ಮಂಗಳೂರು : ಕರಾವಳಿಯಲ್ಲಿ ಸೋಮವಾರ ರಾತ್ರಿ ಕ್ರಿಸ್ತನ ಜನ್ಮ ಸಂಭ್ರಮವನ್ನು ಆಚರಿಸಲಾಯಿತು. ಕ್ರೈಸ್ತ ಬಾಂಧವರು ಸೋಮವಾರ ಮಧ್ಯರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪೂಜೆ, ಪ್ರಾರ್ಥನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸ್ವಾಗತಿಸಿದರು.
ಮಂಗಳವಾರ ಮಂಗಳೂರಿನ ಮಿಲಾಗ್ರಿಸ್ ಚರ್ಚ್, ಬೆಂದೂರ್‌ವೆಲ್, ಬಿಜೈ, ಲೇಡಿಹಿಲ್, ಕೋಡಿಕಲ್, ಕೂಳೂರು, ಬೊಂದೆಲ್, ದೇರೆಬೈಲ್, ಕುಲಶೇಖರ, ಉರ್ವ, ಪಾಲ್ದನೆ, ವಾಮಂಜೂರು, ಪೆರ್ಮನ್ನೂರು, ಕುತ್ತಾರುಪದವು, ಕೋಡಿಕಲ್ ಮುಂತಾದ ಚರ್ಚ್‌ಗಳಲ್ಲಿ ಸಹಸ್ರಾರು ಕ್ರೈಸ್ತ ಬಾಂಧವರು ಸೇರಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು, ಚರ್ಚ್‌ಗಳನ್ನು ದೀಪಗಳಿಂದ ಅಲಂಕರಿಸಲಾಗಿದ್ದು, ಎಲ್ಲರೂ ಪರಸ್ಪರ ಸಿಹಿತಿನಿಸುವ, ಕ್ರಿಸ್ಮಸ್‌ನ ವಿಶೇಷ ತಿಂಡಿಗಳನ್ನು, ಶುಭಾಶಯಗಳನ್ನು ಹಂಚಿಕೊಳ್ಳುವ ಮೂಲಕ ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡರು. ನಗರದ ನಾನಾ ಮಳಿಗೆಗಳು, ಮಾಲ್‌ಗಳಲ್ಲಿ ಕೇಕ್ ಮತ್ತು ಕ್ರಿಸ್‌ಮಸ್ ತಿಂಡಿಗಳು ಗ್ರಾಹಕರನ್ನು ಸೆಳೆಯುತ್ತಿದ್ದವು. ಸಾಂತಾಕ್ಲಾಸ್ ಧಿರಿಸು ತೊಟ್ಟ ಕ್ರೈಸ್ತ ಬಾಂಧವರು ಎಲ್ಲೆಡೆ ಕಂಡು ಬಂದರು. ಎಲ್ಲಾ ಚರ್ಚ್ ಗಳಲ್ಲಿ ಹಾಗೂ ಕೆಲವು ಮನೆಗಳಲ್ಲಿ ಕ್ರಿಸ್ತನ ಜನ್ಮ ಸಂದರ್ಭವನ್ನು ನೆನಪಿಸುವಂತಹ ಗೋದಲಿಗಳನ್ನು ನಿರ್ಮಿಸಲಾಗಿತ್ತು.
Click this button or press Ctrl+G to toggle between Kannada and English