ಪಿಲಿಕುಳದ ಮೃಗಾಲಯದಲ್ಲಿ ಹಾವು ಸೇರಿ ಆರು ಪ್ರಾಣಿ ಪಕ್ಷಿಗಳ ಸಂತಾನಾಭಿವೃದ್ಧಿ

2:29 PM, Sunday, June 6th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Rani Huliಮಂಗಳೂರು : ಪಿಲಿಕುಳದ ಮೃಗಾಲಯದಲ್ಲಿ ರಾಣಿ ಹುಲಿ, ಕಾಡುಶ್ವಾನ ‘ದೋಳ್‌’ , ‘ರಿಯಾ’ ಪಕ್ಷಿ, ‘ಲಟಿಕ್ಯುಲೇಟಿಡ್‌’ ಹೆಬ್ಬಾವು, ಕಾಳಿಂಗ ಸರ್ಪ ಇವು ಸಂತಾನಾಭಿವೃದ್ದಿಯನ್ನು ಮಾಡಿದೆ  ಪಿಲಿಕುಳ ಜೈವಿಕ ಉದ್ಯಾವನದ ನಿರ್ದೇಶಕ ಹೆಚ್. ಜಯಪ್ರಕಾಶ್ ಭಂಡಾರಿಯವರು ತಿಳಿಸಿದ್ದಾರೆ.

ಪಿಲಿಕುಳ ಮೃಗಾಲದಲ್ಲಿರುವ 10 ವರ್ಷ ಪ್ರಾಯದ ‘ರಾಣಿ’ ಹುಲಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಹಿಂದೆ 2019ರಲ್ಲಿ ರೇವಾ, ಸುಧಾ, ಜಯರಾಮ, ಸಂಜಯ ಮತ್ತು ವಿಜಯ ಎಂಬ 5 ಮರಿಗಳಿಗೆ ಜನ್ಮ ನೀಡಿದ್ದು, ಅದು ಈಗ ಬೆಳೆದು ದೊಡ್ಡದಾಗಿವೆ. ಈಗ ಜನಿಸಿದ ಮರಿಗಳು ಆರೋಗ್ಯವಾಗಿದ್ದು ಇನ್ನು 16 ದಿನಗಳಲ್ಲಿ ಕಣ್ಣು ತೆರೆಯಲಿವೆಯಂತೆ.

ರಾಣಿ ಹುಲಿಯನ್ನು ಪ್ರಾಣಿ ವಿನಿಮಯ ಕಾರ್ಯದಡಿ ಬನೇರುಘಟ್ಟ ಮೃಗಾಲಯಕ್ಕೆ ಪಿಲಿಕುಲದ ಒಂದು ಗಂಡು ಹುಲಿಯನ್ನು ನೀಡಿ ಬದಲಿಗೆ ರಾಣಿಯನ್ನು ಕರೆತರಲಾಗಿತ್ತು, ಸದ್ಯ ಈಗ ಪಿಲಿಕುಲದಲ್ಲಿ ಹುಲಿಗಳ ಸಂಖ್ಯೆ 13 ಕ್ಕೆ ಏರಿದೆ.

wild Dogಆಂದ್ರ ಪ್ರದೇಶದ ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾದ ಅಳಿವಿನಂಚಿನಲ್ಲಿರುವ ಕಾಡು ಶ್ವಾನಗಳ ವರ್ಗಕ್ಕೆ ಸೇರಿದ ‘ದೋಳ್‌’ ಇತ್ತೀಚಿಗೆ ಏಳು ಮರಿಗಳಿಗೆ ಜನ್ಮ ನೀಡಿದೆ. ಇದೆ ‘ದೋಳ್‌” ಈ ಹಿಂದೆ 5 ಮರಿಗಳಿಗೆ ಜನ್ಮ ನೀಡಿತ್ತು. ಮೃಗಾಲಯದಲ್ಲಿರುವ ಇನ್ನೊಂದು ‘ದೋಳ್‌ ಹತ್ತು ಮರಿಗಳಿಗೆ ಜನ್ಮ ನೀಡಿತ್ತು. ಪಿಲಿಕುಲದಲ್ಲಿ “ದೋಳ್‌” ಕಾಡು ಶ್ವಾನಗಳ ಸಂಖ್ಯೆ 32ಕ್ಕೆ ಏರಿದೆ.

ಉಷ್ಟ್ರಪಕ್ಷೀಯ ವರ್ಗಕ್ಕೆ ಸೇರಿದ ಬಿಳಿ ರಿಯಾವು ಮೊಟ್ಟೆಗಳನಿಟ್ಟಿದ್ದು. ಅವುಗಳಿಗೆ ಪ್ರಯೋಗಾಲಯದಲ್ಲಿ ಕೃತಕ ಕಾವು ಕೊಡಲಾಗುತ್ತಿದ್ದು , ಅದರಲ್ಲಿ ಈಗಾಗಲೇ ಒಂದು ಬಿಳಿ ರಿಯಾ ಮರಿಯು ಜನ್ಮ ತಾಳಿದೆ.

ಅಪರೂಪದ ಅಳಿವಿನಂಚಿನಲಿರುವ ‘ರೆಟಿಕ್ಕುಲೇಟೆಡ್‌’ ಹೆಬ್ಬಾವು ಸುಮಾರು 20 ಮೊಟ್ಟೆಗಳನಿಟ್ಟು ಕಾವು ನೀಡುತ್ತಿದೆ. ಇದೇ ಹೆಬ್ಬಾವು ಕಳೆದ ಸಾಲಿನಲ್ಲಿ 17 ಮರಿಗಳಿಗೆ ಜನ್ಮ ನೀಡಿದೆ. ರೆಟಿಕ್ಯುಲೇಟೆಡ್‌ ಹೆಬ್ಬಾವು ನಿಕೊಬಾರ್‌ನಲ್ಲಿ ಕಾಣಸಿಗುವ ಹಾವುಗಳು.

Pythonದೇಶದಲ್ಲೇ ಪ್ರಥಮಬಾರಿ ವೈಜ್ಞಾನಿಕವಾಗಿ ಕಾಳಿಂಗಗಳ ಸಂತಾನಾಭಿವೃದಿ ಪಡಿಸಿದ ಕೀರ್ತಿ ಪಿಲಿಕುಳ ಮೃಗಾಲಯಕ್ಕೆ ಸಲ್ಲುತ್ತದೆ. ಈಗ ಕಾಳಿಂಗ ‘ನಾಗಮಣಿ’ ಯು ಆರು ಮೊಟ್ಟೆಗಳನ್ನು ಇಟ್ಟಿದ್ದು ಅವುಗಳಿಗೆ ಕೃತಕ ಕಾವು ಕೊಡಲಾಗುತ್ತಿವೆ. ಪಿಲಿಕುಳದಲ್ಲಿ ಒಟ್ಟು 19 ಕಾಳಿಂಗ ಸರ್ಪಗಳಿವೆ.

“ಲಾಕ್‌ಡೌನ್ ಬಳಿಕ ಪ್ರಾಣಿ ವಿನಿಮಯದಲ್ಲಿ ಚೆನ್ನೈ ನ ವಂಡಲೂರು ಮೃಗಾಲಯದಿಂದ ಬಿಳಿ ಹುಲಿಯನ್ನು ತರಿಸಲಾಗುವುದು. ಒರಿಸ್ಸಾದ ನಂದನಕಾನನ್, ಸೂರತ್, ಮತ್ತು ಹೈದರಾಬಾದ್ ಮೃಗಾಲಯದಿಂದ ಕೆಲವು ಪ್ರಾಣಿ ಪಕ್ಷಿಗಳನ್ನು ತರುವ ಬಗ್ಗೆ ಯೋಜನೆ ಕೈಗೊಳ್ಳಲಾಗಿದೆ” ಎಂದು ಪಿಲಿಕುಲ ಜೈವಿಕ ಉದ್ಯಾನವನದ ನಿರ್ದೇಶಕ ಹೆಚ್. ಜೆ. ಭಂಡಾರಿ ತಿಳಿಸಿದ್ದಾರೆ.

Riya

RaniHuli

Wild Dog

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English