ಬೆಂಗಳೂರು : ಇಂಡೋ- ಇಸ್ರೇಲ್ ಯೋಜನೆಯಡಿ ಅಭಿವೃದ್ಧಿ ಪಡಿಸಿದ 3 ಉತ್ಕೃಷ್ಟ ಕೇಂದ್ರಗಳಾದ ಕೋಲಾರದ ಮಾವು ಉತ್ಕೃಷ್ಟ ಕೇಂದ್ರ, ಬಾಗಲಕೋಟೆಯ ದಾಳಿಂಬೆ ಉತ್ಕೃಷ್ಟ ಕೇಂದ್ರ ಹಾಗೂ ಧಾರವಾಡದ ತರಕಾರಿ ಉತ್ಕೃಷ್ಟ ಕೇಂದ್ರಗಳನ್ನು ವರ್ಚುವಲ್ ಮೂಲಕ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿಂದು ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯವು ತೋಟಗಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು, ತೋಟಗಾರಿಕೆ ಬೆಳೆಗಳು ಕೃಷಿ ಬೆಳೆಗಳಿಗಿಂತ ಹೆಚ್ಚಿನ ಲಾಭಧಾಯಕ ವಾಗಿರುವುದರಿಂದ ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಪ್ರತಿ ವರ್ಷವು ಹೆಚ್ಚುತ್ತಿದೆ. ರಾಜ್ಯದಲ್ಲಿ ಎಲ್ಲಾ ರೀತಿಯ ಭೌಗೊಳಿಕ ಹವಾಗುಣಗಳು ಆಯಾ ಋತುಮಾನಕ್ಕೆ ಹಮ್ಮಿಕೊಳ್ಳುವಂತೆ ಸಹಕಾರಿಯಾಗಿದ್ದು, ನಮ್ಮ ರೈತರು ಅತ್ಯುತ್ತಮ ಗುಣಮಟ್ಟದ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿರುತ್ತಾರೆ ಎಂದರು.
ಭಾರತವು ಇಸ್ರೇಲ್ ದೇಶವನ್ನು ಕೃಷಿ ಕ್ಷೇತ್ರದಲ್ಲಿ ಕಾರ್ಯತಂತ್ರದ ಪಾಲುದಾರನನ್ನಾಗಿ ಆಯ್ಕೆ ಮಾಡಿದ್ದು, 2006 ರಲ್ಲಿ ಭಾರತ ಸರ್ಕಾರದ ಕೃಷಿ ಸಚಿವರು ಮತ್ತು ಇಸ್ರೇಲ್ ಸರ್ಕಾರದ ಒಡಂಬಡಿಕೆಯನ್ವಯ ಇಂಡೋ- ಇಸ್ರೇಲ್ ಕ್ರಿಯಾ ಯೋಜನೆಯನ್ನು ರೂಪಿಸಿ ಕಾರ್ಯರೂಪಕ್ಕೆ ತರಲಾಗಿದೆ. ಈ ಪಾಲುದಾರಿಕೆಯಿಂದ ಸುಧಾರಿತ ತಂತ್ರಜ್ಞಾನ ಅಳವಡಿಕೆ, ನೀರಿನ ಮಿತ ಬಳಕೆಯಿಂದ ಸಂಪನ್ಮೂಲಗಳ ಸದುಪಯೋಗ ಹಾಗೂ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಲು ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯದಲ್ಲಿ ಮೂರು ಉತ್ಕೃಷ್ಟ ಕೇಂದ್ರಗಳಾದ ಮಾವು ಉತ್ಕೃಷ್ಟ ಕೇಂದ್ರ, ಕೋಲಾರ, ದಾಳಿಂಬೆ ಉತ್ಕೃಷ್ಟ ಕೇಂದ್ರ, ಬಾಗಲಕೋಟೆ ಮತ್ತು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರ, ಧಾರವಾಡದಲ್ಲಿ ಸ್ಥಾಪಿಸಲಾಗಿದೆ ಎಂದರು.
ಈ ಕೇಂದ್ರಗಳನ್ನು ಸುಧಾರಿತ ತಂತ್ರಜ್ಞಾನಗಳಾದ ಅಧಿಕ ಸಾಂದ್ರ ಬೇಸಾಯ ಪದ್ಧತಿ, ಪುನಃಶ್ಚೇತನ, ಮೇಲಾವರಣ ನಿರ್ವಹಣೆ, ವಿವಿಧ ಟ್ರಿಲಿಸಿಂಗ್ ಪದ್ಧತಿಗಳು, ಸ್ವಯಂಚಾಲಿತ ಹನಿ ನೀರಾವರಿ ಮತ್ತ ರಸಾವರಿ ತಂತ್ರಜ್ಞಾನಗಳ ಅಳವಡಿಕೆಯಿಂದ ಮಾವು, ದಾಳಿಂಬೆ ಹಾಗೂ ತರಕಾರಿ ಬೆಳೆಗಳ ಇಳುವರಿಯನ್ನು ಮತ್ತು ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಉತ್ತಮ ಗುಣಮಟ್ಟದ ಸಸಿ/ ಕಸಿಗಳನ್ನು ಒದಗಿಸಲು, ಕ್ಷೇತ್ರ ಪ್ರಾತ್ಯಕ್ಷತೆ ಹಾಗೂ ತರಬೇತಿಗಳನ್ನು ಆಯೋಜಿಸುವುದರ ಮೂಲಕ ನವೀನಾತ್ಮಕ ತಾಂತ್ರಿಕತೆಗಳನ್ನು ರೈತರಿಗೆ ತಲುಪಿಸಲು ಸ್ಥಾಪಿಸಲಾಗಿದೆ.
ಈ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳಾದ ಕಛೇರಿ ಕಟ್ಟಡ ಹಾಗೂ ಸುಸಜ್ಜಿತ ತರಬೇತಿ ಕೊಠಡಿ, ವಸತಿ ನಿಲಯ, ಮಣ್ಣು, ನೀರು ಮತ್ತು ಎಲೆ ವಿಶ್ಲೇಷಣಾ ಪ್ರಯೋಗಾಲಯ, ಬಯೋಡೈಜೆಸ್ಟರ್, ಎರೆ ಹುಳು ಗೊಬ್ಬರ ಘಟಕ, ಕೃಷಿ ಹೊಂಡಗಳನ್ನು ನಿರ್ಮಿಸಲಾಗಿರುತ್ತದೆ ಹಾಗೂ ಕೇಂದ್ರಗಳಿಗೆ ಅವಶ್ಯವಿರುವ ಕೃಷಿ ಪರಿಕರಗಳನ್ನು ಒದಗಿಸಲಾಗಿರುತ್ತದೆ ಎಂದು ಹೇಳಿದರು.
ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಎಂ ಕಾರಜೋಳ, ತೋಟಗಾರಿಕೆ ಸಚಿವರಾದ ಶ್ರೀ ಶಂಕರ್, ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ತೋಟಗಾರಿಕೆ ಬೆಳೆಗಳ ಇಂಡೋ- ಇಸ್ರೇಲ್ ಉತ್ಕೃಷ್ಟ ಕೇಂದ್ರಗಳ ಕುರಿತ ಹೆಚ್ಚುವರಿ ಮಾಹಿತಿ
ಇಂಡೋ- ಇಸ್ರೇಲ್ ಕೃಷಿ ಯೋಜನೆಯಡಿ ಈ ಕೇಂದ್ರದ ಸ್ಥಾಪನೆಗಾಗಿ ಭಾರತ ಸರ್ಕಾರದಿಂದ ರೂ. 198 ಲಕ್ಷಗಳನ್ನು ಹಾಗೂ ರಾಜ್ಯ ಸರ್ಕಾರದಿಂದ ರೂ.360 ಲಕ್ಷಗಳನ್ನು ಕೇಂದ್ರದ ನಿರ್ವಹಣೆಗಾಗಿ ಒದಗಿಸಲಾಗಿರುತ್ತದೆ.
ಕೇಂದ್ರದ ಚಟುವಟಿಕೆಗಳು:
ಇಂಡೋ- ಇಸ್ರೇಲ್ ಕೃಷಿ ಯೋಜನೆಯಡಿ ಈ ಕೇಂದ್ರದ ಸ್ಥಾಪನೆಗಾಗಿ ಭಾರತ ಸರ್ಕಾರದಿಂದ ರೂ. 343 ಲಕ್ಷಗಳನ್ನು ಹಾಗೂ ರಾಜ್ಯ ಸರ್ಕಾರದಿಂದ ರೂ.156 ಲಕ್ಷಗಳನ್ನು ಕೇಂದ್ರದ ನಿರ್ವಹಣೆಗಾಗಿ ಒದಗಿಸಲಾಗಿರುತ್ತದೆ.
ಕೇಂದ್ರದ ಚಟುವಟಿಕೆಗಳು:
ಈ ಕೇಂದ್ರವನ್ನು ದಾಳಿಂಬೆಯ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಇಸ್ರೇಲ್ ತಂತ್ರಜ್ಞಾನ ಮಾದರಿಯಲ್ಲಿ ಅಧಿಕಸಾಂದ್ರಬೇಸಾಯ, ವೈಜ್ಞಾನಿಕ ಸವರುವಿಕೆ, ಸ್ವಯಂಚಾಲಿತ ಹನಿ-ನೀರಾವರಿ ಹಾಗೂ ರಸಾವರಿ ಪದ್ದತಿ ಹಾಗೂ ಕೇಂದ್ರದ ಪ್ರಾತ್ಯಕ್ಷತೆ ತಾಕುಗಳಲ್ಲಿ ಇಸ್ರೇಲ್ ತಂತ್ರಜ್ಞಾನದ T, Y ಮತ್ತು Single Pole ಟ್ರೇಲಿಸಿಂಗ್ ಸಿಸ್ಟಮ್ ಅಳವಡಿಸಿಕೆ, ಉತ್ತಮ ಗುಣಮಟ್ಟದ ರೋಗಮುಕ್ತ ದಾಳಿಂಬೆ ಸಸ್ಯಗಳನ್ನು ಉತ್ಪಾದನೆಮಾಡಿ ರೈತರಿಗೆ ಒದಗಿಸಲು ಹಾಗು ತರಬೇತಿ ಮೂಲಕ ರೈತರಿಗೆ ತಂತ್ರಜ್ಞಾನಗಳನ್ನು ತಲುಪಿಸಲು ಸ್ಥಾಪಿಸಲಾಗಿದೆ.
ಈ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವ ಸಲುವಾಗಿ ಹಾಗೂ ಕೇಂದ್ರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಈ ತಂತ್ರಜ್ಞಾನಗಳನ್ನು ಅಳವಡಿಸಿ ರೈತ ಸಮುದಾಯದ ಆರ್ಥಿಕ ಸ್ಥಿತಿ ಹಾಗೂ ಜೀವನ ಮಟ್ಟವನ್ನು ಸುಧಾರಿಸಲು ಉದ್ದೇಶಿಸಲಾಗಿದೆ.
ಇಂಡೋ- ಇಸ್ರೇಲ್ ಕೃಷಿ ಯೋಜನೆಯಡಿ ಈ ಕೇಂದ್ರದ ಸ್ಥಾಪನೆಗಾಗಿ ಭಾರತ ಸರ್ಕಾರದಿಂದ ರೂ. 500 ಲಕ್ಷಗಳನ್ನು ಹಾಗೂ ರಾಜ್ಯ ಸರ್ಕಾರದಿಂದ ರೂ.260 ಲಕ್ಷಗಳನ್ನು ಕೇಂದ್ರದ ನಿರ್ವಹಣೆಗಾಗಿ ಒದಗಿಸಲಾಗಿರುತ್ತದೆ.
ಕೇಂದ್ರದ ಚಟುವಟಿಕೆಗಳು:
ಈ ಕೇಂದ್ರವು ಅತ್ಯುತ್ತಮ ಗುಣಮಟ್ಟದ ಸಸಿಗಳನ್ನು ಉತ್ಪಾದಿಸಲಿದ್ದು, ಇಸ್ರೇಲ್ ಮಾನದಂಡಗಳೊಂದಿಗೆ ಉತ್ತಮ ಪದ್ದತಿಗಳನ್ನು ಪ್ರಾತ್ಯಕ್ಷಿಸಲಾಗುತ್ತಿದೆ. ಇಸ್ರೇಲ್ ತರಕಾರಿ ಬೆಳೆಗಳ ತಳಿಗಳನ್ನು ಸಹ ಪರಿಚಯಿಸಲಿದೆ ಹಾಗೂ ನೆಮಟೋಡ್ ರಹಿತ ತಳಿಗಳ ಪ್ರಾತ್ಯಕ್ಷಿತೆಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಈ ಕೆಳಕಂಡ ಸೌಕರ್ಯಗಳನ್ನು ನಿರ್ಮಿಸಲಾಗಿದೆ.
ಭವಿಷ್ಯದ ಉದ್ದೇಶಿತ ಚಟುವಟಿಕೆಗಳು:
Click this button or press Ctrl+G to toggle between Kannada and English