ಮನೆಯಲ್ಲಿ ಮಲಗಿದ್ದ ನಾಯಿಯನ್ನು ಹಿಡಿದ ಚಿರತೆ, ಆದರೂ ನಾಯಿ ಬದುಕಿದ್ದು ಹೇಗೆ ಗೊತ್ತಾ ?

4:38 PM, Saturday, July 3rd, 2021
Share
1 Star2 Stars3 Stars4 Stars5 Stars
(No Ratings Yet)
Loading...

chita ಮೂಡುಬಿದಿರೆ:  ಚಿರತೆಯೊಂದು ಮನೆಯಂಗಳಕ್ಕೆ ಬಂದು ನಾಯಿಯೊಂದನ್ನು ಹಿಡಿದಿದ್ದು, ಚಿರತೆ ಕಾಂಪೌಂಡ್ ಹಾರುವ ವೇಳೆ ಚಿರತೆಯ ಬಾಯಿಯಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪಡುಕೋಣಾಜೆಯ ಸತೀಶ್ ಎಂಬವರ ಮನೆಯ ಬಳಿ ಗುರುವಾರ ರಾತ್ರಿ ಅಡ್ಡಾಡುತ್ತಿದ್ದ ಚಿರತೆ ಮನೆಯಂಗಳದಲ್ಲಿ ಮಲಗಿದ್ದ ನಾಯಿಯನ್ನು ಎತ್ತಿಕೊಂಡು ಹೋಗಲು ಪ್ರಯತ್ನಿಸಿ ವಿಫಲವಾಗಿದೆ.

ಸ್ಥಳಕ್ಕೆ ಉಪವಲಯಾರಣ್ಯಾಧಿಕಾರಿ ಮಂಜುನಾಥ ಗಾಣಿಗ ಮತ್ತು ಸಿಬ್ಬಂದಿ ಭೇಟಿ ನೀಡಿದ್ದಾರೆ. ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಜೊತೆ ಮಾತುಕತೆ ನಡೆಸಿದ್ದು, ಚಿರತೆಯನ್ನು ಹಿಡಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English