ಉಡುಪಿ: ಕರೊನಾ ಲಸಿಕೆ ಪಡೆದ ಉಡುಪಿಯ ವ್ಯಕ್ತಿಯೊಬ್ಬರಲ್ಲಿ ಅಯಸ್ಕಾಂತೀಯ ಲಕ್ಷಣಗಳು ಕಂಡುಬಂದಿದ್ದು, ಭುಜ, ಹಣೆ, ಹೃದಯಭಾಗಗಳಲ್ಲಿ ಸ್ಟೀಲ್ ಚಮಚ, ನಾಣ್ಯಗಳು ಅಂಟಿಕೊಳ್ಳುತ್ತಿರುವ ಘಟನೆ ನಡೆದಿದೆ.
ನಗರದ ಪಿಪಿಸಿ ಕಾಲೇಜು ಸಮೀಪ ನಿವಾಸಿ ರಾಮ್ ದಾಸ್ ಶೇಟ್ (52) ಅವರಲ್ಲಿ ಅಯಸ್ಕಾಂತೀಯ ಗುಣಲಕ್ಷಣ ಕಾಣಿಸಿಕೊಂಡಿದೆ.
ಜಿಲ್ಲಾಧಿಕಾರಿ ಸೂಚನೆಯಂತೆ ಜಿಲ್ಲಾಸ್ಪತ್ರೆಯಲ್ಲಿ ಬಿಪಿ, ಶುಗರ್, ಇಸಿಜಿ, ರಕ್ತ ಪರೀಕ್ಷೆ ಮಾಡಿದ್ದಾರೆ. ಹೆಚ್ಚಿನ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆೆ. ವರದಿ ಬಳಿಕವೇ ಸತ್ಯ ತಿಳಿಯಲಿದೆ ಎಂದು ರಾಮ್‌ದಾಸ್ ಶೇಟ್ ತಿಳಿಸಿದ್ದಾರೆ.
ಕೋವಿಡ್ ಲಸಿಕೆಗೂ ಮ್ಯಾಗ್ನೆಟಿಕ್ ಪವರ್ ಗೂ ಸಂಬಂಧವಿಲ್ಲ. ಅವರನ್ನು ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಹಣೆ, ಭುಜ, ಬೆನ್ನು, ಕೈಯಲ್ಲಿ ಅಯಸ್ಕಾಂತೀಯ ಗುಣ ಇದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಕ್ಸಿನ್‌ನಿಂದ ಹೀಗಾಗಿದೆ ಎಂದು ಕೆಲವರು ಹೇಳಿದ್ದಾರೆ. ಅದು ಸರಿಯಲ್ಲ. ಏ.28ಕ್ಕೆ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಆದರೆ ಲಸಿಕೆಯಿಂದ ಅಯಸ್ಕಾಂತೀಯ ಗುಣ ಬರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
Click this button or press Ctrl+G to toggle between Kannada and English