ಮಡೆಸ್ನಾನ: ನಿಡುಮಾಮಿಡಿ ಸ್ವಾಮೀಜಿ ದ್ವಂದ್ವ ನಿಲುವು ಶ್ರೀಗಳಿಗೆ ಶೋಭೆ ತರುವಂತದಲ್ಲ ಪೇಜಾವರ ಶ್ರೀ

2:27 PM, Thursday, December 27th, 2012
Share
1 Star2 Stars3 Stars4 Stars5 Stars
(No Ratings Yet)
Loading...

Sri Vishweshwar Teertha Swaಮಂಗಳೂರು : ಸುಬ್ರಹ್ಮಣ್ಯ ದೇವಸ್ಥಾನದಲ್ಲಿನ ಮಡೆಸ್ನಾನಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಡೆಸ್ನಾನಕ್ಕೆ ಬದಲಾಗಿ ಎಡೆಸ್ನಾನ ಜಾರಿಗೊಳಿಸುವಂತೆ ಸಲಹೆ ನೀಡಿದಾಗ ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದ ನಿಡುಮಾಮಿಡಿ ಸ್ವಾಮೀಜಿ, ಇದೀಗ ಸಾರ್ವಜನಿಕ ಸಭೆಗಳಲ್ಲಿ ನಮ್ಮನ್ನು ಅವಮಾನಿಸುವಂತಹ ಮಾತುಗಳನ್ನಾಡಿರುವುದು ಶ್ರೀಗಳಿಗೆ ಶೋಭೆ ತರುವಂತದಲ್ಲ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆರೋಪಿಸಿದರು.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು ಈ ಆಚರಣೆಯಿಂದ ಜನರ ಭಾವನೆಗಳಿಗೆ ಧಕ್ಕೆ ಬರುವುದಾದರೆ ಅದನ್ನು ನಿಲ್ಲಿಸಿ ಎಂಜಲೆಲೆಯ ಬದಲಿಗೆ ದೇವರ ನೈವೇದ್ಯದ ಮೇಲೆ ಉರುಳು ಸೇವೆ ಮಾಡುವಂತೆ ಸಲಹೆ ನೀಡಿದ್ದು ಈ ಸಲಹೆ ಸರಕಾರ, ಭಕ್ತರು ಹಾಗೂ ನ್ಯಾಯಾಲಯಕ್ಕೆ ಒಪ್ಪಿಗೆಯಾಗಿದ್ದು ಅದನ್ನು ಮುಂದುವರೆಸಲು ಆದೇಶ ನೀಡಿದ್ದರು. ಹೀಗಿರುವಾಗ ಸ್ಥಳೀಯರು ಈ ನಿರ್ಧಾರವನ್ನು ವಿರೋಧಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು ನ್ಯಾಯಾಲಯದಲ್ಲಿ ಮಡೆಸ್ನಾನ ವಿರೋಧಿ ಹೋರಾಟಗಾರರು ಸರಿಯಾದ ವಾದ ಮಂಡಿಸಲು ವಿಫಲರಾದ ಕಾರಣ ನ್ಯಾಯಾಲಯವು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಉಚ್ಚ ನ್ಯಾಯಾಲಯದ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಈ ಕಾರಣದಿಂದ ಮತ್ತೆ ಮಡೆಸ್ನಾನ ಮುಂದುವರೆಯಿತು ಅದಕ್ಕೆ ನಾನು ಹೊಣೆಯಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಸ್ವಾಮೀಜಿ ಹೇಳಿದರು.

ಮಡೆಸ್ನಾನ ಮುಂದುವರಿಸಿದರೆ ಹಿಂದೂ ಧರ್ಮಕ್ಕೆ ದೊಡ್ಡ ಲಾಭ ಇಲ್ಲ. ನಿಲ್ಲಿಸಿದರೆ ಮಾತ್ರ ಲಾಭ. ನಾವು ಬುದ್ಧಿ ಹೇಳಿದಾಗ ಹಲವರು ಒಪ್ಪಿದ್ದಾರೆ. ಇನ್ನು ಕೆಲವರು ಹಠ ಹಿಡಿದಿದ್ದಾರೆ. ಅವರಿಗೆ ನೋವಾಗಿ, ಶಾಂತಿಭಂಗ ಬೇಡ ಎಂದು ಎಡೆಸ್ನಾನದ ಸಲಹೆ ಕೊಟ್ಟದ್ದು. ಎಲ್ಲ 11 ಸುಬ್ರಹ್ಮಣ್ಯ ದೇವಳಗಳಲ್ಲೂ ಮಡೆಸ್ನಾನ ನಡೆಯುತ್ತಿದೆ. ನಾವು ಸಲಹೆ ಮಾತ್ರ ಕೊಡಬಹುದು. ನಮ್ಮ ಮಠಕ್ಕೂ ಸುಬ್ರಹ್ಮಣ್ಯ ದೇವಳಕ್ಕೂ ಸಂಬಂಧ ಇಲ್ಲ ಎಂದರು.

ಉಡುಪಿ ಮಠದಲ್ಲಿರುವ ಪಂಕ್ತಿ ಭೋಜನಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಬ್ರಾಹ್ಮಣರಿಗೆ ಪ್ರತ್ಯೇಕ ಸಾಂಪ್ರದಾಯಿಕ ಪಂಕ್ತಿ ಮೂಲಕ ಊಟ ಬಡಿಸುವ ಪದ್ಧತಿ ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿಯೂ ಇದೆ. ಆದರೆ ಶ್ರೀಕೃಷ್ಣ ಮಠದ ಬಗ್ಗೆ ಮಾತ್ರ ವಿರೋಧ ಏಕೆ?. ಶಾಖಾಹಾರಿಗಳೊಂದಿಗೆ ಆಹಾರ ಸೇವಿಸಲು ಕೆಲವು ಬ್ರಾಹ್ಮಣ ಸಮಾಜದವರು ನಿರಾಕರಿಸಿದರೆ ಅವರಿಗೆ ಈ ರೀತಿಯ ವ್ಯವಸ್ಥೆ ಇದೆ. ಕೆಲವರ ಆಹಾರ ಸ್ವಾತಂತ್ರ್ಯ ಅಥವಾ ನಿಯಮ ಕಸಿಯಲಾಗದು, ಈ ಬಗ್ಗೆ ಹೆಚ್ಚಾಗಿ ತಾನು ಪ್ರತಿಕ್ರಿಯಿಸುವುದಿಲ್ಲಎಂದು ಅವರು ಹೇಳಿದರು. ಸೋದೆ ಮಠದಲ್ಲಿ ಭಜನೆಗೆ ನಿಷೇಧ ಹೇರಲಾಗಿದೆ ಎಂಬ ವರದಿ ಇದೆ ಆದರೆ ಸಂಜೆ 5ರಿಂದ 6 ಗಂಟೆ ಮಧ್ಯೆ ಪ್ರವಚನ ನಡೆಯುವ ಕಾರಣ, ನಂತರ ಭಜನೆ ಮಾಡಲು ಸೂಚಿಸಲಾಗಿದೆಯೆ ವಿನಹ ಯಾವುದೇ ಅಡ್ಡಿ ಮಾಡಿಲ್ಲ ಎಂದು ಅವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English