ಬೆಂಗಳೂರು : ವಿವಿಧ ಕಂಪನಿಗಳ ವತಿಯಿಂದ 40 ಐಸಿಯು ಹಾಸಿಗೆಗಳನ್ನು ಹಾಗೂ ವೈದ್ಯಕೀಯ ಉಪಕರಣಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಇಂದು ಹಸ್ತಾಂತರ ಮಾಡಲಾಯಿತು.
ಸಿ.ಐ.ಐ, ಎಂಬೆಸ್ಸಿ, 3 ಎಂ, ಸ್ವಿಸ್ ರೇ, ಕ್ಯಾಪಿಟಲ್ ಲ್ಯಾಂಡ್ ಹೋಪ್ ಪೌಂಡೇಷನ್ ಆಕ್ಸಾ, ಐಕೆಮಾ ಸಂಸ್ಥೆಗಳು ತಮ್ಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ 40 ಐಸಿಯು ಹಾಸಿಗೆಗಳು ಹಗೂ ವೈದ್ಯಕೀಯ ಉಪಕರಣಗಳನ್ನು ಒದಗಿಸಿರುವುದು ಶ್ಲಾಘನೀಯ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕೋವಿಡ್ ವಿರುದ್ಧದ ಹೋರಾಟದಲ್ಲಿ ವಿವಿಧ ಸಂಘ ಸಂಸ್ಥೆಗಳು ಮತ್ತು ಕಂಪನಿಗಳು ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ನೀಡುತ್ತಿರುವುದರಿಂದ ನಮ್ಮ ಆತ್ಮವಿಶ್ವಾಸ ಇಮ್ಮಡಿಯಾಗಿದೆ. ಕೋವಿಡ್ ಸಾಂಕ್ರಾಮಿಕವನ್ನು ನಿಯಂತ್ರಿಸಲು ಎಲ್ಲರೂ ಕೈಜೋಡಿಸಿದಾಗ ಮಾತ್ರ ನಾವು ಗೆಲುವು ಸಾಧಿಸಲು ಸಾಧ್ಯ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಇದಲ್ಲದೆ, ಲೋವ್ಸ್ ಇಂಡಿಯಾ ಸಂಸ್ಥೆಯು ಸಂಭವ್ ಪ್ರತಿಷ್ಠಾನದ ಮುಖಾಂತರ 500 ಎಲ್.ಎಂ.ಪಿ ಆಮ್ಲಜನಕ ಘಟಕವನ್ನು ಸ್ಥಾಪಿಸಲು ಮುಂದಾಗಿದೆ. ಯೂಯಿಲ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಯು 50 ಆಕ್ಸಿಜನ್ ಕಾಂನ್ಸನ್‍ಟ್ರೇಟರ್ಸ್ ಹಾಗೂ ಇಂಡಿಯನ್ ಅಮೇರಿಕನ್ ಡೋನರ್ಸ್ ವತಿಯಿಂದ 50 ವೆಂಟಿಲೇಟರ್ ಗಳನ್ನು ಇಂದು ಸ್ವೀಕರಿಸಲಾಗಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಹಾಗೂ ಕೋವಿಡ್ ಆಸ್ಪತ್ರೆ ನಿರ್ಮಾಣದ ನೋಡಲ್ ಅಧಿಕಾರಿ ಡಾ; ಪಿ.ಎಸ್. ಹರ್ಷ ಹಾಗೂ ಕಂಪನಿಗಳ ಪ್ರತಿನಿಧಿಗಳ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English