ಕೋವಿಡ್ ಸೂಪರ್ ವಾರಿಯರ್; ಮೆರಿಲ್ ರೇಗೋ

9:59 PM, Tuesday, June 15th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Meril-Regoಮಂಗಳೂರು  : ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೆರಿಲ್ ರೇಗೋ‌ ನೇತೃತ್ವದಲ್ಲಿ ಲಾಕ್‌ಡೌನ್ ನಿಂದ ಸಂಕಷ್ಟಕ್ಕೊಳಗಾದವರಿಗೆ ಸಹಾಯ ಹಾಗೂ ಕೋವಿಡ್ ರೋಗಿಗಳಿಗೆ ನೆರವು ನಿರಂತರವಾಗಿ ನೀಡಲಾಗುತ್ತಿದೆ‌. ಲಾಕ್‌ಡೌನ್ ಆರಂಭದಲ್ಲಿ ಪ್ರಾರಂಭಿಸಿದ ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರಾಶ್ರಿತರಿಗೆ ಹಾಗೂ ಸರಕು ಸಾಗಾಣಿಕೆಯ ವಾಹನ ಚಾಲಕರಿಗೆ ಮಧ್ಯಾಹ್ನದ ಊಟ ವಿತರಿಸುವ ಕಾರ್ಯ ಪ್ರತಿದಿನ ನಿರಂತರವಾಗಿ ನಡೆಯುತ್ತಿದೆ. ದಿನಂಪ್ರತಿ 400-500ರಷ್ಟು ಜನರಿಗೆ ಊಟವನ್ನು ವಿತರಿಸಲಾಗುತ್ತಿದೆ.

ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ. ಇತ್ತೀಚೆಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ದಿನದ ಅಂಗವಾಗಿ ಮಂಗಳೂರು ನಗರ ಅಂಗವಿಕಲರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು. ಕೋವಿಡ್ ವಾರಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಕಾರ್ಯಕ್ರಮದ ಅಂಗವಾಗಿ ಆಹಾರವನ್ನು ವಿತರಿಸಲಾಗಿದೆ.

Meril-Rego ರೋಗಿಗಳಿಗೆ ಅಗತ್ಯ ಔಷಧಿಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ‌. ಕೋವಿಡ್ ರೋಗಿಗಳಿಗೆ ಹಾಗೂ ಇತರ ರೋಗಿಗಳಿಗೆ ಆಸ್ಪತ್ರೆ ಮತ್ತು ಚಿಕಿತ್ಸೆ ಸಂಬಂಧಿತ ಕಾರ್ಯಗಳಿಗೆ ನೆರವು ನೀಡಲಾಗುತ್ತಿದೆ. ಆಂಬುಲೆನ್ಸ್‌ನ ವ್ಯವಸ್ಥೆಯನ್ನು ಕೂಡಾ ನಿರಂತರವಾಗಿ ಮಾಡಲಾಗುತ್ತಿದೆ.

ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಒಟ್ಟು 47 ಜನರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಅದಲ್ಲದೆ, ಪ್ರತಿದಿನ ಹಲವರಿಗೆ ಲಸಿಕೆ ಪಡೆದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಲಸಿಕೆ ಆನ್‌ಲೈನ್ ನೋಂದಣಿ ಅಭಿಯಾನಕ್ಕೆ ಇತ್ತೀಚೆಗೆ ಚಾಲನೆ ನೀಡಲಾಗಿದೆ‌. ಈಗಾಗಲೇ ನೂರಾರು ಜನರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ವ್ಯಾಕ್ಸಿನೇಷನ್‌ ಹೆಲ್ಪ್‌ಡೆಸ್ಕ್ ಆರಂಭಿಸಿ ಅದರ ಮೂಲಕ ಲಸಿಕೆ ಕೇಂದ್ರ ಮಾಹಿತಿ ಹಾಗೂ ನೋಂದಣಿ ಮಾಹಿತಿಯನ್ನು ದೂರವಾಣಿ ಮುಖಾಂತರ ನೀಡಲಾಗುತ್ತಿದೆ.

ರಕ್ತದ ವ್ಯವಸ್ಥೆಯನ್ನು ಕೂಡಾ ನಿರಂತರವಾಗಿ ಮಾಡಲಾಗುತ್ತಿದೆ‌. ಇದರೊಂದಿಗೆ ಜನರಿಗೆ ನೆರವಾಗುವ ಇನ್ನಿತರ ಕಾರ್ಯ ಚಟುವಟಿಕೆಗಳನ್ನು ರಾತ್ರಿ ಹಗಲೆನ್ನದೆ ಸಕ್ರಿಯವಾಗಿ ಮೆರಿಲ್ ರೇಗೋ ನೇತೃತ್ವದಲ್ಲಿ ಮಾಡಲಾಗುತ್ತಿದೆ‌. ಅವರೊಂದಿಗೆ ಮಂಗಳೂರು ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ದೇವಾಡಿಗ, ಮಂಗಳೂರು ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಪೂಜಾರಿ ಹಾಗೂ ಯುವ ಕಾಂಗ್ರೆಸ್‌ನ ಕಾರ್ಯಕರ್ತರು ಕೈ ಜೋಡಿಸಿದ್ದಾರೆ.

ಕೋವಿಡ್ ರೋಗಿಗಳ, ನಿರಾಶ್ರಿತರ ಪಾಲಿಗೆ ಕೋವಿಡ್ ಸೂಪರ್ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಮೆರಿಲ್ ರೇಗೋ ಅವರ ಕಾರ್ಯ ಸೇವೆಗಳು ನಿಜಕ್ಕೂ ಪ್ರಶಂಸನೀಯ. ಅವರಂತಹ ಯುವ ನಾಯಕರು ಬೆಳೆದು ಬರಲಿ. ಅವರಿಗೆ ತುಂಬು‌ ಹೃದಯದ ಅಭಿನಂದನೆಗಳು.

Meril-Rego

Meril-Rego

Meril-Rego

Meril-Rego

1 ಪ್ರತಿಕ್ರಿಯೆ - ಶೀರ್ಷಿಕೆ - ಕೋವಿಡ್ ಸೂಪರ್ ವಾರಿಯರ್; ಮೆರಿಲ್ ರೇಗೋ

  1. Richard lobo, Mangalore

    Merrill rego is super warrior super leader jai congress Congress jindabad

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English