ಮಂಗಳೂರು : ಎಂಆರ್ ಪಿಎಲ್ ಉದ್ಯೋಗ ನೇಮಕಾತಿಯಲ್ಲಿತುಳುವರಿಗೆ ಅನ್ಯಾಯ ಆಗಿದೆ ಎಂದು ಸಮಾನ ಮನಸ್ಕ ಸಂಘಟನೆಗಳು “ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕುಲೆಗ್ ಮಲ್ಲಪಾಲ್” ಎಂಬ ವಿಷಯಗಳನ್ನು ಮುಂದಿಟ್ಟು ಮನೆ ಮನೆ ಪ್ರತಿಭಟನೆ ಗೆ ಕರೆ ನೀಡಿದ್ದವು. ಈ ಕರೆಗೆ ಅವಳಿ ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲಸಿಕ್ಕಿದೆ. ಡಿವೈಎಫ್‍ಐ ನೇತೃತ್ವದ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಯುವ ಕಾಂಗ್ರೆಸ್, ಯುವ ಜನತಾ ದಳ, ದಲಿತ ಸಂಘರ್ಷ ಸಮಿತಿಯ ವಿವಿಧ ಬಣಗಳು, ಕಾರ್ಮಿಕ, ಮಹಿಳಾ ಸಂಘಟನೆಗಳು ಮಾತ್ರ ವಲ್ಲದೆ ಜಿಲ್ಲೆಯ ವಿವಿಧ ಯುವಕ ಮಂಡಲಗಳು, ಕ್ರೀಡಾ ತಂಡಗಳು, ಸಾಮಾಜಿಕ ಜಾಲತಾಣದ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ.
ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ನಗರ, ಉಳ್ಳಾಲ, ಮೂಡಬಿದ್ರೆ ಭಾಗಗಳಲ್ಲಿ ವ್ಯಾಪಕವಾಗಿ ಪ್ರತಿಭಟನೆಗಳು ಮನೆ ಮನೆಯಲ್ಲಿ ನಡೆದವು. ಎಂ ಆರ್ ಪಿ ಎಲ್ ಹಾಗೂ ಕೈಗಾರಿಕಾ ಕೇಂದ್ರಗಳಿಗೆ ಹತ್ತಿರ ಇರುವ ಕಂಪೆನಿಯ ಸುತ್ತಲಿನ ಸುರತ್ಕಲ್,ಬಜಪೆ, ಕಾವೂರು, ಕಟೀಲು ಹೋಬಳಿಗಳಲ್ಲಿ ಮತ್ತಷ್ಟು ತೀವ್ರವಾಗಿ ಪ್ರತಿಭಟನೆಗಳು ನಡೆದಿದ್ದು ಸಾವಿರಾರು ಜನ ಮನೆಮನೆ ಪ್ರತಿಭಟನೆ ನಡೆಸಿದರು.
ತುಳುನಾಡು ಸೇರಿದಂತೆ ಕನ್ನಡಿಗರನ್ನು ಹೊರಗಿಟ್ಟಿರುವುದನ್ನು ಖಂಡಿಸಿ ತುಳುನಾಡಿನ ಉದ್ಯಮಗಳಲ್ಲಿ ತುಳುವರಿಗೆ ದೊಡ್ಡ ಪಾಲು ಸಿಗಬೇಕು, ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು ಎಂದು ಒತ್ತಾಯಿಸಿ ತುಳುನಾಡಿನ ಸಮಾನ ಮನಸ್ಕ ಸಂಘಟನೆಗಳು ಕರೆ ನೀಡಿದ್ದ “ಮನೆ ಮನೆ ಪ್ರತಿಭಟನೆ” ಅಭೂತಪೂರ್ವ ಯಶಸ್ಸು ಕಂಡಿದೆ.
Click this button or press Ctrl+G to toggle between Kannada and English