ಮಂಗಳೂರು : ಕಾಂಗ್ರೆಸ್ ಹೆಲ್ಪ್ ಲೈನ್ ಸಂಚಾಲಕರಾದ ಐವನ್ ಡಿಸೋಜಾ ರವರ ನೇತೃತ್ವದಲ್ಲಿ 3ನೇ ಅಲೆ ತಡೆಯಲು ಮುಂಜಾಗ್ರತಾ ಕ್ರಮವಾಗಿ, ಮೆಡಿಕಲ್ ಕಿಟ್ ವಿತರಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಬಾನುಗುದ್ದ ಪ್ರದೇಶದಲ್ಲಿ ಮಾಡಲಾಯಿತು.
3ನೇ ಅಲೆ ತಡೆಯಲು ಎಲ್ಲರೂ ಸಹಕರಿಸೇಕೆಂದು, ಕೋರೋನ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾದ್ದರಿಂದ ಮುಂಜಾಗ್ರತ ಕ್ರಮವಾಗಿ ವಹಿಸುದೇ ನಾವು ಮಾಡಬೇಕಾದ ಮುಖ್ಯ ಕೆಲಸ ಎಂದು ಈ ಸಂದರ್ಭದಲ್ಲಿ ನುಡಿದರು. ಕೋರೋಣ ಪೀಡಿತ ಪ್ರದೇಶಗಳಿಗೆ ಮತ್ತು ಕೊರೋನಾ ದಿಂದ ಸಂತ್ರಸ್ತ ರಾದ ಪ್ರದೇಶಗಳಿಗೆ ಭೇಟಿ ನೀಡಿ, ತನ್ನಿಂದ ಇನ್ನೊಬ್ಬರಿಗೆ ಹರಡದಂತೆ break the chain ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ಕೊರಾನ ಮುಂಜಾಗ್ರತ ಕ್ರಮವಾಗಿ ಕಿಟ್ ವಿತರಿಸಿದ ಜೇಮ್ಸ್ ಡಿ ಸೋಜ ಇವರು, ಕೋರೋಣ ಮುಂಜಾಗ್ರತ ಕ್ರಮ ವಹಿಸಬೇಕು ಎಂದು ವಿನಂತಿಸಿದರು. ಈ ಸಂಧರ್ಭದಲ್ಲಿ ಭಾಸ್ಕರ್ ರಾವ್, ವಿವೇಕ್ ರಾಜ್ ಪೂಜಾರಿ, ಆಶಿತ್ ಪಿರೇರಾ, ಗೀತ ಅತ್ತಾವರ, ವಿದ್ಯಾ ಬಾಬುಗುಡ್ಡೆ , ಅಬಿಬುಲ್ಲ, ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English