ಕಾರವಾರ : ಮೊಬೈಲ್ ನಲ್ಲಿ ಮಾತನಾಡ ಬೇಡ ಎಂದು ಪತ್ನಿಯಲ್ಲಿ ಹೇಳಿದಕ್ಕೆ ಪತಿಯನ್ನೇ ಕೊಲ್ಲಲು 30 ಸಾವಿರ ಸುಪಾರಿ ನೀಡಿ ಹತ್ಯೆಗೆ ಯತ್ನ ನಡೆಸಿದ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದೆ.
ದಾಂಡೇಲಿಯ ಅಂಕುಷ ರಾಮಾ ಪತ್ನಿ ಸುತಾರ ಸರಸ್ವತಿಗೆ ಮೊಬೈಲ್ ನಲ್ಲಿ ಮಾತನಾದ ಬೇಡ ಎಂದು ಬುದ್ದಿವಾದ ಹೇಳಿದ್ದಾನೆ. ಆಕೆ ಸಮಯ ಕಳೆಯಲು ನೆಂಟರು ಹಾಗೂ ಪರಿಚಯಸ್ಥರೊಂದಿಗೆ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು.
ಅಂಕುಷ ರಾಮಾ ಆರು ವರ್ಷದ ಹಿಂದೆ ಸುತಾರ ಸರಸ್ವತಿಯನ್ನು ಮದುವೆಯಾಗಿದ್ದು, ಹಲವು ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಹೀಗಾಗಿ ಮನೆಯಲ್ಲಿ ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಿದ್ದಳು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಈಕೆ ತನ್ನ ಪರಿಚಯ ಹೊಂದಿದ್ದ ಗಣೇಶ ಶಾಂತರಾಂ ಎಂಬುವವನಿಗೆ 30 ಸಾವಿರ ಸುಪಾರಿ ನೀಡಿ ಹತ್ಯೆ ಮಾಡುವಂತೆ ತಿಳಿಸಿದ್ದಳು.
ಗಣೇಶ ಶಾಂತರಾಂ ಇಬ್ಬರು ಬಾಲಕರೊಂದಿಗೆ ಮನೆಗೆ ಬಂದು ಮನೆಯಲ್ಲಿದ್ದ ಅಂಕುಷ ರಾಮಾ ಸುತಾರ ನನ್ನು ಕತ್ತು ಹಿಸುಕಿ ಕೊಲೆ ಮಾಡಲು ಎತ್ನಿಸಿದ್ದು, ಈತ ಕೂಗಿಕೊಂಡಾಗ ಪಕ್ಕದ ಮನೆಯಲ್ಲಿ ಇದ್ದ ಸಹೋದರರು ಓಡಿ ಬಂದಿದ್ದಾರೆ. ಈ ವೇಳೆ ಹತ್ಯೆ ಮಾಡಲು ಬಂದಿದ್ದ ಇಬ್ಬರು ಅಪ್ರಾಪ್ತರು ಓಡಿಹೋಗಿದ್ದು, ಸುಪಾರಿ ತೆಗೆದುಕೊಂಡ ಗಣೇಶ್ ಶಾಂತರಾಂ ಸಿಕ್ಕಿಬಿದ್ದಿದ್ದಾನೆ.
ಘಟನೆ ಸಂಬಂಧ ದಾಂಡೇಲಿಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸರಸ್ವತಿ ಸುತಾರ ಮತ್ತು ಬೆಳಗಾವಿ ಮೂಲದ ಗಣೇಶ ಶಾಂತರಾಂ ಪಾಟೀಲ್ ನನ್ನು ಬಂಧಿಸಿದ್ದಾರೆ.
Click this button or press Ctrl+G to toggle between Kannada and English