ಹುಬ್ಬಳ್ಳಿ : ಕ್ಯಾಶ್‍ಬ್ಯಾಕ್ ಹಣ ಜಮೆ ಮಾಡುತ್ತೇನೆ ಎಂದು ನಂಬಿಸಿ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯ ಒಟಿಪಿ ಮಾಹಿತಿ ಪಡೆದು ಅಕ್ರಮವಾಗಿ 1.08 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡ ಘಟನೆ ಧಾರವಾಡದಿಂದ ವರದಿಯಾಗಿದೆ
ಈ ಕುರಿತು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಧಾರವಾಡ ಮೂಲದ ಸ್ಮೀತಾ ಅವರಿಗೆ ಬರ್ಕಾ ಶರ್ಮಾ ಎಂಬ ಹೆಸರಿನ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ. ನಾನು ಮುಂಬೈ ಕ್ಯಾಶ್ ಪೇ ಬ್ಯಾಂಕ್ ವಿಭಾಗದಿಂದ ಕರೆ ಮಾಡುತ್ತಿದ್ದೇನೆ. ನಿಮ್ಮ ಕ್ರೇಡಿಟ್ ಕಾರ್ಡ್ ಕ್ಯಾಶ್ ಬ್ಯಾಕ್ ಪಾಯಿಂಟ್ಸ್ 9,800 ಆಗಿದ್ದು, ಈ ಪಾಯಿಂಟ್ ಗಳ ಅವಧಿ ಮುಗಿಯುತ್ತಿದೆ. ಹೀಗಾಗಿ ಈ ಕ್ಯಾಶ್‍ಬ್ಯಾಕ್ ಪಾಯಿಂಟ್ ನ 9,800 ರೂಪಾಯಿ ನಿಮ್ಮ ಖಾತೆಗೆ ಜಮೆ ಮಾಡುತ್ತೇನೆ ಎಂದು ಹೇಳಿದ್ದಾನೆ.
ಕ್ಯಾಶ್ ಬ್ಯಾಕ್ ಹಣದ ಆಸೆಯಿಂದ ಸ್ಮಿತಾ, ಎಚ್‍ಡಿಎಫ್‍ಸಿ ಹಾಗೂ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್‍ಗಳ ಸಿವಿವಿ ನಂಬರ್, ವ್ಯಾಲಿಡಿಟಿ ಹಾಗೂ ಒಟಿಪಿ ಮತ್ತಿತ್ತರ ಮಾಹಿತಿ ನೀಡಿದ್ದಾರೆ. ಈ ವಿವರ ಪಡೆದ ಬರ್ಕಾ ಶರ್ಮಾ ತಕ್ಷಣವೇ ಅಕೌಂಟ್ ನಿಂದ 1.08.101 ರೂಪಾಯಿ ಹಣವನ್ನು ಆನ್‍ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
Click this button or press Ctrl+G to toggle between Kannada and English