ನಿಂಬೆಹಣ್ಣು ಚೀಲಗಳ ನಡುವೆ ಅಕ್ರಮವಾಗಿ 40 ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರ ವಶ

3:47 PM, Saturday, July 3rd, 2021
Share
1 Star2 Stars3 Stars4 Stars5 Stars
(No Ratings Yet)
Loading...

Ganja ಮಂಗಳೂರು: ನಿಂಬೆಹಣ್ಣು ತುಂಬಿದ ಚೀಲಗಳ ನಡುವೆ  ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 40 ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳದ ಶಿಹಾಬುದ್ದೀನ್ ಹಾಗೂ ಲತೀಫ್ ಬಂಧಿತರು. ನಗರದ ಕೊಟ್ಟಾರಚೌಕಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆರೋಪಿಗಳು ಪತ್ತೆಯಾಗಿದ್ದಾರೆ. ಬೊಲೆರೊ ವಾಹನ ಸಮೇತ ಒಟ್ಟು 11.17 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಾಂಜಾ ರಾಕೆಟ್ 

ಮಂಗಳೂರು ಪೊಲೀಸರು ಬೆಂಗಳೂರಿಗೆ ತೆರಳಿ ಬೀದರಹಳ್ಳಿಯಿಂದ 3.50 ಲಕ್ಷ ರೂ.ಮೌಲ್ಯದ 55 ಗ್ರಾಂ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.

ಈಗಾಗಲೇ ಬಂಧಿತ ನೈಜೀರಿಯಾ ಪ್ರಜೆ ಪೌಲ್ ಒಹಮೊಬಿ ಹಾಗೂ ಕೇರಳದ ಮಹಮ್ಮದ್ ರಮೀಝ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಮತ್ತಷ್ಟು ಮಾಹಿತಿಗಳು ಪೊಲೀಸರಿಗೆ ಲಭಿಸಿದೆ.

ಅದರಂತೆ ಬೆಂಗಳೂರಿಗೆ ತೆರಳಿದ. ಪೊಲೀಸ್ ತಂಡ ದೊಡ್ಡ ಮಟ್ಟದಲ್ಲಿ ಡ್ರಗ್ಸ್ ವಶಕ್ಕೆ ಪಡೆದಿದೆ. ಮಂಗಳೂರು ಕಡೆಗೆ ಸಾಗಾಟ ಮಾಡಲು ಕಾರಿನಲ್ಲಿ ಇಡಲಾಗಿದ್ದ 55 ಗ್ರಾಂ ಎಂಡಿಎಂಎ ಸಹಿತ ಕಾರು ಹಾಗೂ 70 ಸಾವಿರ ರೂ.ವಶಕ್ಕೆ ಪಡೆದಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English