ಕೋರೊನಾ ನಿಯಂತ್ರಣದಲ್ಲಿದೆ, ನಿರ್ಗಮಿಸಿಲ್ಲ : ಸಚಿವ ಸಿ.ಸಿ.ಪಾಟೀಲ

1:25 PM, Friday, June 25th, 2021
Share
1 Star2 Stars3 Stars4 Stars5 Stars
(4 rating, 1 votes)
Loading...

CC Pateel ಗದಗ : ಜಿಲ್ಲೆಯಲ್ಲಿ ಕೋರೊನಾ ಸೋಂಕು ಸದ್ಯಕ್ಕೆ ನಿಯಂತ್ರಣದಲ್ಲಿ ಹಾಗಂತ ಜನತೆ ಮೈಮರೆಯಬಾರದು. ಸೋಂಕು ಹರಡುವಿಕೆ ತಡೆಗೆ ಸರ್ಕಾರ ಸೂಚಿಸಿದ ಕ್ರಮ ಎಲ್ಲರೂ ಪಾಲಿಸುವದರೊಂದಿಗೆ ಜೀವಹಾನಿ ತಡೆಯಬೇಕು ಎಂದು ಸಣ್ಣ ಕೈಗಾರಿಕೆ, ವಾರ್ತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದರು.

ಗದಗ ತಾಲ್ಲೂಕಿನ ಅಡವಿ ಸೋಮಾಪುರ ದೊಡ್ಡತಾಂಡಾದಲ್ಲಿ ಗುರುವಾರ 2020-21ನೇ ಸಾಲಿನ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಮಂಜೂರಾದ ಸಭಾಭವನ ಶಂಕುಸ್ಥಾಪನೆ ನೆರವೇರಿಸಿ ಸಚಿವ ಸಿ.ಸಿ.ಪಾಟೀಲ ಅವರು ಮಾತನಾಡಿದರು. ಸಭಾಭವನ ಕಟ್ಟಡ ಕಾಮಗಾರಿ ಗುಣಮಟ್ಟದಿಂದ ಕುಡಿರುವಂತೆ ನಾಗರೀಕರು ನಿಗಾವಹಿಸಬೇಕು ಎಂದರು.

ದೇಶದ ಜನರೆಲ್ಲರೂ ಕೊರೋನಾ ಸೋಂಕಿನೊಟ್ಟಿಗೆ ಜೀವನ ಸಾಗಿಸುವ ಸಂದಿಗ್ದತೆ ಬಂದಿದೆ. ಗದಗ ಜಿಲ್ಲೆಯಲ್ಲಿ ಕೊರೋನಾ ಸೋಂಕು ನಿಯಂತ್ರಣದಲ್ಲಿದೆ, ನಿರ್ನಾಮವಾಗಿಲ್ಲ ಎಂಬುದನ್ನು ನಾವೆಲ್ಲ ಮರೆಯಬಾರದು. ಸೋಂಕು ನಿಯಂತ್ರಣ ಮುನ್ನೆಚ್ಚರಿಕಾ ಕ್ರಮಗಳಾದ ಮಾಸ್ಕ್ ಧರಿಸುವಿಕೆ, ಶುಚಿತ್ವ ಕಾಯ್ದುಕೊಳ್ಳುವಿಕೆ, ಸೋಪು ಹಾಗೂ ಸ್ಯಾನಿಟೈಜರ್ನಿಂದ ಆಗಾಗ ಕೈಗಳನ್ನು ಸ್ವಚ್ಛಗೊಳಿಸಬೇಕು. ಹಾಗೂ ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳುವುದರೊಂದಿಗೆ ಸೋಂಕು ನಿಯಂತ್ರಿಸಲು ಸಹಕಾರ ಅಗತ್ಯ ಎಂದರು.

ಕೋರೊನಾ ಸೋಂಕಿಕೆ ದೇಶದ ವಿಜ್ಞಾನಿಗಳ ಅವಿರತ ಶ್ರಮದಿಂದ ಶೀರ್ಘವೇ ಲಸಿಕೆ ಕಂಡುಹಿಡಿಯಲಾಗಿದೆ. ಸ್ವದೇಷಿ ಲಸಿಕೆಗಳಾದ ಕೋವಿಶೀಲ್ಡ, ಕೋವ್ಯಾಕ್ಸಿನ್ ಎಡರು ಸಹ ವಿಶ್ವಾಸಾರ್ಹವಾಗಿವೆ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮ ಆಗದು, ಎಲ್ಲರೂ ಲಸಿಕೆ ಪಡೆಯುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಅಡವಿ ಸೋಮಾಪುರ ಸಣ್ಣ ತಾಂಡಾ, ಡೊಡ್ಡ ತಾಂಡಾ ಮತ್ತು ಪಾಪನಾಶಿ ತಾಂಡಾಗಳಲ್ಲಿ ಕೋರೊನಾ ಮಹಾಮಾರಿ ಸೋಂಕಿನಿಂದ  ಸಂಕಷ್ಟಕ್ಕಿಡಾದ ಕುಟುಂಬಗಳಿಗೆ ಸಚಿವರು ಆಹಾರದ ಕಿಟ್ಗಳನ್ನು ವಿತರಿಸಿದರು. ಗ್ರಾಮಗಳ ಸಾರ್ವಜನಿಕರು ಸಚಿವರಲ್ಲಿ ಗ್ರಾಮಗಳ ಕುಂದುಕೊರತೆ, ಅಭಿವೃದ್ಧಿ ಕಾಮಗಾರಿಗಳ ಕುರಿತು ಬೇಡಿಕೆ ಸಲ್ಲಿಸಿದರು. ಪ್ರತಿಯಾಗಿ ಸಚಿವರು ಆಧ್ಯತೆ ಮೇರೆಗೆ ಈಡೇರಿಸುವ ಬರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಶಾಮಸುಂದರ್ ಡಂಬಳ, ಉಪಾಧ್ಯಕ್ಷೆ ಚನ್ನಮ್ಮ, ವಸಂತ ಮೇಟಿ ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English