ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ ಯುವಕ ನದಿ ಕಿನಾರೆಯಲ್ಲಿ ಶವವಾಗಿ ಪತ್ತೆ

3:14 PM, Wednesday, June 23rd, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Pahadಮಂಗಳೂರು : ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬನ ಮೃತ ದೇಹ  ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿದ್ದು ಇದು ಸಹಜ ಸಾವು ಅಲ್ಲ ಕೊಲೆ ಎಂಬ ಸಂಶಯವನ್ನು  ಕುಟುಂಬಸ್ಥರು ವ್ಯಕ್ತ ಪಡಿಸಿದ್ದಾರೆ.

ಕೃಷ್ಣಾಪುರ ಕ್ರಾಸ್ ನಿವಾಸಿ ಮುಹಮ್ಮದ್ ಶರೀಫ್‌ ಹಾಜಿ ಪುತ್ರ ಮುಹಮ್ಮದ್ ಫಹಾದ್ ಮೃತದೇಹ ನದಿ ಕಿನಾರೆಯಲ್ಲಿ ಗುರುತು ಸಿಗಲಾರದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

19 ವರ್ಷದ ಮುಹಮ್ಮದ್ ಫಹಾದ್ ಝಮೀರ್ ಮೃತದೇಹವು ಸೋಮವಾರ ಸಸಿಹಿತ್ಲು ನದಿ ಕಿನಾರೆಯಲ್ಲಿ ಪತ್ತೆಯಾಗಿತ್ತು. ಘಟನೆಯ ಬಗ್ಗೆ ಸಂಶಯವಿರುವ ಕಾರಣ ಸೂಕ್ತ ತನಿಖೆ ನಡೆಸುವಂತೆ ಮನೆ ಮಂದಿ ಆಗ್ರಹಿಸಿದ್ದಾರೆ.

ಜೂ.19ರ ರಾತ್ರಿ ತನ್ನ ಅಣ್ಣನ ಸ್ನೇಹಿತನ ಬೈಕ್‌ನಲ್ಲಿ ಮನೆಯಿಂದ ಹೊರಟಿದ್ದ ಫಹಾದ್ ಮರಳಿ ಮನೆಗ ಬರದೆ ನಾಪತ್ತೆಯಾಗಿದ್ದ. ಪಿಯುಸಿ ಕಲಿಯುತ್ತಿದ್ದ ಫಹಾದ್ ಸೈನ್ಯಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದ. ಈ ಬಗ್ಗೆ ಭೋಪಾಲ್‌ಗೆ ತರಬೇತಿಗೂ ತೆರಳಿದ್ದ. ಲಾಕ್‌ಡೌನ್ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ಫಹಾದ್ ‘ಸ್ವಿಗ್ಗಿ’ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ.

ಜೂ.21ರ ಬೆಳಿಗ್ಗೆ ಸಸಿಹಿತ್ಲು ಸಮೀಪದ ರುದ್ರಭೂಮಿಯ ಹಿಂಬದಿಯ ಸೇತುವೆಯ ಬಳಿ ಮೊಬೈಲ್ ಸಹಿತ ಬೈಕೊಂದು ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಳಿಕ ಹುಡುಕಾಡಿದಾಗ ಮೃತದೇಹವೊಂದು ಸಿಕ್ಕಿತ್ತು. ಬಳಿಕ ನಡೆಸಿದಾಗ ಫಹದ್ ನ ಮೃತದೇಹ ಎನ್ನುವುದು ದೃಢಪಟ್ಟಿತ್ತು.

ಶನಿವಾರ ರಾತ್ರಿ ಫುಡ್ ಡೆಲಿವರಿ ಕೆಲಸಕ್ಕೆ ಮನೆಯಿಂದ ಹೊರಟಿದ್ದ ಪಹಾದ್ ಬಳಿಕ ನಾಪತ್ತೆಯಾಗಿದ್ದ. ಶನಿವಾರ ರಾತ್ರಿ ಮುಕ್ಕ ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಫಹಾದ್‌ನ ಸಾವು ಆಕಸ್ಮಿಕವಲ್ಲ. ಸಾವಿನ ಬಗ್ಗೆ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಫಹಾದ್‌ನ ಸಹೋದರ ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English