ಗದಗ : ನಾಲ್ಕು ಜನ ದರೋಡೆ ಕೋರರ ತಂಡವೊಂದು ಹೈವೇ ಪೆಟ್ರೋಲ್ ಬಂಕ್ ಬಳಿ ರಾತ್ರಿ ನಿಲ್ಲಿಸಿದ ವಾಹನಗಳ ಮೇಲೆ ದಾಳಿಮಾಡುತ್ತಿರುವ ಘಟನೆ ಜಿಲ್ಲೆಯ ಮುಂಡರಗಿ ಹೊರವಲಯದಲ್ಲಿ ನಡೆದಿದೆ.
ತಡರಾತ್ರಿ ನಿದ್ರೆ ಬರುತ್ತಿದ್ದಂತೆ ಬಂಕ್ ಹಾಗೂ ಡಾಬಾ ಬಳಿ ವಾಹನಗಳನ್ನು ನಿಲ್ಲಿಸಿ ರೆಸ್ಟ್ ಮಡುವ ವೇಳೆ ದಾಳಿ ಮಾಡುತ್ತಿರುವ ದೃಶ್ಯ ಅರಭಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿಯ ಮುಂಡರಗಿ ಹೊರವಲಯದ ವಿರೇಶ್ ಎಂಟರ್ ಪ್ರೈಸಸ್ ಪೆಟ್ರೋಲ್ ಬಂಕ್ ಬಳಿ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಜರ್ಕಿನ್ ಹಾಕಿಕೊಂಡು ಮುಖಕ್ಕೆ ಮಂಕಿ ಕ್ಯಾಪ್, ಅಥವಾ ಕರವಸ್ತ್ರ ಕಟ್ಟಿಕೊಂಡು ಬಂದು, ಚಾಕು, ಚೂರಿ, ಪಿಸ್ತೂಲ್ ತೋರಿಸಿ ಬೆದರಿಕೆ ಹಾಕುತ್ತಾರೆ. ಚಾಲಕ ಹಾಗೂ ಕ್ಲೀನರ್ ಬಳಿ ಇರುವ ಹಣ ಹಾಗೂ ಆಭರಣಗಳು ದೋಚುತ್ತಿರುವ ಕೃತ್ಯ ಅನೇಕ ದಿನಗಳಿಂದ ನಡೆಯುತ್ತಿದೆ.
ಒಂದೇ ತಿಂಗಳಲ್ಲಿ ಇಂತಹ ನಾಲ್ಕೈದು ಪ್ರಕರಣಗಳು ನಡೆದಿವೆ ಎನ್ನಲಾಗುತ್ತಿದೆ. ರಾತ್ರಿ ವೇಳೆ ಮಾರಾಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡುವ ದರೋಡೆಕೋರರ ದರ್ಪಕ್ಕೆ ಅನೇಕ ವಾಹನ ಚಾಲಕ ಹಾಗೂ ಕ್ಲೀನರ್ ಗಳು, ಬಂಕ್ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.
ನಾಲ್ಕು ಜನ ದರೋಡೆಕೋರರ ಅಟ್ಟಹಾಸ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದರೂ, ಸಂಬಂಧಿಸಿದ ಪೊಲೀಸರು ರಾತ್ರಿ ವೇಳೆ ನಿದ್ದೆಯಲ್ಲೇ ಇದ್ದಾರೆ ಎಂದು ಜನರು ಆರೋಪಿಸುತ್ತಿದ್ದಾರೆ. ಸದ್ಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Click this button or press Ctrl+G to toggle between Kannada and English