ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ ಮೂಡಿಸುತ್ತದೆ : ಯು.ಟಿ.ಖಾದರ್

11:05 PM, Sunday, June 13th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

UT Khader ಮಂಗಳೂರು  : ಮುಜರಾಯಿ ಇಲಾಖೆಯ ನೂತನ ಆದೇಶ ಜನರ ನಡುವೆ ಗೊಂದಲ, ಸಂಶಯ ಮೂಡಿಸುತ್ತದೆ ಹೊರತು ಯಾವುದೇ ಧಾರ್ಮಿಕ ಕೇಂದ್ರಗಳಿಗೆ ನಷ್ಟವೂ ಇಲ್ಲ,ಲಾಭವೂ ಇಲ್ಲ ಎಂದು  ಯು.ಟಿ.ಖಾದರ್ ಹೇಳಿದ್ದಾರೆ.

ಬಹಳ ಸಮಯದ ಹಿಂದಿನಿಂದ ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಮಂದಿರ ಮಸೀದಿಗಳ ನಿರ್ವಹಣೆಗಾಗಿ ದುಡ್ಡಿನ ಬದಲು “ಇನಾಮು” ಮೂಲಕ ಈ ಜಮೀನು ನೀಡಲಾಗುತ್ತಿತ್ತು. ನಂತರ ಭಾರತ ಸ್ವತಂತ್ರಗೊಂಡ ಬಳಿಕ ಮೊದಲಿದ್ದ ಕಾನೂನನ್ನು ರದ್ದು ಪಡಿಸಿ “Inams Abolition Act” ನ್ನು ಜಾರಿಗೆ ತಂದು ಸರಕಾರದ ವತಿಯಿಂದಲೇ ಮಂದಿರ ಮಸೀದಿಗಳ ನಿರ್ವಹಣೆಗಾಗಿ ದುಡ್ಡು ನೀಡಲಾಗುತ್ತಿತ್ತು. ಮೊದಲಿಗೆ ವರ್ಷಕ್ಕೆ 3 ಸಾವಿರ ಇದ್ದ ಹಣ ನಂತರ 6,8 ಸಾವಿರ ಆಗಿ ಕಳೆದ ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ 48 ಸಾವಿರ ಕ್ಕೆ ಬಂದು ನಿಂತಿತು.

ಇದರಲ್ಲಿ ಸುಮಾರು 30 ಸಾವಿರ ದೇವಸ್ಥಾನಗಳು,700 ಮಸೀದಿಗಳು ಹಾಗೂ 30 ಜೈನ ದೇವಸ್ಥಾನಗಳಿಗೆ ಸರಕಾರದ ಖಜಾನೆಯಿಂದಲೇ ನೇರವಾಗಿ ನೀಡಲಾಗುತ್ತಿತ್ತೇ ಹೊರತು ದೇವಸ್ಥಾನಗಳಿಗೆ ಮೀಸಲಾದ ಮೊತ್ತವೋ ಅಥವಾ ಅಲ್ಲಿನ ಹರಕೆ ಹುಂಡಿಯಿಂದಲೋ ಬಂದ ಮೊತ್ತದಿಂದಲ್ಲ. ಅಂದರೆ “Inams Abolition Act” ಪ್ರಕಾರ ಸರಕಾರ ನೇರ ಮುಜರಾಯಿ ಇಲಾಖೆಗೆ ವರ್ಗಾಯಿಸಿ ನಂತರ ಅಲ್ಲಿಂದ ಮಂದಿರ ಮಸೀದಿಗಳಿಗೆ ಹಣ ಬರುತ್ತಿತ್ತು. ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ 42 ಮಸೀದಿಗಳಿಗೆ ಮಾತ್ರ ಹಣ ಬರುತ್ತಿತ್ತು. ಈಗ ಬಂದಿರುವ ಆದೇಶವೇನೆಂದರೆ ಇಂಥಹ ಮಸೀದಿಗಳಿಗೆ ನೀಡುವ ಹಣವನ್ನು ಮುಜರಾಯಿ ಇಲಾಖೆಗೆ ನೀಡದೆ ನೇರವಾಗಿ ಅಲ್ಪಸಂಖ್ಯಾತರ ಇಲಾಖೆಗೆ ವರ್ಗಾಯಿಸಿ ಅಲ್ಲಿಂದ ಮಸೀದಿಗಳಿಗೆ ನೀಡಿ ಎಂಬುದಾಗಿದೆ. ಆದರೆ ಈ ಬಗ್ಗೆ ಒಂದು ವಾರದ ಹಿಂದೆಯೇ ಆದೇಶ ಬಂದಿದ್ದರೂ ಕೂಡಾ, ಕೆಲವರ ಮೂಲಕ ಮನವಿ ಪಡೆದು ಜನರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಕೈ ಹಾಕಿ ಗೊಂದಲ ಹಾಗೂ ಸಂಶಯ ಮೂಡಿಸುತ್ತಿದ್ದಾರೆ ಎಂದು ಯು.ಟಿ.ಖಾದರ್  ಹೇಳಿದ್ದಾರೆ.

ಕೋವಿಡ್ ಮಹಾಮಾರಿಯಿಂದ ತತ್ತರಿಸುವ ರಾಜ್ಯದ ಮಹಾ ಜನತೆ ಜಾತಿ,ಮತ,ಧರ್ಮ ನೋಡದೆ ಒಬ್ಬರಿಗೊಬ್ಬರು ಸಹಕಾರವನ್ನು ನೀಡುತ್ತಾ ಸಾಮರಸ್ಯದಿಂದ ಇರುವ ಈ ಸಂದರ್ಭದಲ್ಲಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಂಥಹ ನಿರ್ಣಯಗಳನ್ನು ತೆಗೆದುಕೊಳ್ಳುವ ಬದಲು ಜನರ ಮದ್ಯೆ ಗೊಂದಲ ಸಂಶಯ ಯಾಕೆ ಮೂಡಿಸಬೇಕು ಎಂದು ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಸರಕಾರವನ್ನು ಪ್ರಶ್ನಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English