ಮಂಗಳೂರು: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಮಂಗಳೂರು ವಕೀಲರ ಸಂಘದಿಂದ ಇಂದು ಬೃಹತ್ ಲಸಿಕಾ ಅಭಿಯಾನ ನಡೆಯಿತು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀ ಮುರಳೀಧರ ಪೈ ಅವರ ಮಾರ್ಗದರ್ಶನದಲ್ಲಿ ಬೃಹತ್ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯಿತು.
ಮಂಗಳೂರು ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ನಾಲ್ಕನೇ ಅಭಿಯಾನ ಇದಾಗಿದ್ದು, ದೊಡ್ಡ ಸಂಖ್ಯೆಯಲ್ಲಿ ಫಲಾನುಭವಿಗಳು ಲಸಿಕೆ ಪಡೆದುಕೊಂಡರು.
18 ವಯಸ್ಸಿನ ಮೇಲ್ಪಟ್ಟ ವಕೀಲರಿಗೆ, 45 ವರ್ಷ ಮೇಲ್ಪಟ್ಟ ವಕೀಲರಿಗೆ ಇದುವರೆಗೆ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ವಕೀಲರ ಕುಟುಂಬ ಸದಸ್ಯರು ಮತ್ತು ವಕೀಲರ ಕಚೇರಿ ಸಿಬ್ಬಂದಿಗೆ ಲಸಿಕೆ ನೀಡಲು ಅವಕಾಶ ಒದಗಿಸಲಾಗಿತ್ತು.
ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಲಸಿಕೆ ಸತತವಾಗಿ ಲಸಿಕೆ ನೀಡಲಾಗಿದ್ದು, 500ಕ್ಕೂ ಅಧಿಕ ಮಂದಿ ವಕೀಲರು, ಅವರ ಕುಟುಂಬಸ್ಥರು ಮತ್ತು ಸಿಬ್ಬಂದಿಗೆ ಲಸಿಕೆ ನೀಡಲಾಯಿತು. ಈ ಲಸಿಕಾ ಅಭಿಯಾನದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಅವಿರತವಾಗಿ ಭಾಗವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಎನ್. ನರಸಿಂಹ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಘವೇಂದ್ರ, ಖಜಾಂಚಿ ಅರುಣಾ ಬಿ.ಪಿ., ಜೊತೆ ಕಾರ್ಯದರ್ಶಿ ಶರ್ಮಿಳಾ ಕಾರ್ಯಕ್ರಮದ ನೇತೃತ್ವ ವಹಿಸಿದರು.
ಚಂದ್ರಹಾಸ ಕೊಟ್ಟಾರಿ, ಎಂ.ಎನ್. ವಿನಯ್ ಕುಮಾರ್, ಯುವರಾಜ್ ಅಮೀನ್, ರವಿರಾಜ್ ಶೆಟ್ಟಿ, ಪ್ರಮೋದ್ ಕೆರ್ವಾಶೆ, ವಿಕ್ರಮ್ ಪಡ್ವೆಂತಾಯ, ಟೀನಾ ಶೆಟ್ಟಿ, ಹರೀಶ್, ಪ್ರಮೋದ್ ಕುಮಾರ್, ವಿಜಯ್ ಕುಮಾರ್, ಪ್ರಸಾದ್ ಪೂಜಾರಿ, ಪ್ರೇಂ ಅಂಚನ್, ಸುಕೇಶ್ ಶೆಟ್ಟಿ, ಗಣೇಶ್ ಮೊದಲಾದವರು ಈ ಸಂದರ್ಭದಲ್ಲಿ ಲಸಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Click this button or press Ctrl+G to toggle between Kannada and English