ತಮಿಳು , ತೆಲುಗು, ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ ನಟಿ ತ್ರಿಷಾ ಕೃಷ್ಣನ್ ಚೊಚ್ಚಲ ಕನ್ನಡ ಚಿತ್ರ ‘ರಮ್’ ನಲ್ಲಿ ಅಭಿನಯಿಸುತ್ತಿದ್ದಾಳೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ರಮ್’ ಇದೊಂದು ತ್ರಿಭಾಷಾ ಚಿತ್ರವಾಗಿದ್ದು ಕನ್ನಡ ಸೇರಿದಂತೆ ತೆಲುಗು, ತಮಿಳಿನಲ್ಲೂ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆ. ಜನವರಿ 2013ಕ್ಕೆ ಸೆಟ್ಟೇರಲಿರುವ ಈ ಚಿತ್ರದ ಟೈಟಲ್ RUM (ರಂಭೆ ಊರ್ವಶಿ ಮೇನಕೆ). ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಚಿತ್ರದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಇನ್ನೂ ಏನನ್ನು ಹೇಳಿಲ್ಲ.
ಟಾಲಿವುಡ್ ಟಾಪ್ ನಿರ್ಮಾಪಕರಲ್ಲಿ ಒಬ್ಬರಾದ ಎಂ.ಎಸ್.ರಾಜು ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಹಿಂದೆಯೂ ಕನ್ನಡದಲ್ಲಿ ಅಭಿನಯಿಸುವಂತೆ ಬಹಳಷ್ಟು ಆಫರ್ ಗಳು ಬಂದಿದ್ದವು ಆದರೆ ಯಾವುದಕ್ಕೂ ಸಹಿ ಹಾಕಿರಲಿಲ್ಲ ಎಂದಿದ್ದಾರೆ ತ್ರಿಷಾ. ಆದರೆ ಈಗ ಕನ್ನಡ ಚಿತ್ರಕ್ಕೆ ಸಹಿಹಾಕಿರುವ ತ್ರಿಷಾ ಕಲಾವಿದರಿಗೆ ಭಾಷೆ ಯಾವುದಾದರೇನು, ಅವರಿಗೆ ಭಾಷೆಯ ಹಂಗಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೇ ತ್ರಿಷಾ ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿತ್ತು. ಅದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಿಎಂ (ಕಾಮನ್ ಮ್ಯಾನ್) ಚಿತ್ರ ಎಂಬ ಸುದ್ದಿ ಇತ್ತು. ಈ ಚಿತ್ರಕ್ಕಾಗಿ ರು.80 ಲಕ್ಷ ಸಂಭಾವನೆಯನ್ನೂ ತ್ರಿಷಾ ಅವರಿಗೆ ನೀಡಲಾಗಿದೆ ಎನ್ನಲಾಗಿತ್ತು. ಬಳಿಕ ಆ ಚಿತ್ರದ ಕಥೆ ಏನಾಯಿತೋ ಏನೋ ತಿಳಿಯಲಿಲ್ಲ.
Click this button or press Ctrl+G to toggle between Kannada and English