ಸುಳ್ಯ : ಕೊರೋನ ಸಂಕಷ್ಟದ ಈ ಸಮಯದಲ್ಲಿ ಭಾರತೀಯ ಜನಾತ ಪಾರ್ಟಿ ಮುಳ್ಯ ಅಟ್ಲೂರ್ ಮತ್ತು ಪ್ರಣವ್ ಪೌಂಡೇಶನ್ ಇವರ ಸಹಬಾಗಿತ್ವದಲ್ಲಿ ಮುಳ್ಯ 6 ನೆ ವಾರ್ಡ್ ನ ಬಿ ಪಿ ಎಲ್ ಕಾರ್ಡ್ ದಾರರಿಗೆ ಫುಡ್ ಕಿಟ್ ವಿತರಣೆ ಕಾರ್ಯಕ್ರಮ ಜು. 4 ರಂದು ಮುಳ್ಯ ಭಜನಾ ಮಂದಿರ ಆವರಣದಲ್ಲಿ ನಡೆಯಿತು.
ಮೀನುಗಾರಿಕೆ ಬಂದರು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ ಪುಡ್ ಕಿಟ್ ವಿತರಣೆಗೆ ಚಾಲನೆ ನೀಡಿದರು.
ಸಚಿವರಿಗೆ ಗ್ರಾಮಸ್ಥರಿಂದ ಸನ್ಮಾನ ನಡೆದ ನಂತರ ಸಾಂಕೇತಿಕವಾಗಿ 10 ಜನರಿಗೆ ಕಿಟ್ ನೀಡಲಾಯಿತು.
ಸುಳ್ಯ ಬಿ ಜೆ ಪಿ ಮಂಡಲ ಅದ್ಯಕ್ಷ ಹರೀಶ್ ಕಂಜಿಪಿಲಿ, ಕಾರ್ಯದರ್ಶಿ ಸುಭೋದ್ ಶೆಟ್ಟಿ ಮೇನಾಲ, ತಾಲೂಕು ಪಂಚಾಯತ್ ಮಾಜಿ ಅದ್ಯಕ್ಷ ಚನಿಯ ಕಲ್ತಡ್ಕ, ಅಜ್ಜಾವರ ಗ್ರಾ ಪಂ ಅದ್ಯಕ್ಷೆ ಸತ್ಯವತಿ ಬಸವನಪಾದೆ, ಸದಸ್ಯೆ ರತ್ನಾವತಿ, ದೇವಪ್ಪಗೌಡ ಮುಳ್ಯ, ರುದ್ರಪ್ಪ ಗೌಡ, ಮನ್ಮಥ ಗೌಡ ಮುಳ್ಯ, ತಾರನಾಥ ಅತ್ಯಡ್ಕ, ಸುಳ್ಯ ಸಿ ಎ ಬ್ಯಾಂಕ್ ನಿರ್ದೇಶಕ ವಾಸುದೇವ ನಾಯಕ್, ಗುರುದತ್ ನಾಯಕ್, ಕಿಟ್ಟಣ್ಣ ರೈ ಮೇನಾಲ, ಪ್ರಭೋದ್ ಶೆಟ್ಟಿ ಮೇನಾಲ, ಸುನೀಲ್ ರೈ ಮೇನಾಲ, ಊರವರು ಭಾಗವಸಿದ್ದರು, ಸುಳ್ಯ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ವೆಂಕಟ್ರಮಣ ಮುಳ್ಯ ಸ್ವಾಗತಿಸಿ, ನಾಗರಾಜ್ ಮುಳ್ಯ ವಂದಿಸಿದರು.
ವಾರ್ಡ್ ವ್ಯಾಪ್ತಿಯ 200 ಕುಟುಂಬಗಳಿಗೆ ಸಾವಿರದ ನೂರು ರೂ. ಮೌಲ್ಯದ ಆಹಾರದ ಕಿಟ್‌ನ್ನು ವಿತರಿಸಲಾಯಿತು.
Click this button or press Ctrl+G to toggle between Kannada and English