ಮಂಗಳೂರು : ಯುವ ಸಂಗೀತಗಾರ ಹರಿಕಿರಣ ಹೆಚ್ ಮತ್ತು ತಂಡದವರಿಂದ ಕನ್ನಡದ ಜೋಗುಳ ಹಾಡುಗಳ ಸಾಲಿಗೆ ಹೊಸದೊಂದು ಸೇರ್ಪಡೆ “ತೊಟ್ಟಿಲಲಿ”. ನಿನ್ನೆ ಹರಿಕಿರಣ ಹೆಚ್ ಮ್ಯೂಸಿಕ್ ಯುಟ್ಯೂಬ್ ಚಾನೆಲ್ ಮುಖಾಂತರ ತೆರೆಕಂಡ “ತೊಟ್ಟಿಲಲಿ” ಹಾಡು ಕೇಳುಗರ ಮನ ಮೆಚ್ಚಿದೆ. ತಮ್ಮ ಮೊದಲ ಪ್ರಯತ್ನದಲ್ಲೇ ಹಾಡು ಬಿಡುಗಡೆಯಾದ ಒಂದು ದಿನದೊಳಗೆ ಸಾವಿರಾರು ಜನ ವೀಕ್ಷಿಸಿರುವುದು ಸಾಕ್ಷಿಯಾಗಿದೆ. ಜಿಯೋ ಸಾವನ್, ಗಾನ, ಆಪಲ್ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್, ವಿಂಕ್ ಮ್ಯೂಸಿಕ್ ಮುಂತಾದ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ ಗಳಲ್ಲಿಯೂ ಈ ಹಾಡು ಲಭ್ಯವಿದೆ.
ಪ್ರತಿಭಾವಂತ ಗಾಯಕಿ ವೈಷ್ಣವಿ ರವಿ ಈ ಹಾಡನ್ನು ಹಾಡಿದ್ದಾರೆ.ಇವರು ಉದಯ ಟೀವಿ ಆಯೋಜಿಸಿದ “ಉದಯ ಸಿಂಗರ್” ೨೦೧೩ ರಲ್ಲಿ ಎರಡನೇ ಸ್ಥಾನವನ್ನು , ಜೀ ಸರಿಗಮಪ ಕನ್ನಡ ಸೀಸನ್ ೧೩ ರ ಮೊದಲ ಹದಿನೇಳರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಪೆನ್ಸಿಲ್ ಬಾಕ್ಸ್, ಮಾಲ್ಗುಡಿ ಡೇಸ್, ದಿ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ, ಮೊದಲಾದ ಕನ್ನಡ ಚಲನಚಿತ್ರಗಳಿಗೆ ಹಿನ್ನಲೆ ಗಾಯನ ಮಾಡಿದ್ದರೆ. ಅನುಪಮ ಕೀರಿಕ್ಕಾಡು ಅವರು ಮೂಲತಃ ದಂತ ವೈದ್ಯೆ ಯಾಗಿದ್ದು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ . ಹರಿಕಿರಣ ಹೆಚ್ ಸಂಗೀತ ನೀಡಿದ್ದಾರೆ. ವೀಡಿಯೋ ಸಂಕಲನ ಮತ್ತು ನಿರ್ದೇಶನವನ್ನು ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿರುವ ಮೋಹಿತ್ ಸದಾಶಿವ್ ನಿರ್ವಹಿಸಿದ್ದಾರೆ. ಸ್ವಾತಿ ಕೆ.ವಿ ಮತ್ತು ಶಕುಂತಲಾ ಸಿ.ಹೆಚ್ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಜೋಗುಳ ಹಾಡುಗಳು ಅಮ್ಮ ಮತ್ತು ಮಗುವಿನ ನಡುವಿನ ಭಾವನಾತ್ಮಕ ಸಂಬಂಧವನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಶೇಷ ಪಾತ್ರವಹಿಸುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಹೊಸ ಲಾಲಿಹಾಡುಗಳ ಬರವನ್ನು ನೀಗಿಸುವತ್ತ “ತೊಟ್ಟಿಲಲಿ” ಹಾಡು ಕೊಡುಗೆ ನೀಡುತ್ತದೆ ಎಂದು ನಂಬಿದ್ದೇವೆ. ಹಾಡನ್ನು ಕೇಳಿ ಆನಂದಿಸಿ ತಮ್ಮ ಅಭಿಪ್ರಾಯ ಹಾಗೂ ಪ್ರೋತ್ಸಾಹವನ್ನು ಬಯಸುತ್ತೇವೆ ಎಂದು ಆಲ್ಬಂ ಹಾಡಿನ ತಂಡ ಕೋರಿದೆ.
Click this button or press Ctrl+G to toggle between Kannada and English