ಬೆಂಗಳೂರು: ರಾಜ್ಯ ಸರಕಾರ ಅತಿಥಿಗಳ ಓಡಾಟಕ್ಕೆ 36 ಐಷಾರಾಮಿ ವಾಹನಗಳನ್ನು ಕೊಂಡಿದ್ದು ಇದಕ್ಕಾಗಿ 8.11 ಕೋಟಿ ರೂ. ವೆಚ್ಚ ಮಾಡಿದೆ. ಕರೊನಾದಂತಹ ಸಂದರ್ಭದಲ್ಲಿ ಕಳೆದೊಂದು ವರ್ಷದಿಂದೀಚೆಗೆ ಸಂಕಷ್ಟಮಯ ಸನ್ನಿವೇಶ ಇರುವಾಗಲೇ ಸರಕಾರ ಈ ನಿರ್ಧಾರ ಕೈಗೊಂಡಿರುವುದು ಆಚಾರಿ ಮೂಡಿಸಿದೆ .
36 ಹೊಸ ವಾಹನಗಳ ಪೈಕಿ 35 ಇನ್ನೋವಾ ಕ್ರಿಸ್ಟಾ ಆಗಿದ್ದು, ಒಂದು ವೋಲ್ವೋ ಸೇರಿದೆ.
ರಾಜ್ಯಕ್ಕೆ ಬರುವ ಅತಿಥಿಗಳು, ಕೇಂದ್ರದಿಂದ ಬರುವ ಅಧಿಕಾರಿಗಳು, ರಾಜತಾಂತ್ರಿಕರು ಹಾಗೂ ವಿಶೇಷ ಸಂದರ್ಭಕ್ಕೆ ಈ ದುಬಾರಿ ವಾಹನಗಳನ್ನು ಬಳಸಿಕೊಳ್ಳಲಾಗುತ್ತದೆಯಂತೆ. ಇನ್ನೊವಾ ಕ್ರಿಸ್ಟಾ ಬೆಂಗಳೂರಲ್ಲಿ ವಿಮೆ, ರೋಡ್ ಟ್ಯಾಕ್ಸ್ ಸೇರಿ ಆನ್ ರೋಡ್ ಪೆಸ್ ಸರಾಸರಿ 15.98 ಲಕ್ಷ ರೂ.ನಿಂದ 24.32 ಲಕ್ಷ ರೂ.ವರೆಗೆ ಇದ್ದು, 16 ಬೇರೆ ಬೇರೆ ಶ್ರೇಣಿಯವು ಇವೆ.
Click this button or press Ctrl+G to toggle between Kannada and English