ಯಮಿ ಫ್ರಾಂಕ್ ಫೆರ್ನಾಂಡಿಸ್ , ತೋನ್ಸೆ ಶೇಖರ ಗುಜ್ಜರಬೆಟ್ಟು, ಸಮಿತಿಯ ಗೌರವ ಕೋಶಾಧಿಕಾರಿ ಸುರೇಂದ್ರ ಸಾಲಿಯಾನ್, ಗೌರವ ಕಾರ್ಯದರ್ಶಿ ಹ್ಯಾರಿ ಸಿಕ್ವೆರ. ಮಾಜಿ ಗೌರವ ಕೋಶಾಧಿಕಾರಿ ಜಯಂತ್ ಕೆ. ಶೆಟ್ಟಿ, ರಂಜನಿ ಆರ್ ಮೊಯಿಲಿ, ದಿನೇಶ್ ಕುಲಾಲ್, ವಿಠ್ಠಲ್ ಆಳ್ವ,ಈಶ್ವರ್ ಐಲ್, ಮನೋರಂಜನ ಶೆಟ್ಟಿ, ಫ್ರೆಡ್ ಡಿಸೋಜಾ, ಎಂ ಎನ್ ಕರ್ಕೇರಾ ರ ವರು ವೆಬಿನಾರ್ ಸಭೆಯಲ್ಲಿ ಉಪಸ್ಥಿತರಿದ್ದು ಸಮಿತಿಯ ನಿರ್ಧಾರಕ್ಕೆ ಬೆಂಬಲ ವ್ಯಕ್ತ ಪಡಿಸಿದರು .
ಸಮಿತಿಯ ಉಪಾಧ್ಯಕ್ಷರೂ ಆದ ನಿತ್ಯಾನಂದ ಡಿ. ಕೋಟ್ಯಾನ್ ರವರು ಪ್ರಾರಂಭದಲ್ಲಿ ಮಾತನಾಡುತ್ತ ಸಮಿತಿಯ ಕಳೆದ ಎರಡು ಧಶಕಗಳಿಗೂ ಅಧಿಕ ಕಾಲದ ಕಾರ್ಯ ಸಾಧನೆಗಳಲ್ಲಿ ಜಾರ್ಜ್ ಫೆರ್ನಾಂಡಿಸ್ ರ ಮಾರ್ಗದರ್ಶನ ಮತ್ತು ಬೆಂಬಲದ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಹುಟ್ಟಿ ದೇಶದ ಒಬ್ಬ ಬಲಿಷ್ಠ ರಾಜಕಾರಣಿಯಾಗಿ. ಆದರ್ಶ ರಾಜಕೀಯ ಜೀವನವನ್ನು ಮಾಡಿದವರು ಅವರ ಹೆಸರು ದೇಶದಲ್ಲಿ ಶಾಶ್ವತವಾಗಿ ಉಳಿಯಬೇಕಾಗಿದೆ ಎಂದು ಅವರಿಗೆ ಗೌರವಾರ್ಪಣೆಗೈದರು.
ಸಭೆಯಲ್ಲಿ ಉಪಸ್ಥಿತರಿದ್ದ ಸರ್ವ ಮುಖಂಡರು ಶ್ರೀ ಜಾರ್ಜ್ ಫೆರ್ನಾಂಡಿಸ್ ರ ಜೀವನ ಚರಿತ್ರೆ, ಕಾರ್ಯಸಾಧನೆ, ನಾಯಕತ್ವದ ಗುಣಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸುಪುತ್ರ, ದೇಶ ಕಂಡ ಮಹಾನ್ ರಾಜಕಾರಿಣಿ, ಹಾಗೂ ಮರೆಯಲಾಗದ ದಿವ್ಯ ಚೇತನದ ಬಗ್ಗೆ ಮಾತನಾಡಿ ಗೌರವ ಸಲ್ಲಿಸಿದರು
ಜಾಲತಾಣದಲ್ಲಿ ಸಭೆ ಯಶಸ್ವಿಯಾಗುವಲ್ಲಿ ಉಡುಪಿಯ ತೇಜಸ್ವಿ ಶಂಕರ್ ಸಹಕರಿಸಿದ್ದರು.
ವಿವಿಧ ಗಣ್ಯರ ಅನಿಸಿಕೆ
==============
ತುಳುನಾಡಿನ ಹೆಮ್ಮೆಯ ಸುಪುತ್ರ ಜಾರ್ಜ್ ಫೆರ್ನಾಂಡಿಸ್ ರವರ ಹೆಸರು ಶಾಶ್ವತವಾಗಿ ಉಳಿಯಲು ಮಂಗಳೂರು ವಿಮಾನ ನಿಲ್ಧಾಣಕ್ಕೆ ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ನಾಮಕರಣ ಮಾಡಬೇಕಾಗಿದೆ . ದೇಶದ ನಿರ್ಮಾಣದಲ್ಲಿ ಅವರ ಅನನ್ಯ ಕೊಡುಗೆಯಿದ್ದು, ಅವರಂತಹ ಮುಖಂಡರು ಇನ್ನು ಸಿಗಲಾರರು.
– ನ್ಯಾ. ಪ್ರಕಾಶ್ ಎಲ್. ಶೆಟ್ಟಿ, – ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
******
ಕೋರೋನಾ ದಿಂದಾಗಿ ಬಹಳ ಸಮಯದ ನಂತರ ಕೊಂಕಣ ರೈಲ್ವೆಯ ಶಿಲ್ಪಿ ಜಾರ್ಜ್ ಫೆರ್ನಾಂಡಿಸ್ ರವರ ಹುಟ್ಟು ಹಬ್ಬದಂದು ನಾವೆಲ್ಲರೂ ಸೇರುತ್ತಿರುವುದು ಸಂತೋಷವಾಗುತ್ತಿದೆ. ಸಮಿತಿಯು ಜಾರ್ಜ್ ಫೆರ್ನಾಂಡಿಸ್ ರ ಹೆಸರನ್ನು ಶಾಶ್ವತವಾಗಿರಿಸಲು ಸಮಿತಿಯು ಕೈಕೊಂಡ ಕಾರ್ಯ ಅಭಿನಂದನೀಯ.
– ವಿಶ್ವನಾಥ ಮಾಡಾ – ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
*******
ನಮ್ಮ ಸಮಿತಿಯ ನಿಯೋಗ ವು ಕರ್ನಾಟಕ ಸರಕಾರದ ಮುಖ್ಯ ಮಂತ್ರಿಯವರನ್ನು ಭೇಟಿ ಯಾಗಿ ಜಾರ್ಜ್ ಫೆರ್ನಾಂಡಿಸ್ ರ ಹೆಸರನ್ನು ಶಾಶ್ವತವಾಗಿರಿಸಲು ಮಂಗಳೂರು ವಿಮಾನ ನಿಲ್ಧಾಣಕ್ಕೆ ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಪುನರ್ನಮಕರಣ ಮಾಡುವಂತಾಗಬೇಕು.
– ಹರೀಶ್ ಕುಮಾರ್ ಶೆಟ್ಟಿ – ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಜಾರ್ಜ್ ಫೆರ್ನಾಂಡಿಸ್ ಜನ್ಮದಿನದಂದು ನಾವು ಒಂದು ಉತ್ತಮ ನಿರ್ಣಯವನ್ನು ಕೈಗೊಡಿದ್ದು ಇದು ಹೆಮ್ಮೆಯ ವಿಷಯ. ಅವರ ಹೆಸರು ಹೇಳುತ್ತಿದ್ದಂತೆಯೇ ನಮಗೆ ಸ್ಪೂರ್ತಿ ತುಂಬುತ್ತಿದೆ. ನಾವೆಲ್ಲರೂ ಸೇರಿ ಮಂಗಳೂರು ವಿಮಾನ ನಿಲ್ದಾಣದ ನಾಮಕರಣದ ಬಗ್ಗೆ ಮುಂದಿನ ಹೆಚ್ಚೆ ಇಡುವು ದರೊಂದಿಗೆ ಅವರ ಹೆಸರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಶ್ವತವಾಗಿ ಇರಲಿ.
– ಧರ್ಮಪಾಲ್ ಯು. ದೇವಾಡಿಗ – ಮಾಜಿ ಅಧ್ಯಕ್ಷ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಜೆ. ಎಫ್ . ಕೆನಡಿ ವಿಮಾನ ನಿಲ್ದಾಣದಂತೆ ಮಂಗಳೂರಿನ ವಿಮಾನ ನಿಲ್ಧಾಣವು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಲಿ. ಜಾರ್ಜ್ ಫೆರ್ನಾಂಡಿಸ್ ರ ಹೆಸರು ಶಾಶ್ವತವಾಗಿರಲಿ.
-ಫ್ರಾಂಕ್ ಫೆರ್ನಾಂಡಿಸ್ , ಪ್ರಖ್ಯಾತ ಉದ್ಯಮಿ. ವಾಗ್ಮಿ .ದುಬೈ
***
ಜಾರ್ಜ್ ಫೆರ್ನಾಂಡಿಸ್ ಅವರದ್ದು ಅರ್ಥಪೂರ್ಣ ಸಾಧನೆ. ನಮ್ಮ ಸಮಿತಿಗೆ ಅವರು ಒಂದು ಶಕ್ತಿಯಾಗಿದ್ದರು. ನಮ್ಮ ಜೆಲ್ಲೆಯಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯಲು ನಾವೆಲ್ಲರೂ ಒಂದಾಗಿ ಪ್ರಯತ್ನಿಸೋಣ.
– ಎಲ್ ವಿ ಅಮೀನ್, (ಅಮೇರಿಕಾದಿಂದ) ಉಪಾಧ್ಯಕ್ಷರು – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಹತ್ತು ಬಾಷೆಯನ್ನು ಅರಿತ ಜಾರ್ಜ್ ಫೆರ್ನಾಂಡಿಸ್ ರು ಒರ್ವ ನಿಪುಣ ರಾಜ ಕಾರಣಿ. ಅಸಾಧಾರಣ ವ್ಯಕ್ತಿತ್ವದ ಸಾಧಾರಣ ವ್ಯಕ್ತಿ ಜಾರ್ಜ್ ಫೆರ್ನಾಂಡಿಸ್ ಆಗಿದ್ದು ಅವರ ಹೆಸರನ್ನು ಶಾಶ್ವತವಾಗಿರಿಸುವಲ್ಲಿ ನಮ್ಮ ಸಮಿತಿಯು ಕ್ರೀಯಾಶೀಲವಾಗಿದೆ.
-ಸಿ ಎ ಐ ಆರ್ ಶೆಟ್ಟಿ, ಉಪಾಧ್ಯಕ್ಷರು – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ಮಾನವನ ಹಕ್ಕಿಗಾಗಿ ಹೋರಾಟ ಮಾಡಿದ ಜಾರ್ಜ್ ಫೆರ್ನಾಂಡಿಸ್ ರು ಕೇವಲ ಒರ್ವ ವ್ಯಕ್ತಿಯಾಗಿರದೆ ಒಂದು ಸಂಸ್ಥೆಯಾಗಿದ್ದರು. ಅವರು ನಮ್ಮ ದೇಶದ ಪ್ರಧಾನಿಯಾಗಲು ಅರ್ಹರಾಗಿದ್ದರು . ಅವರು ಇಂದು ನಮ್ಮೊಂದಿಗಿದ್ದಲ್ಲಿ ನಮ್ಮ ದೇಶದ ಪ್ರಧಾನಿಯಾಗುತಿದ್ದಲ್ಲಿ ನಮ್ಮ ದೇಶದಲ್ಲಿ ಉತ್ತಮ ಬದಲಾವಣೆಯಾಗುತ್ತಿತ್ತು. ವಿಮಾನ ನಿಲ್ಧಾಣಕ್ಕೆ ಅವರ ಹೆಸರನ್ನು ಇಡಲು ಅಗತ್ಯವಿದ್ದಲ್ಲಿ ಹೋರಾಟವನ್ನೂ ನಡೆಸಬೇಕಾಗಿದೆ.
– ಡಾ. ಆರ್. ಕೆ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಂಟರ ಸಂಘ ಮುಂಬಯಿ
****
ಕಾರ್ಮಿಕ ನಾಯಕನಾಗಿ, ಕೇಂದ್ರ ಸಚಿವರಾಗಿ ಜನಸೇವೆಯನ್ನು ಮಾಡಿದ ಇಂತಹ ಮಹಾನ ವ್ಯಕ್ತಿಯ ಹುಟ್ಟು ಹಬ್ಬದಂದು ನಮ್ಮ ಸಮಿತಿಯು ಉತ್ತಮವಾದ ನಿರ್ಣಯವನ್ನು ಕೈಗೊಳ್ಳುತ್ತಿರುವುದು ಅಭಿನಂದನೀಯ.
-ಕೆ. ಸಿ. ಶೆಟ್ಟಿ, ಕಾರ್ಯಾಧ್ಯರು,ಬಂಟ್ಸ್ ಚೇಂಬರ್ ಆಪ್ ಕಾಮರ್ಸ್
******
ಸಮಿತಿಯ ಉತ್ತಮ ಕೆಲಸಕ್ಕೆ ನಮ್ಮ ಸಂಸ್ಥೆಯು ಸದಾ ಪ್ರೋತ್ಸಾಹ ನೀಡುತ್ತಿದೆ. ಬಡವರ ನಾಯಕ ಜಾರ್ಜ್ ಫೆರ್ನಾಂಡಿಸ್ ಹೆಸರು ಶಾಶ್ವ ತವಾಗಿ ಉಳಿಯಲು ಸಮಿತಿಯು ಕೈಕೊಂಡ ಕಾರ್ಯ ಸ್ವಾಗತಾರ್ಹ.
-ಹರೀಶ್ ಅಮೀನ್, ಆಧ್ಯಕ್ಷರು, ಬಿಲ್ಲವರ ಅಸೋಸಿಯೇಷನ್ ಮುಂಬಯಿ
****
ಮಹಾನ್ ನಾಯಕ ಜಾರ್ಜ್ ಫೆರ್ನಾಂಡಿಸ್ ರ ಹೆಸರು ನಮ್ಮ ನಾಡಲ್ಲಿ ಶಾಶ್ವತ ವಾಗಿರಲಿ, ಮಂಗಳೂರಿನ ವಿಮಾನ ನಿಲ್ಧಾಣವು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಿ ಪುನರ್ ನಾಮಕರಣ ಗೊಳ್ಳುವುದು ಅರ್ಥಪೂರ್ಣವಾಗಿದೆ.v
– ಜಿ. ಟಿ. ಆಚಾ,ರ್ಯ, ಮಾಜಿ ಅಧ್ಯಕ್ಷರು : ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್
***********
ಜಾರ್ಜ್ ಫೆರ್ನಾಂಡಿಸ್ ಅವರು ನನಗೆ ಮೊದಲೇ ಪರಿಚಿತರು. ಸೂರ್ಯ ಚಂದ್ರರಿರುವ ತನಕ ಅವರ ಹೆಸರು ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿರಲಿ.
– ಪಿ .ಧನಂಜಯ ಶೆಟ್ಟಿ, ಉಪಾಧ್ಯಕ್ಷರು – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ
****
ನಮ್ಮ ಜಿಲ್ಲೆಯು ಬಹಳ ದೊಡ್ಡ ನಾಯಕನನ್ನು ಹೊಂದಿದ್ದಲ್ಲಿ ಅದು ಜಾರ್ಜ್ ಫೆರ್ನಾಂಡಿಸ್. ಅಂತವರು ನಮ್ಮ ಸಮಿತಿಗೆ/ಸಮಿತಿಯ ಸಂಸ್ಥಾಪಕ/ ಅಧ್ಯಕ್ಷರಾದ ಜಯಕೃಷ್ಣ ಶೆಟ್ಟಿಯವರಿಗೆ ವರವಾಗಿ ಸಿಕ್ಕಿದ್ದರು. ಜಾರ್ಜ್ ಫೆರ್ನಾಂಡಿಸ್ ರಿಗೆ ಯಾವತ್ತು ಮರಣವಿಲ್ಲ. ಅವರ ಹೆಸರು ಅಜರಾಮರವಾಗಿರಲಿ.
ದಯಾಸಾಗರ ಚೌಟ, ವಕ್ತಾರ : ಜಯಶ್ರೀ ಕೃಷ್ಣ ಪರಿಸರಪ್ರೇಮಿ ಸಮಿತಿ
*****
ಜಾರ್ಜ್ ಫೆರ್ನಾಂಡಿಸ್ ಅವರಲ್ಲಿ ನಾನು ಒಮ್ಮೆ ತುಳು ಭಾಷೆಯಲ್ಲಿ ಮಾತನಾಡಿದ್ದಾಗ ಬಹಳ ಸಂತೋಷ ವ್ಯಕ್ತಪಡಿಸಿದ್ದರು. ಮಂಗಳೂರಿನ ವಿಮಾನ ನಿಲ್ಧಾಣವು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಿ ಪುನರ್ ನಾಮಕರಣ ಗೊಳ್ಳುತ್ತಿರುವುದು ಸ್ವಾಗತಾರ್ಹ.
-ದೇವದಾಸ್ ಕುಲಾಲ್ – ಆಧ್ಯಕ್ಷರು, ಕುಲಾಲ ಸಂಘ, ಮುಂಬಯಿ
*****
ಜಾರ್ಜ್ ಫೆರ್ನಾಂಡಿಸ್ ರು ಎಲ್ಲಾ ಸಮುದಾಯಕ್ಕೆ ಬೇಕಾದ ವ್ಯಕ್ತಿಯಾಗಿದ್ದರು. ಯವುದೇ ಉತ್ತಮ ಕೆಲಸಕ್ಕೆ ರಾಜಕೀಯದ ಆತಂಕವಿದೆ. ನಮ್ಮ ಉದ್ದೇಶವು ಯವುದೇ ಆಡಚಣೆಯಿಲ್ಲದೆ ಪೂರ್ಣಗೊಳ್ಳಲಿ.
–ಚಿತ್ರಾಪು ಕೆ ಎಮ್ . ಕೋಟ್ಯಾನ್ , ಗೌರವ ಪ್ರಧಾನ ಕಾರ್ಯದರ್ಶಿ ವಿದ್ಯಾದಾಯಿನಿ ಸಭಾ, ಮುಂಬಯಿ
******
ಸಮಿತಿಯ ಎಲ್ಲಾ ಕೆಲಸಕ್ಕೆ ನಮ್ಮ ಸಹಕಾರ, ಸಹಭಾಗಿತ್ವ ಹಾಗೂ ಪ್ರೋತ್ಸಾಹವಿದೆ.
-ಅಡ್ವೋಕೇಟ್ ಆರ್ ಎಮ್ ಭಂಡಾರಿ, ಅಧ್ಯಕ್ಷರು:ಭಂಡಾರಿ ಸೇವಾ ಸಂಘ ಮುಂಬಯಿ
*******
ಸಮಿತಿಯು ಕಣ ರೈಲ್ವೆ ಖಾಸಗೀಕರಣದ ಬಗ್ಗೆ ಚಿಂತಿಸಬೇಕಾಗಿದೆ, ಸಮಿತಿಯು ಕೈಗೊಂಡ ನಿರ್ಧಾರಗಳಿಗೆ ನಮ್ಮ ಅಳಿಲ ಸೇವೆ/ಬೆಂಬಲ ಸದಾ ಇದೆ. ವಿಮಾನ ನಿಲ್ಧಾಣದ ಪುನರ್ ನಾಮಕರಣದ ಬಗ್ಗೆ ನಾವೆಲ್ಲರೂ ಕೈಜೋಡಿಸೋಣ
– ರವಿ ಎಸ್. ದೇವಾಡಿಗ – ಅಧ್ಯಕ್ಷರು, ದೇವಾಡಿಗ ಸಂಘ ಮುಂಬಯಿ
********
ಇಂದು ಜಾರ್ಜ್ ಫೆರ್ನಾಂಡಿಸ್ ಹುಟ್ಟು ಹಬ್ಬವನ್ನು ಸಮಿತಿಯು ಅರ್ಥಪೂರ್ಣವಾಗಿ ಆಚರಿಸುತ್ತಿದೆ. ದೇಶ ಸೇವೆ ಮಾಡಲು ಅವರಿಂದ ಕಲಿಯಬೇಕು. ಜಾರ್ಜ್ ಫೆರ್ನಾಂಡಿಸ್ ಅವರ ಸಾಧನೆಯನ್ನು ಗೌರವಿಸು ವಂತಾಗಬೇಕು. ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ವಾಗಿ ಪುನರ್ ನಾಮಕರಣ ಗೊಳ್ಳುವು ದರೊಂದಿಗೆ ಅವರ ಹೆಸರು ಶಾಶ್ವತವಾಗಿ ಉಳಿಯಲಿ.
– ಡಾ. ಸುರೇಂದ್ರಕುಮಾರ್ ಹೆಗ್ಡೆ, ಅಧ್ಯಕ್ಷರು, ಕನ್ನಡಿಗರ ಕಲಾವಿದರ ಪರಿಷತ್ತು ಮಹಾರಾಷ್ಟ್ರ
****
ಜಾರ್ಜ್ ಫೆರ್ನಾಂಡಿಸ್ ರಂತಹ ಮಹಾನ್ ವ್ಯಕ್ತಿ ನಮ್ಮ ಊರಿಗೆ ತೋನ್ಸೆfಗೆ ಆಗಮಿಸಿದ್ದ ಬಗ್ಗೆ ಜಯಕೃಷ್ಣ ಶೆಟ್ಟಿಯವರನ್ನು ಅಭಿನಂದಿಸುತ್ತೇನೆ. ಜಾರ್ಜ್ ರವರ ಬಗ್ಗೆ ಇದೀಗ ಹೆಚ್ಚಿನ ಮಾಹಿತಿ ಪಡೆಯುವ ಅವಕಾಶ ಸಮಿತಿಯಿಂದ ದೊರಕಿದೆ.
– ಶೇಖರ್ ಗುಜ್ಜರಬೆಟ್ಟು,
****
ಇಂದಿನ ವಿಷಯ ಬಹಳ ಮಹತ್ವಪೂರ್ಣವಾಗಿದ್ದು ನಮ್ಮ ಸಮಿತಿಯು ಅವರ ಮಾರ್ಗದರ್ಶನದಲ್ಲಿ ಮುಂದುವರಿದ ಕಾರಣ ಈ ತನಕ ಸಮಿತಿಯು ಕೈಗೊಂಡ ಯಾವುದೇ ಕೆಲಸದಲ್ಲಿ ವಿಫಲವಾಗಿಲ್ಲ. ಆದುದರಿಂದ ಸಮಿತಿಯ ಈ ನಿರ್ಧಾರ ಬೇಗನೆ ಪೂರ್ಣಗೊಳ್ಳಲಿ.
– ಪ್ರೊಫೆಸರ್ ಶಂಕರ್ ಉಡುಪಿ, ಸಮಿತಿಯ ಗೌರವ ಕಾರ್ಯದರ್ಶಿ
*****
ಜಾರ್ಜ್ ಫೆರ್ನಾಂಡಿಸ್ ರ ಮಹಾನ್ ವ್ಯಕ್ತಿತ್ವದ ಬಗ್ಗೆ, ನಮ್ಮ ಸಮಿತಿ ಹಾಗೂ ಜಾರ್ಜ್ ರವರ ನಿಕಟವರ್ತಿಗಳಿಂದ ಮಾಹಿತಿ ಪಡೆದು ಪುಸ್ತಕ ರಚಿಸಿದ್ದೇನೆ. ಇಂದು ಕಾರಣಾಂತರದಿಂದ ಬಿಡುಗಡೆ ಮಾಡಲಾಗಲಿಲ್ಲ.ಆದಷ್ಟು ಬೇಗನೆ ಪುಸ್ತಕವನ್ನು ಬಿಡುಗಡೆಗೊಳಿಸಲಿರುವೆವು.
– ಸುರೇಖಾ ದೇವಾಡಿಗ, ಲೇಖಕಿ, ಮುಂಬಯಿ.
********
ಜಾರ್ಜ್ ಫೆರ್ನಾಂಡಿಸ್ ರನ್ನು ಹತ್ತಿರದಿಂದ ನೋಡಿದ್ದು,ಅವರ ಬಗ್ಗೆ ಸಮಿತಿಯು ಕೈಗೊಂಡ ನಿರ್ಣಯ ಅಭಿನಂದನೀಯ.
– ಕೇಶವ ಆಳ್ವ,
**********
ವರದಿ : ಈಶ್ವರ ಎಂ. ಐಲ್ / ದಿನೇಶ್ ಕುಲಾಲ್
Click this button or press Ctrl+G to toggle between Kannada and English