ದಾವಣಗೆರೆ: ಹೊನ್ನಾಳಿ ವೃತ್ತ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದ 5 ತಿಂಗಳ ಗರ್ಭಿಣಿ ಪೇದೆ ಮಹಾಮಾರಿಗೆ ಕೊರೋನಾಗೆ ಬಲಿಯಾಗಿದ್ದಾರೆ.
ಮಹಿಳಾ ಪೊಲೀಸ್ ಪೇದೆ ಚಂದ್ರಕಲಾ (34) ಮೃತರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ವೃತ್ತ ಕಚೇರಿಯಲ್ಲಿ ಚಂದ್ರಕಲಾ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಪತಿ ಓಜಪ್ಪ ಅವರು ಬಸವಾಪಟ್ಟಣ ಪೊಲೀಸ್ ಠಾಣೆ ಪೇದೆ ಯಾಗಿದ್ದಾರೆ.
ಈ ದಂಪತಿಗಳು ಇನ್ನು ನಾಲ್ಕು ತಿಂಗಳಲ್ಲಿ ಮಗುವಿನ ಆಗಮದ ಸಂಭ್ರಮದಲ್ಲಿದ್ದರು.
5 ತಿಂಗಳ ಗರ್ಭಿಣಿ ಚಂದ್ರಕಲಾ ಅವರಿಗೆ 10 ದಿನದ ಹಿಂದೆಯೇ ಕರೊನಾ ಸೋಂಕು ಕಾಣಸಿಕೊಂಡಿತ್ತು. ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ವರ್ಗಾಯಿಸಲಾಗಿತ್ತು. ಗರ್ಭಿಣಿಯಾಗಿದ್ದ ಕಾರಣ ಚಂದ್ರಕಲಾ ಕರೊನಾ ವ್ಯಾಕ್ಸಿನ್ ಹಾಕಿಸಿಕೊಂಡಿರಲಿಲ್ಲ. ಚಿಕಿತ್ಸೆ ಫಲಿಸದೆ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದಲ್ಲಿ ಮೃತರ ಅಂತ್ರಕ್ರಿಯೆ ನೆರವೇರಿಸಲಾಗಿದೆ.
Click this button or press Ctrl+G to toggle between Kannada and English