ಗ್ರಾಂಥಿಕ ರೂಪ ಪಡೆದಾಗ ಸಾಹಿತ್ಯದಲ್ಲಿ ಭಾಷಾ ಶುದ್ಧತೆ ಮುಖ್ಯ’ : ಗುಣಾಜೆ ರಾಮಚಂದ್ರ ಭಟ್

10:12 PM, Monday, June 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

gunajeಮಂಗಳೂರು : ‘ಭಾಷೆ ನಿಂತ ನೀರಾಗಬಾರದು ಚಲನಶೀಲ ಹೊಳೆಯಾಗಿರಬೇಕು.ವ್ಯಾಕರಣವು ಉಚ್ಚಾರ ದೋಷಗಳಿಗೆ ಚಿಕಿತ್ಸೆ ಇದ್ದ ಹಾಗೆ, ಗ್ರಾಂಥಿಕ ರೂಪ ಪಡೆದಾಗ ಸಾಹಿತ್ಯದಲ್ಲಿ ಭಾಷಾ ಶುದ್ಧತೆ ಅತೀ ಮುಖ್ಯ’ ಎಂದು ಹಿರಿಯ ಸಾಹಿತಿ ಗುಣಾಜೆ ರಾಮಚಂದ್ರ ಭಟ್ ಅವರು ಹೇಳಿದರು.

ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮಂಗಳೂರಿನಲ್ಲಿ ನಡೆದ ‘ಸಾಹಿತ್ಯದಲ್ಲಿ ಭಾಷಾ ಶುದ್ಧತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿದರು.

‘ಯುವ ಸಾಹಿತಿಗಳು ತಮ್ಮ ಬರಹಗಳಲ್ಲಿ ‘ಇರುವ ತಪ್ಪುಗಳನ್ನು ತಿದ್ದಿಕೊಳ್ಳುವ ಸಕಾರಾತ್ಮಕ ಗುಣಗಳನ್ನು ರೂಢಿಸಿಕೊಳ್ಳಬೇಕು. ಬರವಣಿಗೆಯ ಸಂಖ್ಯೆ ಕಡಿಮೆಯಾದರೂ ಪರವಾಗಿಲ್ಲ ಅಧ್ಯಯನ ಮಾತ್ರ ನಿರಂತರವಾಗಿರಬೇಕು’ ಎಂದವರು ಅಭಿಪ್ರಾಯ ಪಟ್ಟರು.

ಇದಕ್ಕೂ ಮುನ್ನ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿದ ಚುಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಸುಲಾಯ ಮಾತನಾಡಿ ‘ತನ್ನ ಬರಹಗಳನ್ನು ಎಲ್ಲರೂ ಓದಬೇಕೆನ್ನುವ ಉದಯೋನ್ಮುಖ ಲೇಖಕರಲ್ಲಿ ಹಿರಿಯ ಸಾಹಿತಿಗಳ ಪಾಂಡಿತ್ಯದಲ್ಲಿ ಆಸಕ್ತಿ ತೋರದಿರುವುದು ಅವರ ಬೆಳವಣಿಗೆಗೆ ಅಪಾಯ’ ಎಂದರು.
Gunaje
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ.ಕೃಷ್ಣದಾಸ್ ಅವರು ವಹಿಸಿದ್ದರು. ಹಿರಿಯ ಕವಿ ಎನ್. ಸುಬ್ರಾಯ ಭಟ್, ಪಿಂಗಾರ ಪತ್ರಿಕೆ ಸಂಪಾದಕ ರೇಮಂಡ್ ಡಿಕುನಾ, ಹೆಸರಾಂತ ಸಾಹಿತಿ ರಘು ಇಡ್ಕಿದು, ವಾಗ್ಮಿ ಭಾಸ್ಕರ್ ರೈ ಕುಕ್ಕುವಳ್ಳಿ, ಅಮೆರಿಕಾದಿಂದ ವಿಜ್ಞಾನಿ ಕವಿ ಕೇಶವ ಪ್ರಸಾದ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಉಪನ್ಯಾಸದ ಬಳಿಕ ನಡೆದ ಸಂವಾದದಲ್ಲಿ ಡಾ.ಸುರೇಶ್ ನೆಗಳಗುಳಿ, ಅರುಂಧತಿ ರಾವ್, ವಿದ್ಯಾಶ್ರೀ ಅಡೂರು,ರೇಖಾ ಸುದೇಶ್,ವಿಜಯಲಕ್ಷ್ಮೀ ಕಟೀಲು, ಜಿನೇಂದ್ರ,ಹರೀಶ್ ಸುಲಾಯ,ಆಕೃತಿ ಐ ಎಸ್ ಭಟ್,ಎಸ್ ಕೆ ಗೋಪಾಲಕೃಷ್ಣ ಭಟ್ ಮುಂತಾದವರು ಪಾಲ್ಗೊಂಡರು.

Gunaje ಅರುಂಧತಿ ರಾವ್ ಪ್ರಾರ್ಥಿಸಿದರು. ಮಂಗಳೂರು ಚುಸಾಪ ಕಾರ್ಯದರ್ಶಿ ವಿಜಯಲಕ್ಷ್ಮೀ ಕಟೀಲು ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ವಿಘ್ನೇಶ್ ಭಿಡೆ ವಂದಿಸಿದರು.

ಪ್ರಾಧ್ಯಾಪಕಿ ಲೇಖಕಿ ಅಕ್ಷಯ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English