ಮಂಗಳೂರು : 290 ಕೋಟಿ ರೂ.ಗಳ ಹವಾಲಾ ಹಾಗೂ ಹಣದ ದುರುಪಯೋಗದ ಹಗರಣ ಪತ್ತೆ ಮಾಡುವಲ್ಲಿ ಕರ್ನಾಟಕದ ಸಿಐಡಿಯ ಇತ್ತೀಚಿಗೆ ಪರಿಣಾಮಕಾರಿ ಹಾಗೂ ಎಚ್ಚರಿಕೆಯ ಕಾನೂನು ಕಾಪಾಡುವ ಮುಖ್ಯ ಕಾರ್ಯವನ್ನು ನಿರ್ವಹಿಸಿದೆ. ದಿ ಆನ್‍ಲೈನ್ ರಮಿ ಫೆಡರೇಷನ್ ಕರ್ನಾಟಕ ಪೊಲೀಸರಿಗೆ ಮುಖ್ಯವಾಗಿ ಸಿಐಡಿಯ ಸೈಬರ್ ಅಪರಾಧ ವಿಭಾಗಕ್ಕೆ ಅಭಿನಂದಿಸ ಬೇಕು. ‘ಕರ್ನಾಟಕ ಪೊಲೀಸರು ಬಿಡುಗಡೆ ಮಾಡಿದ ಮಾಹಿತಿಯ ಅನ್ವಯ ಈ ಹಗರಣವು ಜನರಿಗೆ ಮೋಸಗೊಳಿಸಲು ವಂಚನೆಯ ಹೂಡಿಕೆ ಯೋಜನೆಯಾಗಿದೆ, ಆನ್‍ಲೈನ್ ಗೇಮ್ ಇತ್ಯಾದಿ ಮಾರ್ಗಗಳನ್ನು ಕಂಡುಕೊಂಡಿದ್ದರು, ಇದಕ್ಕೆ ಚೀನಾದ ಸಂಪರ್ಕವೂ ಇದೆ ಎನ್ನಲಾಗಿದೆ, ಆನ್‍ಲೈನ್ ಸ್ಕಿಲ್ ಗೇಮಿಂಗ್ ವಲಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಅಗತ್ಯವನ್ನು ಎತ್ತಿ ತೋರಿಸಿದೆ. ವಂಚನೆ ತಪ್ಪಿಸಲು, ನಾಗರಿಕ ಸಮಾಜ ರಕ್ಷಿಸಲು, ಸ್ಕಿಲ್ ಗೇಮ್ಸ್ ನಿಯಂತ್ರಿಸಲು ಮುಂದಾಗಿರುವ ಕುರಿತು ಟಿಒಆರ್‍ಎಫ್‍ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಸಮೀರ್ ಬಾರ್ಡೆ ಅಭಿಪ್ರಾಯ ವ್ಯಕ್ತ ಪಡಿಸಿದರು.
Click this button or press Ctrl+G to toggle between Kannada and English