ಮಂಗಳೂರು :ಕಸ್ತೂರಿ ವಾಹಿನಿಯ ವರದಿಗಾರ, ಹೋಮ್ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ನವೀನ್ ಸೂರಿಂಜೆ ಚಿಕನ್ ಪಾಕ್ಸ್ ಪೀಡಿತರಾಗಿದ್ದು ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯಾಹ್ನನದ ನಂತರ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.
ನವೆಂಬರ್ 7ರಿಂದ ಸೂರಿಂಜೆ ಜೈಲಿನಲ್ಲಿದ್ದು ಡಿಸೆಂಬರ್ 26ರಂದು ಅವರ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ. ತನ್ನ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಸೂರಿಂಜೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಜೆಎಂಎಫ್ ಸಿ ಕೋರ್ಟ್ ಮತ್ತು ಸೆಶನ್ಸ್ ಕೋರ್ಟ್ ನಲ್ಲಿ ತನ್ನ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ ನವೀನ್ ಸೂರಿಂಜೆ ಹೈಕೋರ್ಟ್ ಮೆಟ್ಟಿಲೇರಿದ್ದರು.
Click this button or press Ctrl+G to toggle between Kannada and English