ಸಿದ್ದಲಿಂಗಯ್ಯ ಸ್ಮಾರಕ ನಿರ್ಮಾಣ ಶೀಘ್ರದಲ್ಲೇ ನಿರ್ಧಾರ ಸಚಿವ ಅರವಿಂದ ಲಿಂಬಾವಳಿ

7:33 PM, Friday, July 2nd, 2021
Share
1 Star2 Stars3 Stars4 Stars5 Stars
(No Ratings Yet)
Loading...

Siddalingayya ಬೆಂಗಳೂರು  : ಇತ್ತೀಚೆಗೆ ನಿಧನರಾದ ಕವಿ, ನಾಡೋಜ ಡಾ. ಸಿದ್ದಲಿಂಗಯ್ಯ ಅವರ ಸ್ಮಾರಕ ನಿರ್ಮಾಣ ದ ಬಗ್ಗೆ ಶೀಘ್ರದಲ್ಲೇ ಸನ್ಮಾನ್ಯ ಮುಖ್ಯ ಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅರಣ್ಯ ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಅವರು ಇಂದು ದಿ. ಡಾ. ಸಿದ್ದಲಿಂಗಯ್ಯ ಅವರ ಮನೆಗೆ ಭೇಟಿ ಕೊಟ್ಟು ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಕುಟುಂಬ ಸದಸ್ಯರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ಈ ಭರವಸೆ ನೀಡಿದರು.

ನಂತರ ಮಾತನಾಡಿದ ಅವರು ಸಿದ್ದಲಿಂಗಯ್ಯ ಅವರು ಇಡೀ ಕರ್ನಾಟಕದ ಆಸ್ತಿ ಅವರು ನೀಡಿದ ಕೊಡುಗೆ ಈನಾಡು ಮರೆಯುವಂತಿಲ್ಲ ಅವರು ನನ್ನೊಂದಿಗೆ ಅತ್ಯಂತ ಆತ್ಮೀಯ ಸಂಬಂಧ ಹೊಂದಿದ್ದರು, ಕನ್ನಡ ಪುಸ್ತಕ ಪ್ರಾಧಿಕಾರ ದಲ್ಲಿ ಪರಿಶಿಷ್ಟ ಜಾತಿ ವರ್ಗದವರ ಹೊಸ ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರೊಂದಿಗೆ ಭಾಗವಹಿಸಿದ್ದೆ, ಅದೇ ಅವರ ಕಡೆಯ ಕಾರ್ಯಕ್ರಮ ಎಂದು ಅವರು ತಿಳಿಸಿದರು.

Siddalingayya ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಿದ್ದಲಿಂಗಯ್ಯ ಅವರ ಸ್ಮಾರಕ ನಿರ್ಮಿಸುವುದು, ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸಿದ್ದಲಿಂಗಯ್ಯ ನವರ ಕುಟುಂಬ ನಮಗೆ ಸಲ್ಲಿಸಿದೆ. ಅವರ ಬೇಡಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಅವರು ಹೇಳಿದರು.

ಸಿದ್ದಲಿಂಗಯ್ಯನವರ ಪತ್ನಿ ರಮಾಕುಮಾರಿ, ಪುತ್ರಿ ಡಾ. ಮಾನಸ, ಅಳಿಯ ಡಾ. ಗಿರೀಶ್ ಮತ್ತು ಅವರ ಸಹೋದರ ಶಿವಶಂಕರ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು .

ಸಿದ್ದಲಿಂಗಯ್ಯ ಅವರ ಪುಸ್ತಕಗಳ ಸಂಗ್ರಹವನ್ನು ವೀಕ್ಷಿಸಿದ ಸಚಿವರಿಗೆ ಅವರ ಕುಟುಂಬದವರು ಇತ್ತೀಚಿನ ಅವರ ಪ್ರಕಟಿತ ಪುಸ್ತಕಗಳನ್ನು ನೀಡಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English