ಬಸ್ ದರ ಏರಿಸುವ ಮೂಲಕ ಜನರಿಂದ ಮತ್ತೊಂದು ಸುಲಿಗೆ

4:46 PM, Sunday, June 27th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Udupi City Busಉಡುಪಿ : ಪೆಟ್ರೋಲ್ ಗ್ಯಾಸ್, ದಿನಸಿ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರನ್ನು ಬಸ್ ದರ ಏರಿಸುವ ಮೂಲಕ ಸರಕಾರ ಸುಲಿಗೆ ಮಾಡುತ್ತಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಆರೋಪಿಸಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಬಸ್ ಮಾಲಕರಿಗೆ, ಚಾಲಕರಿಗೆ ಹಾಗೂ ನಿರ್ವಾಹಕರಿಗೆ ಸರಕಾರ ಯಾವುದೇ ಆರ್ಥಿಕ ನೆರವು ನೀಡಲ್ಲ ಎಂದು  ಸಮಿತಿ ಹೇಳಿದೆ.

ಖಾಸಗಿ ಬಸ್ ಟಿಕೇಟು ದರ 13ರೂ. ಇದ್ದದ್ದು ಮೊದಲ ಅಲೆ ನಂತರ ಶೇ.50 ಪ್ರಯಾಣಿಕರಿಗೆ ಅವಕಾಶ ನೀಡಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಬಸ್ ಓಡಿಸಿದಾಗ 20 ರೂ. ಆಗಿತ್ತು. ಲಾಕ್‌ಡೌನ್ ಸಡಿಲ ಆದಾಗಲೂ ಇಂಧನ ಬೆಲೆ ಏರಿಕೆಯ ನೆಪವೊಡ್ಡಿ ಯಾವುದೇ ಬಸ್‌ಗಳು ಕೂಡ ಟಿಕೇಟು ದರವನ್ನು ಪೂರ್ವದರಕ್ಕೆ ಇಳಿಸಲಿಲ್ಲ ಎಂದು ಕಾಂಗ್ರೆಸ್ ದೂರಿದೆ.

ಇದೀಗ ಎರಡನೇ ಅಲೆಯ ಲಾಕ್‌ಡೌನ್ ಸಡಿಲಿಕೆ ಆದಾಗ ಶೇ.50 ಪ್ರಯಾಣಿಕರಿಗೆ ಬಸ್‌ನಲ್ಲಿ ಅವಕಾಶ ನೀಡುವ ಮಾರ್ಗಸೂಚಿ ಅನುಸರಿಸುವಾಗ ಶೇ.25 ಟಿಕೇಟು ದರ ಹೆಚ್ಚಿಸುವ ಸರಕಾರದ ನಿರ್ಧಾರವನ್ನು ಸರಿಯಲ್ಲ ಎಂದು ಸಮಿತಿ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಖಂಡಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English