ನವಭಾರತ್ ಸರ್ಕಲ್ ಅಡಿಯಲ್ಲಿ ಪುರಾತನ ಬಾವಿ ಪತ್ತೆ

8:09 PM, Saturday, June 12th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Navabharath Circle ಮಂಗಳೂರು  : ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ನವಭಾರತ್ ಸರ್ಕಲ್ – ರಾಷ್ಟ್ರಕವಿ ಗೋವಿಂದ್ ಪೈ ವೃತ್ತವನ್ನು ನೆಲಸಮ ಮಾಡಲಾಗಿದ್ದು ಇದೀಗ ಕಾಮಗಾರಿ ವೇಳೆ ವೃತ್ತದಲ್ಲಿ ಪುರಾತನ ಬಾವಿಯೊಂದು ಪತ್ತೆಯಾಗಿದೆ.

ಸುಮಾರು 1980 ರಲ್ಲಿ ನಿರ್ಮಾಣವಾದ 40 ವರ್ಷದ ಹಿಂದಿನ ಬಾವಿ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು ಬಾವಿಯನ್ನು ಕಾಂಕ್ರಿಟ್ ಸ್ಲ್ಯಾಬ್ ಹಾಕಿ ಮುಚ್ಚಲಾಗಿತ್ತು, ಕಾಮಗಾರಿ ವೇಳೆ ಮಣ್ಣು ಕುಸಿದು ಬಾವಿ ಕಾಣಿಸಿಕೊಂಡಿದ್ದು ಸಾರ್ವಜನಿಕರಿಗೆ ಆಶ್ಚರ್ಯ ಮೂಡಿಸಿದೆ.

ಹಿಂದೆ ನವಭಾರತ ಮುದ್ರಣಾಲಯ ಮತ್ತು ಕಚೇರಿ ಇದ್ದ ಕಾರಣಕ್ಕೆ ಈ ವೃತ್ತವನ್ನು ನವಭಾರತ ಸರ್ಕಲ್ ಎಂದು ಕರೆಯಲಾಗುತ್ತಿತ್ತು. ಈ ವೃತ್ತವೂ ಕಳಪೆ ನಿರ್ವಹಣೆಯಿಂದಾಗಿ, ತನ್ನ ಹಿಂದಿನ ಸೌಂದರ್ಯವನ್ನು ಕಳೆದುಕೊಂಡಿದ್ದು  ಸ್ಮಾರ್ಟ್ ಸಿಟಿ ಕಾಮಗಾರಿಯ ಹಿನ್ನಲೆಯಲ್ಲಿ ನವಭಾರತ್ ಸರ್ಕಲ್ ಕೆಡವಲಾಗಿದ್ದು ಈ ವೃತ್ತ ಅವೈಜ್ಞಾನಿಕವಾಗಿ ನಿರ್ಮಿಸಲ್ಪಟ್ಟಿದ್ದು,  ಶೀಘ್ರದಲ್ಲೇ ಇಲ್ಲಿ ವೈಜ್ಞಾನಿಕ ವಲಯವನ್ನು ನಿರ್ಮಿಸಲಾಗುವುದು. ವೃತ್ತದ ಹೆಸರಿನಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ” ಎಂದು ಮೇಯರ್ ಈ ಹಿಂದೆ ಸ್ಪಷ್ಟಪಡಿಸಿದ್ದರು.

 

image description

1 ಪ್ರತಿಕ್ರಿಯೆ - ಶೀರ್ಷಿಕೆ - ನವಭಾರತ್ ಸರ್ಕಲ್ ಅಡಿಯಲ್ಲಿ ಪುರಾತನ ಬಾವಿ ಪತ್ತೆ

  1. ಮನೋಹರ್, ಚೇಳೂರು

    ಹಳೆಯದು ಬಂಗಾರ ಹೊಸತು ಪಂಚಲೋಹ ಹಳೆ ಹೆಸರು ಬದಾಲವನೆ ಬೇಡ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English