ಬೆಂಗಳೂರು : ಸರ್ಕಾರಿ ಉನ್ನತ ಶಿಕ್ಷಣ ಸರ್ಕಾರಿ ಉನ್ನತ ಶಿಕ್ಷಣ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟ್ಯಾಬ್ಲೆಟ್ ನೀಡುವ ಯೋಜನೆಯಡಿ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಅವರು ಇಂದು ಮಹದೇವಪುರ ಕ್ಷೇತ್ರದ ಇಮ್ಮಡಿಹಳ್ಳಿಯ ವರ್ತೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕಾಡುಗೋಡಿ ಪ್ರಥಮ ದರ್ಜೆ ಕಾಲೇಜು, ಚನ್ನಸಂದ್ರ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಮ್ಮಡಿಹಳ್ಳಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಟ್ಯಾಬ್ಲೆಟ್ ಪಿಸಿ ವಿತರಣೆ ಮಾಡಿ ಐಸಿಟಿ ಯುಕ್ತ ಸ್ಮಾರ್ಟ್ ತರಗತಿ ಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ ಬದಲಾದ ಕಾಲಮಾನಕ್ಕೆ ತಕ್ಕ ಹಾಗೆ ವಿದ್ಯಾರ್ಥಿಗಳ ಕಲಿಕಾ ಕ್ರಮವು ಬದಲಾಗಿದೆ. ಆನ್ಲೈನ್ ಮೂಲಕ ಶಿಕ್ಷಣ ಪಡೆಯುವುದು ಇಂದು ಅನಿವಾರ್ಯವಾಗಿದೆ. ಹಾಗಾಗಿ ಸರ್ಕಾರದ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ತೊಂದರೆ ಆಗಬಾರದೆಂದು ಟ್ಯಾಬ್ಲೆಟ್ ಗಳನ್ನು ವಿತರಿಸಲಾಗಿದೆ ಎಂದರು.
ಇದು ನಿಮ್ಮ ಅಧ್ಯಯನದ ವಿಸ್ತಾರವನ್ನು ಹಿಗ್ಗಿಸುತ್ತದೆ, ನಿಮಗೆ ಆಸಕ್ತಿ ಇರುವ ವಿಷಯಗಳ ಬಗ್ಗೆ ನೀವು ಇಂಟರ್ನೆಟ್ ಮೂಲಕ ಅಗಾಧ ಪ್ರಮಾಣದ ಮಾಹಿತಿ ಪಡೆಯಬಹುದು.
ನಿಮ್ಮ ಜ್ಞಾನ ವಿಸ್ತಾರಕ್ಕೆ ಅನುಕೂಲಕರವಾಗಿ ಬಳಸಬಹುದು ಇದರ ಸದುಪಯೋಗ ಮಾಡಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಾಗೆಯೇ ಪ್ರತಿಯೊಬ್ಬ ವಿದ್ಯಾರ್ಥಿಯೂ ಲಸಿಕೆ ಪಡೆಯಬೇಕು, ಓದು ಎಷ್ಟು ಮುಖ್ಯವೋ, ಜೀವವೂ ಅಷ್ಟೇ ಮುಖ್ಯ ಎಂದು ಕಿವಿಮಾತು ಹೇಳಿದರು. ವಿವಿಧ ಕಾಲೇಜುಗಳ ಪ್ರಾಂಶುಪಾಲರು ಈ ಸಂದರ್ಭದಲ್ಲಿ ಹಾಜರಿದ್ದರು.
Click this button or press Ctrl+G to toggle between Kannada and English