ಮಂಗಳೂರು : ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ನಗರದ ಟೋಕಿಯೋ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಬಂದ ಮೂವರು ಅಂಗಡಿ ತೆರೆದಿರುವುದಕ್ಕೆ ದಂಡ ಕಟ್ಟಲು ಹೇಳಿರುವುದಾಗಿ ಆರೋಪಿಸಿ ನಗರದ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.
ಲಾಕ್‌ಡೌನ್ ವೇಳೆ ಅಂಗಡಿ ತೆರೆದಿದ್ದ ವೇಳೆ ಟೋಕಿಯೊ ಮಾರ್ಕೆಟ್ ಶಾಪಿಂಗ್ ಮಳಿಗೆಗೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಭೇಟಿ ನೀಡಿದ ಮೂವರು, ತಾವು ಪಾಲಿಕೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಲಾಕ್‌ಡೌನ್ ವೇಳೆ ಅಂಗಡಿ ತೆರೆದಿರುವುದಕ್ಕೆ 50,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ತಾನು ಒಪ್ಪದಿದ್ದಾಗ ಎಲ್ಲ ಸರಿ ಮಾಡುವುದಾಗಿ ಹೇಳಿ 10,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಬಳಿಕ ಸುತ್ತಮುತ್ತಲಿದ್ದ ಕೆಲವರು ಸಹಾಯಕ್ಕೆ ಆಗಮಿಸಿ ಅವರು ಮನಪಾ ಅಧಿಕಾರಿಗಳು ಅಲ್ಲವೆಂದು ಖಚಿತಪಡಿಸಿದ್ದಾರೆ.
ದೀಪಕ್ ರಾಜೇಶ್ ಕುವೆಲ್ಲೋ, ತೌಸೀಫ್ ಖಲಂದರ್ ಮತ್ತು ರಿಯಾಝ್ ಎಂಬವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಗಡಿ ಮಾಲಕ ಅಬ್ದುಲ್ ರಹಿಮಾನ್ ಎಂಬವರು ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Click this button or press Ctrl+G to toggle between Kannada and English