ಕೋವಿಡ್ 19 ಸೊಂಕಿತರ ಪಾಲಿಗೆ ಧನ್ವಂತರಿ “ಆಯುಷ್ 64” ಈಗ ಕರ್ನಾಟಕದಲ್ಲಿ

8:13 PM, Monday, June 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

ayush 64ಮಂಗಳೂರು  :  ಭಾರತ ಸರಕಾರದ ಆಯುಷ್ ಇಲಾಖೆ ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ ಹಾಗೂ ಸಿದ್ಧ ( ಸಿಸಿಆರ್ ಎಎಸ್) ಈ ಎರಡು ಸಂಸ್ಥೆಗಳು ನಡೆಸಿದ ಸಂಶೋಧನೆಯ ಫಲದಿಂದ ಸಿಕ್ಕಿರುವ ಹೊಸ ಔಷಧ ಕೋವಿಡ್ 19 ಸೊಂಕಿತ ವ್ಯಕ್ತಿಗಳಲ್ಲಿ ಹಾಗೂ ಆಯುರ್ವೇದ ವೈದ್ಯರಲ್ಲಿ ಹೊಸ ಆಶಾಕಿರಣವನ್ನು ಉಂಟುಮಾಡಿದೆ.

ಆಯುಷ್ ಇಲಾಖೆ ಹಾಗೂ ಸಿಸಿಆರ್ ಎಎಸ್ ಸಂಸ್ಥೆ ಕೋವಿಡ್ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಚಿಕಿತ್ಸೆಗೆ ಒಳಗಾಗಿರುವ ವಿವಿಧ ಕೋವಿಡ್ ಸೊಂಕಿತರಿಗೆ ಅಲೋಪತಿ ಹಾಗೂ ಆಯುರ್ವೇದ ಔಷಧಗಳನ್ನು ನೀಡಿ ಪರೀಕ್ಷೆಗೆ ಒಳಪಡಿಸಿದ್ದವು. ಕೋವಿಡ್ ಸೋಂಕಿತರಲ್ಲಿ ಯಾರು ಅಲೋಪತಿ ಹಾಗೂ ಆಯುರ್ವೇದ ಔಷಧಗಳನ್ನು ತೆಗೆದುಕೊಂಡಿದ್ದಾರೋ ಅವರನ್ನು ಸೂಕ್ಷ್ಮವಾಗಿ ಗಮನಿಸಲಾಗಿತ್ತು. ಹಾಗೆ ಸಂಶೋಧನೆಗಳನ್ನು ನಡೆಸಿದ ನಂತರ  ಕೋವಿಡ್ 19 ಸಾಂಕ್ರಾಮಿಕ ರೋಗ ಬಂದಿರುವ ಆದರೆ ಲಕ್ಷಣಗಳನ್ನು ಇಲ್ಲದ ಅಥವಾ ಸಣ್ಣ ಪ್ರಮಾಣದ ಲಕ್ಷಣಗಳನ್ನು ಹೊಂದಿರುವ ಜನರಿಗೆ ಆಯುರ್ವೇದ ಶಾಸ್ತ್ರದ ಆಯುಷ್ 64 ಎನ್ನುವ ಔಷಧ ನೀಡಿದ್ದು ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎನ್ನುವುದು ಸಾಬೀತಾಗಿದೆ. ಇದರ ನಂತರ ಗುಜರಾತಿನ ಅಹಮದಾಬಾದ್, ಗಾಂಧಿನಗರ, ವಡೋದರ, ಭಾವನಗರ, ಜುನಾಘಡ್, ಸೂರತ್, ನರ್ಮದಾ ಹಾಗೂ ವಲಸಾಡ್ ನ ಅನೇಕ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಆಯುಷ್ 64 ಮಾತ್ರೆಗಳನ್ನು ವ್ಯಾಪಕವಾಗಿ ರೋಗಿಗಳಿಗೆ ನೀಡಲಾಗಿದೆ. ಆ ಬಳಿಕ ಭಾರತದ ವಿವಿಧ ಭಾಗಗಳಲ್ಲಿ ಆಯುಷ್ 64 ಮಾತ್ರೆಗಳನ್ನು ಕೋವಿಡ್ ಸೋಂಕಿತರಿಗೆ ನೀಡುವ ಮೂಲಕ ಅಂತವರಲ್ಲಿ ಕಾಯಿಲೆ ತ್ವರಿತವಾಗಿ ಗುಣವಾಗುತ್ತಿರುವುದನ್ನು ಕಾಣಬಹುದು ಎಂದು ಭಾರತಾದ್ಯಂತ ವೈದ್ಯರೇ ಒಪ್ಪಿರುವುದು ನಿಜಕ್ಕೂ ಕೊರೊನಾ ಸೋಂಕಿತರಲ್ಲಿ ಉತ್ಸಾಹದ ಭಾವನೆಯನ್ನು ಮೂಡಿಸಿದೆ. ಈಗಾಗಲೇ ಭಾರತದ ವಿವಿಧ ರಾಜ್ಯಗಳಲ್ಲಿ ಆಯುಷ್ 64 ಆಯುರ್ವೇದ ಔಷಧ ಈಗಾಗಲೇ ಬಳಕೆಯಲ್ಲಿದ್ದು ಕರ್ನಾಟಕದಲ್ಲಿ ಆಯುಷ್ 64 ಮಾತ್ರೆಗಳ ಉತ್ಪಾದನೆಗೆ ಅನುಮತಿ ಸಿಕ್ಕಿದೆ. ಇಡೀ ರಾಷ್ಟ್ರದಲ್ಲಿ 9 ಕಂಪೆನಿಗಳಿಗೆ ಮಾತ್ರ ಈ ಔಷಧ ಉತ್ಪಾದನೆಗೆ ಲೈಸೆನ್ಸ್ ಸಿಕ್ಕಿದ್ದು, ಅದರಲ್ಲಿ ನಮ್ಮ ರಾಜ್ಯದ ಪ್ರಖ್ಯಾತ ಆಯುರ್ವೇದ ಉತ್ಪನ್ನಗಳ ಸಂಸ್ಥೆ ಎಸ್ ಡಿಪಿ ರೆಮಿಡಿಸ್ ಮತ್ತು ರಿಸರ್ಚ್ ಸೆಂಟರ್ ಇದು ಒಂದು ಎಂದು ಹೇಳಲು ಹೆಮ್ಮೆಯಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಉದಯಗಿರಿಯಲ್ಲಿರುವ ಎಸ್ ಡಿಪಿ ಆಯುರ್ವೇದ ಸಂಸ್ಥೆ ಖ್ಯಾತ ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜ ಅವರ ದೂರದೃಷ್ಟಿ ಹಾಗೂ ಜನಪರ ನಿಲುವಿನಿಂದ ಜನಮೆಚ್ಚುಗೆಯನ್ನು ಪಡೆದಿದೆ. ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಇದನ್ನು ವಿವೇಕ್ ಟ್ರೇಡರ್ಸ್ ಬಿಡುಗಡೆಗೊಳಿಸುತ್ತಿದೆ.

ಆಯುಷ್ 64 ಅನ್ನು ಈಗಾಗಲೇ ಪ್ರಯೋಗಾತ್ಮಕವಾಗಿ ಪರೀಕ್ಷೆಗೆ ಒಳಪಡಿಸಿದ್ದು, ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ದಾಖಲಾದವರು ಆಯುಷ್ 64 ಸೇವಿಸಿದ ಪರಿಣಾಮ ನಿರೀಕ್ಷೆಗಿಂತ ಶೀಘ್ರವಾಗಿ ಗುಣಮುಖರಾಗಿರುವುದು ವೈದ್ಯರಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸಿದೆ. ಇಷ್ಟೇ ಅಲ್ಲ, ಆಯುಷ್ 64 ಔಷಧ ಸೇವಿಸಿದವರು ನಿದ್ರಾಹೀನತೆ, ಮಾನಸಿಕ ಒತ್ತಡ, ಆತಂಕ, ಆಯಾಸ, ಸಾಮಾನ್ಯ ಅನಾರೋಗ್ಯದಿಂದ ಮುಕ್ತಿಗೊಂಡು ಲವಲವಿಕೆಯಿಂದ ಕಂಗೊಳಿಸುತ್ತಿರುವುದನ್ನು ವೈದ್ಯರೇ ಸಾಬೀತುಪಡಿಸಿದ್ದಾರೆ. ಆಯುಷ್ 64 ಇದರ ಗುಣಮಟ್ಟದ ಬಗ್ಗೆ ಹೈದ್ರಾಬಾದಿನಲ್ಲಿರುವ ನ್ಯಾಶನಲ್ ಇನ್ಸಿಟ್ಯೂಟ್ ಆಫ್ ನ್ಯೂಟ್ರಿಶಿಯನ್ (ಐಸಿಎಂಆರ್) ನಲ್ಲಿ ಸಂಶೋಧನೆ ನಡೆದಿದೆ. ಕೋವಿಡ್ 19 ಸಾಮಾನ್ಯ ಲಕ್ಷಣ ಇರುವ ವ್ಯಕ್ತಿಗಳಿಗೆ ಆಯುಷ್ 64 ಮಾತ್ರೆಗಳು ಗುಣಮುಖರಾಗಲು ಸಾಕು ಎಂದು ಪ್ರಯೋಗಗಳಿಂದ ಸಾಬೀತಾಗಿದೆ. ಆದರೆ ಅಂತಹ ವ್ಯಕ್ತಿಗಳು ವೈದ್ಯರ ಸಲಹೆಯೊಂದಿಗೆ ಮಾತ್ರೆಗಳನ್ನು ಸೇವಿಸತಕ್ಕದ್ದು. ಅದರೊಂದಿಗೆ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು. ಆಯುಷ್ 64 ಮಾತ್ರೆಗಳನ್ನು ಹದಿನಾಲ್ಕು ದಿನಗಳ ತನಕ ತೆಗೆದುಕೊಳ್ಳಬೇಕಾಗುತ್ತದೆ. ಅಗತ್ಯ ಇದ್ದರೆ ಒಂದು ತಿಂಗಳ ಕಾಲ ತೆಗೆದುಕೊಳ್ಳಬಹುದು. ಯಾವುದೇ ಲಕ್ಷಣಗಳಿಲ್ಲದ ಕೋವಿಡ್ 19 ವ್ಯಕ್ತಿಗಳು ಎರಡು ಮಾತ್ರೆಯಂತೆ ದಿನಕ್ಕೆ ಎರಡು ಸಲ 20 ದಿನ ಪ್ರತಿದಿನ ಆಹಾರ ಸೇವಿಸಿದ ಒಂದು ಗಂಟೆಯ ನಂತರ ನೀರಿನೊಂದಿಗೆ ಸೇವಿಸಬೇಕು. ಕೋವಿಡ್ 19 ಸಾಮಾನ್ಯ ಲಕ್ಷಣಗಳಿರುವ ಜನರು ಎರಡು ಮಾತ್ರೆಯಂತೆ ದಿನಕ್ಕೆ ಮೂರು ಸಲ 20 ದಿನ ಆಹಾರ ಸೇವಿಸಿದ ಒಂದು ಗಂಟೆಯ ನಂತರ ನೀರಿನೊಂದಿಗೆ ಸೇವಿಸಬೇಕು. ಇನ್ನು ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಅಗತ್ಯವಿರುವ ಔಷಧಿಗಳೊಂದಿಗೆ ಆಯುಷ್ 64 ಮಾತ್ರೆಯನ್ನು ತೆಗೆದುಕೊಳ್ಳಬಹುದು. ಇನ್ನು ಮುಖ್ಯವಾಗಿ ವ್ಯಾಕ್ಸಿನೇಶನ್ ಪಡೆದವರು ಕೋವಿಡ್ 19 ಪಾಸಿಟಿವ್ ಆದರೆ ಸಂಬಂಧಿಸಿದ ವೈದ್ಯರಿಗೆ, ಅಧಿಕಾರಿಗಳಿಗೆ ತಿಳಿಸಿ ಮಾತ್ರೆಗಳನ್ನು ಸೇವಿಸಬಹುದು. ಆಯುಷ್ 64 ಎಲ್ಲಾ ಮೆಡಿಕಲ್ ಶಾಪ್ ಗಳಲ್ಲಿ ಸಿಗುತ್ತದೆ. ಆದರೆ ಆಯುರ್ವೇದ ವೈದ್ಯರ ಅನುಮತಿಯೊಂದಿಗೆ ಸೇವಿಸಬೇಕು.
Ayush
ಆಯುಷ್ 64 ಬಗ್ಗೆ ರಾಷ್ಟ್ರದ 9 ಕಡೆ ಕ್ಲಿನಿಕಲ್ ಅಧ್ಯಯನ ಪ್ರಯೋಗಗಳು ಆಗಿವೆ. ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾನಿಲಯ, ದತ್ತ ಮೆಘೆ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ವಾರ್ದಾ, ಮುಂಬೈ ಬಾಂಬೆ ಮುನ್ಸಿಪಲ್ ಕಾರ್ಪೋರೇಶನ್, ಚಂಡಿಗಢದ ಶ್ರೀ ಧನ್ವಂತರಿ ಆಯುರ್ವೇದಿಕ್ ಕಾಲೇಜು, ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈಯನ್ಸ್ ಜೋಧಪುರ, ಗುರು ಗೋವಿಂದ ಸಿಂಗ್ ಸರಕಾರಿ ಮೆಡಿಕಲ್ ಆಸ್ಪತ್ರೆ ಜಾಮ್ ನಗರ, ಸರಕಾರಿ ಮೆಡಿಕಲ್ ಕಾಲೇಜು ನಾಗಪುರ, ಆಯುರ್ವೇದ ಮತ್ತು ಯುನಾನಿ ಟಿಬಿಯಾ ಕಾಲೇಜು, ನ್ಯೂಡೆಲ್ಲಿ, ಚೌಧರಿ ಬ್ರಾಹ್ಮಂ ಪ್ರಕಾಶ್ ಆಯುರ್ವೇದ ಚರಕ್ ಸಂಸ್ಥಾನ್, ನ್ಯೂಡೆಲ್ಲಿ ಇಲ್ಲೆಲ್ಲ ತಜ್ಞರಿಂದ ಉತ್ತಮ ಔಷಧ ಎಂದು ಮಾನ್ಯಗೊಂಡಿದೆ. ಈ ಎಲ್ಲಾ ಅಧ್ಯಯನ ಪ್ರಯೋಗಗಳನ್ನು ಡಿಎಸ್ ಎಂಬಿಯ ತೀವ್ರ ನಿಗಾದಲ್ಲಿ ನಡೆಸಲಾಗಿದ್ದು, ಕೋವಿಡ್ 19 ಅಗತ್ಯದ ಔಷಧ ಸಂಶೋಧನೆಯಲ್ಲಿ ನಿರತವಾಗಿರುವ ಆಯುಷ್ ಇದರ ತಜ್ಞರಿಂದ ಐಸಿಎಂಆರ್ ಇದರ ಮಾಜಿ ಡೆಪ್ಯೂಟಿ ಡೈರೆಕ್ಟರ್ ಜನರಲ್ ಹಿರಿಯ ಶ್ರೇಣಿಯವರಾದ ಡಾ.ನಂದಿನಿ ಕೆ ಕುಮಾರ್ ಅವರು ಮೇಲ್ವಿಚಾರಣೆಯಲ್ಲಿ ನಡೆದಿವೆ. ಈ ಆಯುಷ್ 64 ಮಾತ್ರೆ ಕೋವಿಡ್ 19 ರ ಮುಖ ಲಕ್ಷಣವಾಗಿರುವ ಜ್ವರವನ್ನು ನಿಯಂತ್ರಣಕ್ಕೆ ತರುತ್ತದೆ. ಅದರೊಂದಿಗೆ ಕೆಮ್ಮು, ಶೀತ, ನೆಗಡಿ ಮತ್ತು ತಲೆನೋವನ್ನು ಶಮನಮಾಡುತ್ತದೆ.

ಆಯುಷ್ 64 ಮಾತ್ರೆ ಕೋವಿಡ್ 19 ಲಕ್ಷಣಗಳಿಲ್ಲದ ಅಥವಾ ಸಣ್ಣಮಟ್ಟಿಗಿನ ಲಕ್ಷಣ ಇರುವ ವ್ಯಕ್ತಿಗಳ ಪಾಲಿಗೆ ರಾಮಬಾಣವಾಗಿದ್ದು, ಕರ್ನಾಟಕದ ಸುಪ್ರಸಿದ್ಧ ಆಯುರ್ವೇದ ಉತ್ಪನ್ನಗಳ ತಯಾರಿಕಾ ಸಂಸ್ಥೆ ಎಸ್ ಡಿಪಿ ಆಯುರ್ವೇದ ಹಾಗೂ ಇದರ ಮುಖ್ಯಸ್ಥರಾದ ಡಾ.ಹರಿಕೃಷ್ಣ ಪಾಣಾಜೆ ಮತ್ತು ಆಯುರ್ವೇದ ಉತ್ಪನ್ನಗಳ ರಖಂ ಹಾಗೂ ಬಿಡಿ ಮಾರಾಟ ಸಂಸ್ಥೆ ವಿವೇಕ್ ಟ್ರೇಡರ್ಸ್ ಹಾಗೂ ಆಯುರ್ ವಿವೇಕ್ ಮಾರುಕಟ್ಟೆಗೆ ತಂದಿದೆ ಎಂದು ಸಂಸ್ಥೆಯ ಪ್ರವರ್ತಕರಾದ ಮಂಗಲ್ಪಾಡಿ ನರೇಶ್ ಶೆಣೈ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English