ವಿವಿ ಕಾಲೇಜು: 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊವಿಡ್‌ ಲಸಿಕೆ

6:15 PM, Monday, June 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

Student-Vaccination ಮಂಗಳೂರು: ಕೊವಿಡ್‌-19 ಸಾಂಕ್ರಾಮಿಕದ ಮಿರುದ್ಧ ಭಾರತ ಸರ್ಕಾರ ಹಮ್ಮಿಕೊಂಡಿರುವ ರಾಷ್ಟ್ರೀಯ ಲಸಿಕಾ ಅಭಿಯಾನದಡಿ ಎನ್‌ಎಸ್‌ಎಸ್‌ ಸಹಯೋಗದಲ್ಲಿ, ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಮೊದಲ ಹಂತದ ಲಸಿಕಾಕರಣದಲ್ಲಿ ಸುಮಾರು 425 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಯಿತು.

ವಿದ್ಯಾರ್ಥಿಗಳು, ಬೆಳಗ್ಗಿನಿಂದಲೇ ಕಾಲೇಜಿಗೆ ಬಂದು ಕೂಪನ್‌ ಪಡೆದುಕೊಂಡು, ಕೊವಿನ್‌ ಅಪ್ಲಿಕೇಶನ್‌ನಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡು ಉತ್ಸಾಹದಿಂದ ಲಸಿಕೆ ಪಡೆದುಕೊಂಡರು. ಈ ಮುನ್ನ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ. ಬಿ ವಿ ರಾಜೇಶ್‌, ವಿದ್ಯಾರ್ಥಿಗಳಿಗೆ ಕೊವಿಡ್‌ ವಿರುದ್ಧದ ಲಸಿಕೆಯ ಉದ್ದೇಶ, ಲಾಭಗಳು ಮತ್ತು ವಹಿಸಬೇಕಾದ ಮುನ್ನಚ್ಚರಿಕೆಯ ಕುರಿತು ವಿವರಿಸಿದರು. ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ಕೊವಿಡ್‌ ಲಸಿಕೆ ಪಡೆದುಕೊಳ್ಳಿ ಎಂದು ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರಾಂಶುಪಾಲೆ ಡಾ. ಅನಸೂಯ ರೈ, ಮಂಗಳೂರು ವಿಶ್ವವಿದ್ಯಾನಿಲಯ ಎನ್‌.ಎಸ್‌.ಎಸ್‌ ಕಾರ್ಯಕ್ರಮಾಧಿಕಾರಿ ಡಾ. ಕೆ ಎ ನಾಗರತ್ನ, ಕಾಲೇಜಿನ ಎನ್‌.ಎಸ್‌.ಎಸ್‌ ಅಧಿಕಾರಿಗಳಾದ ಡಾ. ಗಾಯತ್ರಿ ಮತ್ತು ಡಾ. ಸುರೇಶ್‌, ಮಂಗಳೂರು ವಿಶ್ವವಿದ್ಯಾನಿಲಯದ ರೆಡ್‌ಕ್ರಾಸ್‌ ನೋಡಲ್‌ ಅಧಿಕಾರಿ ಡಾ. ಗಣಪತಿ ಗೌಡ, ಕಾಲೇಜಿನ ಕೊವಿಡ್‌ ನೋಡಲ್‌ ಅಧಿಕಾರಿ ಡಾ. ಭಾರತಿ ಪ್ರಕಾಶ್‌ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

Student-Vaccination

Student-Vaccination

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English