ಬಂಟ್ವಾಳ ತಾಲ್ಲೂಕಿನ ತುಂಬೆಯಲ್ಲಿ ಸ್ವಂತ ಕೊಠಡಿಗೆ ಸ್ಥಳಾಂತರಗೊಂಡ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಶಾಖೆಯನ್ನು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಸೋಮವಾರ ಉದ್ಘಾಟಿಸಿದರು.
ಬಂಟ್ವಾಳ: ಇಲ್ಲಿನ ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ತುಂಬೆ ಸ್ವಂತ ಕೊಠಡಿಗೆ ಸ್ಥಳಾಂತರಗೊಂಡ ಶಾಖೆಯನ್ನು ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ. ರಘು ಸಪಲ್ಯ ದಂಪತಿ ಸೋಮವಾರ ಉದ್ಘಾಟಿಸಿ ಶುಭ ಹಾರೈಸಿದರು. ಸೊಸೈಟಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ ಮಾತನಾಡಿ, ಸಂಘವು ರೂ 233 ಕೋಟಿ ವ್ಯವಹಾರ ನಡೆಸಿದ್ದು, ರೂ 1.41 ಕೋಟಿ ಲಾಭ ಗಳಿಸಿದೆ. ಒಟ್ಟು 2,314 ಮಂದಿ ಎ ತರಗತಿ ಸದಸ್ಯರಿದ್ದು, ರೂ 43.46 ಕೋಟಿ ಠೇವಣಿ ಸಹಿತ ರೂ 5.74 ಕೋಟಿ ಪಾಲು ಬಂಡವಾಳ, ರೂ 42 ಕೋಟಿ ಸಾಲ, ರೂ 3.40 ಕೋಟಿ ನಿಧಿ ಹೊಂದಿದೆ ಎಂದರು.
ಮಂಗಳೂರು ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಎ.ಎಸ್. ವೆಂಕಟೇಶ್ ಭದ್ರತಾ ಕೊಠಡಿ ಉದ್ಘಾಟಿಸಿದರು.
ಅತ್ತಾವರ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆಡಳಿತ ಮೊಕ್ತೇಸರ ಕೇಶವ ಮಳಲಿ, ಜಿಲ್ಲಾ ಗಾಣಿಗರ ಸಂಘದ ಅಧ್ಯಕ್ಷ ತಾರಾನಾಥ ಸುವರ್ಣ, ಬಂಟ್ವಾಳ ಬೂಡ ಸದಸ್ಯ ಸಚಿನ್ ಮೆಲ್ಕಾರ್, ಕರಾವಳಿ ಕ್ರೆಡಿಟ್ ಸೊಸೈಟಿ ನಿರ್ದೇಶಕ ನಾಗೇಶ್ ಪಾಣೆಮಂಗಳೂರು, ಅತ್ತಾವರ ಎಲ್ಲಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಸುಶೀಲ್ ಚಂದ್ರ, ಕಟ್ಟಡ ಮಾಲೀಕ ಕೆ.ಎಂ. ನಝೀರ್, ಜಿಲ್ಲಾ ಪಂಚಾಯಿತಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಗಣೇಶ್ ಸುವರ್ಣ, ಮಾಜಿ ಸದಸ್ಯ ಸೋಮಪ್ಪ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಸದಸ್ಯ ಮೋನಪ್ಪ ಮಜಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ, ಸಂಘದ ಮಾಜಿ ನಿರ್ದೇಶಕ ರಾದ ಜಯಾನಂದ ಪೆರಾಜೆ, ಮೋಹನ್ ಕೆ. ಶ್ರೀಯಾನ್ ರಾಯಿ, ಸಂಘದ ಉಪಾಧ್ಯಕ್ಷ ಪದ್ಮನಾಭ ಇಡ್ಕಿದು, ನಿರ್ದೇಶಕ ರಾದ ಕೃಷ್ಣಪ್ಪ ಗಾಣಿಗ, ಸದಾಶಿವ ಪುತ್ರನ್ ಜಕ್ರಿಬೆಟ್ಟು, ಸಂದೀಪ್ ಕುಮಾರ್ ಎಚ್., ಈಶ್ವರ್ ಮೆಲ್ಕಾರ್, ರವೀಂದ್ರ ಸಪಲ್ಯ ಬೋಳಂತೂರು, ದಾಮೋದರ ಸಪಲ್ಯ ನರಿಕೊಂಬು, ಶರತ್ ಎಚ್. ನರಿಕೊಂಬು, ಯಶೋಧ ಶಂಭೂರು, ಬಬಿತಾ ಸಚಿನ್ ಮೆಲ್ಕಾರ್, ಕಾರ್ಯನಿರ್ವಹಣಾಧಿಕಾರಿ ವಸಂತ ಪಿ. ಮತ್ತಿತರರು ಇದ್ದರು.
Click this button or press Ctrl+G to toggle between Kannada and English