ಪುಟ್ಟ ಮಗುವಿಗೆ ಚಿತ್ರ ಹಿಂಸೆ ಕೊಡುತ್ತಿದ್ದ ಬಂಟ್ವಾಳದ ಮಹಿಳೆ ಮುಂಬಯಿಯಲ್ಲಿ ಬಂಧನ

6:39 PM, Saturday, June 12th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

irinಮುಂಬೈ : ಮಗುವನ್ನು ನೋಡಿಕೊಳ್ಳಲು ತಿಂಗಳಿಗೆ ಐವತ್ತು ಸಾವಿರ ಸಂಬಳಕ್ಕೆ ನೇಮಕವಾಗಿದ್ದ ಬಂಟ್ವಾಳ ತಾಲೂಕಿನ ಬಾಂಬಿಲಪದವು ಮೂಲದ ದಾದಿಯು ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡುತ್ತಿರುವ ಆರೋಪದ ಮೇಲೆ ಮುಂಬೈಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ಮೂಲದ ಸೆರಾವೋ ಕುಟುಂಬದ ನವದಂಪತಿಗಳಿಗೆ ಮುಂಬಯಿಯ ವಾಶಿ  ಮನೆಯಲ್ಲಿ ಗಂಡು ಮಗು ಜನಿಸಿದ್ದು, ಬಾಣಂತಿಯ ಆರೈಕೆಗಾಗಿ ಬಂಟ್ವಾಳ ತಾಲೂಕಿನ ಬಾಂಬಿಲಪದವು ಮೂಲದ ಐರಿನ್ ವಾಸ್ ಅವರನ್ನು ನೇಮಕ ಮಾಡಲಾಗಿತ್ತು.

ಐರಿನ್ ಬಂಟ್ವಾಳ ಅಮ್ಟಾಡಿ ಗ್ರಾಮದ ಬಾಂಬಿಲ ಪದವು ಮೆಕ್ಸಿಮ್ ವಿನ್ಸೆಂಟ್ ಲಾಸ್ರದೋ ಇವರ ಪತ್ನಿ.

ಮಗು ಪದೇ ಪದೇ ಅಳುವುದನ್ನು ಗಮನಿಸಿದ ದಂಪತಿ  ವೈದ್ಯರಲ್ಲಿ ಕರೆದುಕೊಂಡು ಹೋದರು. ಮಗುವನ್ನು ತಪಾಸನೆಗೈದ ವೈದ್ಯರು ಮಗುವಿನ ದೇಹ, ಕೈಕಾಲುಗಳಲ್ಲಿ ಹೆಪ್ಪುಗಟ್ಟಿದ ರಕ್ತದ ಕಲೆಗಳು ಮತ್ತು ಊತು ಕೊಂಡಿದ್ದನ್ನು ಗಮನಿಸಿದರು. ಚಿಕಿತ್ಸೆ ನೀಡಿದ ವೈದ್ಯರು ದಾದಿಯ ನಡೆಯಲ್ಲಿ ಮೇಲೆ ನಿಗಾ ಇರಿಸುವಂತೆ ಸೂಚಿಸಿದ್ದು ಮನೆಮಾಲೀಕರು ಅಂದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು.

ಸಿಸಿಟಿವಿಯಲ್ಲಿ  ದಾದಿಯು  ಸೋಫಾದಲ್ಲಿ ಕುಳಿತು ಮಗುವನ್ನು ಮಲಗಿಸುವ ವೇಳೆಗೆ ಮಗು ನಿದ್ರಿಸದೇ ಇರುವುದಕ್ಕೆ  ಮಗುವಿನ ಕೈ, ಕಾಲು, ಕತ್ತು, ತಲೆಯನ್ನು ಯದ್ವಾತದ್ವಾ ಬೆಂಡೆತ್ತಿ ಮಗುವನ್ನು ತೀವ್ರವಾಗಿ ಚಿತ್ರಹಿಂಸೆಯನ್ನಿತ್ತು  ತನ್ನ ಕೋಪವನ್ನೆಲ್ಲಾ ಮಗುವಿನಲ್ಲಿ ತೆಗೆಯುತ್ತಿರುವುದು ಗಮನಕ್ಕೆ ಬಂದಿತು.  ದಾದಿ ಐರಿನ್ ಹಸುಳೆಯಲ್ಲಿ ರಾಕ್ಷಸಿ ರೌದ್ರಾವತಾರ ತೋರಿದ ಅಮಾನುಷ ಕೃತ್ಯಗಳೆಲ್ಲವನ್ನೂ ಮನೆಮಂದಿ ಸಿಸಿಟಿವಿ ಕ್ಯಾಮೆರಾ ಮೂಲಕ ಸೆರೆಹಿಡಿದು ಆಕೆಯನ್ನು ರೆಡ್‌ಹ್ಯಾಂಡ್ ಆಗಿ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ  ತನಿಖೆ ನಡೆಸಿದ ವಾಶಿ ಪೋಲಿಸ್ ಠಾಣಾಧಿಕಾರಿ ಸಬ್ ಇನ್ಸ್‌ಪೆಕ್ಟರ್ ರೇಶ್ಮಾ ಬಿ.ಮೊಮಿನ್ ಪ್ರಕರಣವನ್ನು ದಾಖಲಿಸಿ ನ್ಯಾಯಲಯಕ್ಕೆ ಒಪ್ಪಿಸಿದ್ದರು. ಪೋಲಿಸ್ ಕಸ್ಟಡಿಯಲ್ಲಿದ್ದ ಐರಿನ್ ವಾಸ್ ಷರತ್ತುಬದ್ಧ ಜಾಮೀನು ಮೇಲೆ ಬಿಡುಗಡೆ ಆಗಿದ್ದಾಳೆ. ಸದ್ಯ ಐರಿನ್ ಮಲಾಡ್ ಅಲ್ಲಿನ ಸಂಬಂಧಿಕರ ಮನೆಯಲ್ಲಿದ್ದು ಷರತ್ತಿನಂತೆ ದಿನ ಠಾಣೆಗೆ ಬಂದು ಹಾಜರಾಗಬೇಕಾಗಿದೆ.

ಈಕೆ ಅದೇ ಕುಟುಂಬದಲ್ಲಿ ಏಳೆಂಟು ಶಿಶುಗಳ ಹಾರೈಕೆ  ಮಾಡಿದ  ಕಾರಣಕ್ಕೆ ಈ ಮಗುವಿನ ಹಾರೈಕೆ ಕೆಲಸ ಕೊಡಲಾಗಿತ್ತು

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English