ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಕ್ಕೆ ತುಳು ಚಲನಚಿತ್ರ ಭರತ್ ಆಯ್ಕೆ

2:02 PM, Monday, July 5th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

bharathಮಂಗಳೂರು : ವೈಷ್ಣವ ಪ್ರೊಡಕ್ಷನ್ ರತ್ನಾಗಿರಿ ಹಾಗೂ ಮಹಾರಾಷ್ಟ್ರ ತುಳುವರ ಕೂಡುವಿಕೆಯಿಂದ ಅದ್ದೂರಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವು ತುಳು ಕನ್ನಡ ಒಳಗೊಂಡಂತೆ 7 ಬಾಷೆಗಳಲ್ಲಿ ತೆರೆ ಕಾಣಲಿದೆ.

ತುಳುನಾಡ ಸಂಸ್ಕೃತಿ ಹಾಗೂ ಉದ್ಯೋಗ ಅರಸಿ ಮುಂಬೈನ ಕಡೆ ಮುಖಮಾಡಿದ ತುಳುವರ ಮನಸಿನಲ್ಲಿ ಇರುವ ತುಳುನಾಡ ಬಗೆಗಿನ ಅಭಿಮಾನ ಹಾಗೂ 100 ವರ್ಷಗಳಿಂದೀಚೆ ತುಳುವರ ಜೀವನ ಶೈಲಿ ಹಾಗೂ ಬೆಳವಣಿಗೆ ಹಾಗೂ ನಂಬಿಕೆ ಆಚರಣೆಗಳನ್ನು ವಿಶ್ವಕ್ಕೆ ತೋರಿಸುವ ಮತ್ತು ತುಳುನಾಡ ಜಾನಪದ ಸಂಸ್ಕೃತಿಗೆ ಹಾಗೂ ತುಳುವರಿಗೆ ಸಿಗಬೇಕಾದ ಸ್ಥಾನಮಾನದ ಬಗ್ಗೆ ಬೆಳಕು ಚೆಲ್ಲವ ಸಣ್ಣ ಪ್ರಯತ್ನದಲ್ಲಿ ಯಶಸ್ಸು ಕಾಣುವ ಹಂತದಲ್ಲಿರುವ ಚಿತ್ರತಂಡವು ಜೆರ್ಮನಿಯ vfx ತಂತ್ರಜ್ಞ ಟೋನಿ ಅಂದ್ರೇವ್ ರ vfx ಬಳಕೆಯಿಂದ ಖ್ಯಾತ ಛಾಯಾಗ್ರಾಹಕರ ಹಾಗೂ ಮುಂಬೈ ಮತ್ತು ಚೆನ್ನೈ ತಂತ್ರಜ್ಞರ ಅವಿರತ ಪ್ರಯತ್ನದಿಂದ
ಚಿತ್ರೀಕರಣ ಮುಗಿಸಿದೆ.

ಮುಂಬೈ ನ ದಯಾ ಎಸ್ ಪೂಜಾರಿ ಯವರ ನಿರ್ದೇಶನ ಹಾಗೂ ಆರತಿ ಚೆನ್ನೈ ರವರ ಸಂಗೀತ ನಿರ್ದೇಶನ ಚಿತ್ರಕ್ಕೆ ಅದ್ಬುತ ರೂಪ ನೀಡಿದೆ. ವಿಭಿನ್ನ ಮತ್ತು ವಿನೂತನ ಪ್ರಯತ್ನದಿಂದ ಚಿತ್ರೀಕರಣ ಮುಗಿದ ಬೆನ್ನಲ್ಲೇ 2021 ರ ಲೊಕೇನೋವ ಅಂತಾರಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಜೂನ್ ಮೊದಲ ವಾರ ಮರಾಠಿ ಹಾಗೂ ತುಳು ಬಾಷೆಯಲ್ಲಿ ತೆರೆಕಾಣಲು ಸಿದ್ದವಾಗಿದೆ.

ತುಳುವರ ಈ ಪ್ರಯತ್ನಕ್ಕೆ ಆಶೀರ್ವದಿಸಿ ಅವರ ಪ್ರಯತ್ನಕ್ಕೆ ಸಹಕಾರ ನೀಡುವಿರೆಂದು ನಂಬಿರುವ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English