ಬೆಂಗಳೂರು : ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಪತಿ ತನ್ನ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ನಗರದ ಹುಳಿಮಾವು ಸಮೀಪದ ಅರಕೆರೆ ಬಿಟಿಎಸ್ ಲೇಔಟ್ ನಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಆಶಾ ಎಂದು ಗುರುತಿಸಲಾದೆ. ಮಣಿ ತನ್ನ ಪತ್ನಿಯನ್ನು ಕೊಂದ ಪತಿರಾಯ.
ಆಶಾ ಹಾಗೂ ಮಣಿ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಅದೇ ರೀತಿ ಸೋಮವಾರ ರಾತ್ರಿಯೂ ಪತಿ, ಪತ್ನಿ ನಡುವೆ ಗಲಾಟೆಯಾಗಿದೆ. ಮಣಿ ಇತ್ತೀಚೆಗೆ ವಿಪರೀತ ಮದ್ಯ ಕುಡಿಯಲು ಆರಂಭಿಸಿದ್ದ. ಹೀಗಾಗಿ ಪತ್ನಿಯ ಶೀಲದ ಶಂಕಿಸಿ ಗಲಾಟೆ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ನಿನ್ನೆ ರಾತ್ರಿ ನಡೆದ ಜಗಳದ ಸಿಟ್ಟಿನಿಂದ ಪತ್ನಿ ಆಶಾ ಮಲಗಿದ್ದ ಸಮಯದಲ್ಲಿ ಇಂದು ಬೆಳಗಿನಜಾವ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಬೆಳಗ್ಗೆಯಾದರೂ ಆಶಾ ಮನೆಯಿಂದ ಹೊರಬಾರದ ಹಿನ್ನೆಲೆ ಪಕ್ಕದ ಮನೆಯವರು ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಹುಳಿಮಾವು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಮಾಡಿದ ಪತಿ ಮಣಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English