ಮಂಗಳೂರು : ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳ ಸಂಖ್ಯೆ 45 ಕ್ಕೆ ಏರಿದೆ. ಶನಿವಾರ ಹೊಸತಾಗಿ 2 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇಬ್ಬರು ಬಲಿಯಾಗಿದ್ದಾರೆ.
ಪತ್ತೆಯಾದ ಎರಡು ಹೊಸ ಪ್ರಕರಣವು ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶನಿವಾರ ಬ್ಲ್ಯಾಕ್ ಫಂಗಸ್ ಗೆ ಇಬ್ಬರು ಬಲಿಯಾಗಿದ್ದು ಒಬ್ಬರು ಚಿಕ್ಕಮಗಳೂರಿನವರು ಮತ್ತು ಇನ್ನೊಬ್ಬರು ಹಾಸನ ಜಿಲ್ಲೆಗೆ ಸೇರಿದವರಾಗಿದ್ದಾರೆ. ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 12 ಮಂದಿಯ ಸಹಿತ ಬ್ಲ್ಯಾಕ್ ಫಂಗಸ್‌ಗೆ ದ.ಕ.ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ.
ದ.ಕ.ಜಿಲ್ಲೆಯಲ್ಲಿ 45 ಬ್ಲ್ಯಾಕ್ ಫಂಗಸ್ ಸಕ್ರಿಯ ಪ್ರಕರಣಗಳ ಪೈಕಿ 9 ದ.ಕ. ಜಿಲ್ಲೆಗೆ ಮತ್ತು 36 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ಅದರಲ್ಲಿ ವೆನ್ಲಾಕ್‌ನಲ್ಲಿ 34 ಮತ್ತು ಖಾಸಗಿ ಆಸ್ಪತ್ರೆಯಲ್ಲಿ 11 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದವರ ಸಂಖ್ಯೆ 13ಕ್ಕೇರಿದೆ. ಶನಿವಾರ 9 ಮಂದಿ ಗುಣಮುಖರಾಗಿದ್ದು, ಅದರಲ್ಲಿ ದ.ಕ.ಜಿಲ್ಲೆಯ ಇಬ್ಬರು ಮತ್ತು ಹೊರ ಜಿಲ್ಲೆಯ 11 ಮಂದಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Click this button or press Ctrl+G to toggle between Kannada and English