ಮಂಗಳೂರು : “ಜಗತ್ತು ಎಷ್ಟೇ ಮುಂದುವರಿದರೂ ಭಾರತದ ಚಿಂತನೆಗಳು ಸಾರ್ವಕಾಲಿಕ. ಭಾರತೀಯ ವೇದಾಂತ ಚಿಂತನೆಗಳಲ್ಲಿ ಆಧುನಿಕ ಜಗತ್ತಿನ ಪ್ರತಿಯೊಂದು ಸವಾಲಿಗೂ ಪರಿಹಾರವಿದೆ, ಆತ್ಮಶ್ರದ್ಧೆಯೊಂದಿದ್ದರೆ ಯಾವುದೂ ಇಲ್ಲಿ ಅಬೇಧ್ಯವಲ್ಲ ಎಂಬ ಸಂದೇಶವನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ” ಎಂದು, ಹೈದರಾಬಾದ್ನ ನಾಯಕತ್ವ ತರಬೇತುದಾರ ಡಾ. ವಿವೇಕ್ ಮೋದಿ ಹೇಳಿದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ‘ವಿವೇಕ ವಾಣಿʼ ಆನ್‌ಲೈನ್ ಸರಣಿ ಉಪನ್ಯಾಸ ಕಾರ್ಯಕ್ರಮದ ಐದನೇ ಉಪನ್ಯಾಸದಲ್ಲಿ “ಪ್ರಸ್ತುತ ಸವಾಲುಗಳನ್ನು ಎದುರಿಸಲು ಸ್ವಾಮಿ ವಿವೇಕಾನಂದರ ಚಿಂತನೆ” ಎಂಬ ವಿಷಯದ ಬಗ್ಗೆ ಅವರು ಮಾತನಾಡಿದರು. ಮಂಗಳೂರು ರಾಮಕೃಷ್ಣ ಮಠದ ಸ್ವಾಮಿ ಏಕಗಮ್ಯಾನಂದಜಿ, ಮಂಗಳೂರು ವಿಶ್ವವಿದ್ಯಾಲಯ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ. ಕೆ., ಮಂಗಳೂರು ರಾಮಕೃಷ್ಣ ಮಿಷನ್ ಆಡಳಿತ ಮಂಡಳಿ ಸದಸ್ಯರಾದ ಸುರೇಂದ್ರ ಶೆಣೈ, ಉಮನಾಥ್ ಕೋಟೆಕಾರ್, ಸಹಾಯಕ ಪ್ರಾಧ್ಯಾಪಕ ಡಾ. ಶೇಷಪ್ಪ ಅಮೀನ್ ಸೇರಿದಂತೆ ಹಲವಾರು ಗಣ್ಯರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕ ಪ್ರೊ. ಶ್ರೀಪತಿ ಕಲ್ಲೂರಾಯ ಪಿ. ಸ್ವಾಗತಿಸಿ, ವಿವೇಕಾನಂದ ಅಧ್ಯಯನ ಕೇಂದ್ರದ ಸದಸ್ಯ ಡಾ. ಚಂದ್ರು ಹೆಗ್ಡೆ ವಂದಿಸಿದರು, ಮಂಗಳೂರು ರಾಮಕೃಷ್ಣ ಮಠದ ಸ್ವಯಂಸೇವಕ ರಂಜನ್ ಬೆಳ್ಳರ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English