ವಿವಿ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ

8:07 PM, Saturday, June 5th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

vishwar-parisara-dinaಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ʼವಿಶ್ವ ಪರಿಸರ ದಿನಾಚರಣೆʼ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಭಾಗವಾಗಿ ಪಿಲಿಕುಳ ಅಭಿವೃದ್ಧಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಠೆ ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆ ಮತ್ತು ಅದರ ಪ್ರಾಮುಖ್ಯತೆಯನ್ನು ಕುರಿತು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯಾ ರೈ, ನಮ್ಮ ವಾತಾವರಣವನ್ನು ಶುದ್ಧವಾಗಿ ಮತ್ತು ಹಸಿರಾಗಿಡುವುದು ನಮ್ಮ ಕರ್ತವ್ಯ, ಎಂದರು.

ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶೋಭಾ ಮಾತನಾಡಿ, ʼವಿಶ್ವ ಪರಿಸರ ದಿನಾಚರಣೆʼಯ ಹೆಸರಲ್ಲಿ ವಿಶ್ವದೆಲ್ಲೆಡೆ ಸಸಿಗಳನ್ನು ನೆಡುತ್ತಿರುವುದು ಅತ್ಯಂತ ಸ್ವಾಗತಾರ್ಹ, ಎಂದರು. ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ಧರಾಜು ಎಂ ಎನ್‌, ಪರಿಸರ ರಕ್ಷಣೆ ನಮ್ಮ ಹೊಣೆಯಲ್ಲ, ಈಗ ಅನಿವಾರ್ಯತೆ, ಎಂದು ಅಭಿಪ್ರಾಯಪಟ್ಟರು. ಕಾಲೇಜಿನ ಆವರಣದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದಗಳಿಗೆ ಸೇರಿದ ಮೂರು ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳು ತಮ್ಮ ಮನೆಯಾವರಣದಲ್ಲಿ ಗಿಡನೆಟ್ಟು ಸಂಭ್ರಮಿಸಿದರು.

vishwar-parisara-dina

vishwar-parisara-dina

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English