“ಕಾಂಗ್ರೆಸ್ ನಾಲ್ಕು ಗುಂಪುಗಳನ್ನು ಹೊಂದಿರುವ ಒಂದೇ ಪಕ್ಷ” ಕಂದಾಯ ಸಚಿವ ಆರ್ ಅಶೋಕ್

10:45 PM, Monday, June 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

Kempe gowda ಬೆಂಗಳೂರು  :  ನಮ್ಮಲ್ಲಿ ಒಂದೇ ಬಾಗಿಲು ಒಬ್ಬರೇ ನಾಯಕರು, ಕಾಂಗ್ರೆಸ್‍ನಲ್ಲಿ ಒಂದೇ ಮನೆ ನಾಲ್ಕು ಬಾಗಿಲು” ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ, “ಕಾಂಗ್ರೆಸ್ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿದೆ, ನಮ್ಮಲ್ಲಿ ಬಿದ್ದಿರುವ ನೊಣದ ಬಗ್ಗೆ ಕಾಂಗ್ರೆಸ್‍ನವರು ಮಾತನಾಡುತ್ತಾರೆ. ಮೊದಲು ನಿಮ್ಮ ತಟ್ಟೆಯನ್ನು ಗಂಜಲ ಹಾಕಿ ಶುದ್ದಿ ಮಾಡಿ. ಆಮೇಲೆ ಬೇರೆಯವರನ್ನು ಟೀಕೆ ಮಾಡಬಹುದು” ಎಂದರು.

ದಲಿತರು ಸಿಎಂ ಆಗಬೇಕು ಅಂತ ಒಂದು ಬಾಗಿಲು, ಒಕ್ಕಲಿಗರು ಆಗಬೇಕು ಅಂತ ಒಂದು ಬಾಗಿಲು, ಹಿಂದುಳಿದ ವರ್ಗ ಆಗಬೇಕು ಅಂತ ಒಂದು ಬಾಗಿಲು, ಲಿಂಗಾಯತರು ಸಿಎಂ ಆಗಬೇಕು ಅಂತ ಮತ್ತೊಂದು ಬಾಗಿಲು. ಕಾಂಗ್ರೆಸ್‍ನ ಎಲ್ಲ ಗುಂಪುಗಳು ದೆಹಲಿ ತಲುಪುವುದಕ್ಕೆ ಪ್ರಾರಂಭಿಸಿದೆ. ಎರಡು ಗುಂಪುಗಳು ಈಗಾಗಲೇ ದೆಹಲಿಗೆ ಹೋಗಿವೆ, ಉಳಿದ ಎರಡು ಗುಂಪುಗಳು ಬೆಂಗಳೂರಿನಲ್ಲೇ ಇವೆ. ನಮ್ಮಲ್ಲಿ ಎಲ್ಲವೂ ಕ್ಲಿಯರ್ ಇದೆ, ಯಡಿಯೂರಪ್ಪ ನವರೇ ನಮ್ಮ ನಾಯಕರು” ಎಂದು ಹೇಳಿದರು.

ಮೂರನೇ ಕೋವಿಡ್ ಅಲೆ ನಿರ್ವಹಣೆಗೆ ಸಚಿವರ ಪ್ರತ್ಯೇಕ ಸಮಿತಿ ಮಾಡಲಾಗುವುದು. ಈಗ ಇರುವ ಕೋವಿಡ್ ಉಸ್ತುವಾರಿ ಸಚಿವರನ್ನು ಕೈ ಬಿಟ್ಟು ಹೊಸ ಸಮಿತಿ ರಚನೆ ಮಾಡುವಂತೆ ನಾನೇ ಸಿಎಂ ಯಡಿಯೂರಪ್ಪ ಅವರಿಗೆ ವಿನಂತಿ ಮಾಡಿದ್ದೇನೆ. ಈಗ ಇರುವ ಸಮಿತಿಯಲ್ಲಿ ನಾವೆಲ್ಲರೂ ಕೈ ಜೋಡಿಸಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

Kempe gowda ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ನ್ಯೂಟ್ರಿಷನ್ ಕಿಟ್‍ಗಳು:

ದೇಶದ ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕರ್ನಾಟಕವು ಒಂದು ಮಾದರಿ ರಾಜ್ಯವಾಗಿದೆ ಎಂದು ಶ್ರೀ ಅಶೋಕ ಹೇಳಿದರು. “ಸಂಭವನೀಯ ಮೂರನೇ ಅಲೆಯನ್ನು ನಿಭಾಯಿಸಲು ನಾವು ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದ್ದೇವೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಮೀಕ್ಷೆಯನ್ನು ನಾವು ಪ್ರಾರಂಭಿಸಿದ್ದೇವೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದ ಕಡೆಯಿಂದಲೇ ಪೌಷ್ಟಿಕ ಆಹಾರ ಒದಗಿಸಲು ಸಿದ್ಧತೆ ನಡೆಸಲಾಗಿದೆ” ಎಂದು ತಿಳಿಸಿದರು.

ರಾಜ್ಯದ ಜಿಲ್ಲೆಗಳಲ್ಲಿ ಸರಾಸರಿ 2000-3000 ಅಪೌಷ್ಟಿಕ ಮಕ್ಕಳಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೇ ಸುಮಾರು 1500 ಜನ ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರುತಿಸಿ ಮತ್ತು ಅವರಿಗೆ ಬಾದಮ್ ಪೌಡರ್, ಹಾಲಿನ ಪುಡಿ, ಬಿಸ್ಕತ್ತು, ಮಲ್ಟಿ-ವಿಟಮಿನ್ ಸಿರಪ್, ಡ್ರೈ ಫ್ರೂಟ್ಸ್, ಮಾಸ್ಕ್ ಮತ್ತು ಡೆಟ್ಟೋಲ್ ಸೋಪ್ ಸೇರಿದಂತೆ ಪೌಷ್ಠಿಕಾಂಶದ ಆಹಾರ ಕಿಟ್‍ಗಳನ್ನು ಪೂರೈಸಬೇಕು. ವಿಪತ್ತು ನಿರ್ವಹಣಾ ನಿಧಿಯಡಿ ಹಣವನ್ನು ಬಿಡುಗಡೆ ಮಾಡಲಾಗುವುದು ಮತ್ತು ನಾನು ಈಗಾಗಲೇ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ” ಎಂದು ಆರ್ ಅಶೋಕ್ ಹೇಳಿದರು.

ಕುಮಾರಸ್ವಾಮಿ ಲೇಔಟ್ ನಲ್ಲಿ ಕೆಂಪೇಗೌಡರ ಪ್ರತಿಮೆಗೆ ಹೂಮಾಲೆ ಅರ್ಪಿಸಿ 512ನೇ ಜನ್ಮದಿನ ಆಚರಿಸಿ, ಆಹಾರ ಕಿಟ್ ವಿತರಿಸಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್

Kempe gowda “ನಾಡಪ್ರಭು ಕೆಂಪೇಗೌಡರು ದಾರ್ಶನಿಕರಾಗಿದ್ದರು. ಬೆಂಗಳೂರಿನಲ್ಲಿ ಯಾವುದೇ ನದಿ ಇಲ್ಲದ ಕಾರಣ, ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳನ್ನು ಪೂರೈಸಲು ಅವರು ಬೆಂಗಳೂರಿನಾದ್ಯಂತ ಕೆರೆಗಳನ್ನು ನಿರ್ಮಿಸಿದರು” ಎಂದು ಹೇಳಿದರು. ನಂತರ, ಅವರು ಜೆಸಿಬಿ ಮತ್ತು
ಟ್ರ್ಯಾಕ್ಟರ್ ಚಾಲಕರಿಗೆ ಆಹಾರ ಕಿಟ್‍ಗಳನ್ನು ವಿತರಿಸಿದರು.

ಮಡಿವಾಳ ಸಮುದಾಯಕ್ಕೆ ಆಹಾರ ಕಿಟ್‍ಗಳನ್ನು ವಿತರಿಸಲಾಗಿದ್ದು, ಪದ್ಮನಾಭನಗರ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಕಂದಾಯ ಸಚಿವ ಆರ್ ಅಶೊಕ್ ನೇತೃತ್ವದಲ್ಲಿ ಸೋಮವಾರ ಕಿಟ್ ವಿತರಣಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English