ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಅಭ್ಯುದಯದಲ್ಲಿ ಕುಕ್ಕೆ ದೇವಳದಪಾತ್ರ ಅನನ್ಯ.ಶ್ರೀ ದೇವಳದಿಂದ ಕ್ಷೇತ್ರದ ಅನೇಕ ರಸ್ತೆಗಳು ಕಾಂಕ್ರಿಟೀಕರಣಗೊAಡು ಅಭಿವೃದ್ಧಿಯಾಗಿದೆ.ಅಲ್ಲದೆ ಶ್ರೀ ದೇವಳದಿಂದ ನೆರವೇರುತ್ತಿರುವ ಸಮಗ್ರ ಅಭಿವೃದ್ಧಿಯ ೧೮೦ ಕೋಟಿ ರೂಗಳ ಮಾಸ್ಟರ್ ಪ್ಲಾನ್ ಯೋಜನೆಯಲ್ಲಿ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳು ನಿರ್ಮಿತವಾಗಿದೆ. ದೇ ರೀತಿ ಕೋವಿಡ್-೧೯ ಸಂಕಷ್ಠದ ಸಮಯದಲ್ಲಿ ಕೂಡಾ ಶ್ರೀ ದೇವಳವು ಉತ್ಕೃಷ್ಠವಾದ ಸಹಕಾರ ನೀಡಿದೆ ಎಂದು ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
ವಿದ್ಯಾನಗರದ ಕುಮಾರಸ್ವಾಮಿ ವಿದ್ಯಾಲಯದಿಂದ ಅಗ್ರಹಾರ ಸೋಮನಾಥೇಶ್ವರ ದೇವಾಲಯದ ತನಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ನಿರ್ಮಿತವಾದ ಕಾಂಕ್ರೀಟ್ ರಸ್ತೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಕುಕ್ಕೆ ದೇವಳದಿಂದ ಸುಮಾರು ೨೨ ಲಕ್ಷದ ೫೦ ಸಾವಿರ ಮೌಲ್ಯದಲ್ಲಿ ರಸ್ತೆಯು ನಿರ್ಮಿತವಾಗಿದೆ.ಈ ರಸ್ತೆ ಮೂಲಕ ಕುಮಾರಧಾರದಿಂದ ಅಗ್ರಹಾರ-ವಿದ್ಯಾನಗರ-ಬಿಲದ್ವಾರದಲ್ಲಿ ಪ್ರಧಾನ ರಸ್ತೆಗೆ ಸಂಪರ್ಕಿಸಬಹುದು. ವಾಹನ ದಟ್ಟಣೆ ಸಮಯದಲ್ಲಿ ಅಥವಾ ಜಾತ್ರಾ ಮಹೋತ್ಸವದ ಕಾಲದಲ್ಲಿ ಈ ರಸ್ತೆಯನ್ನು ಬೈಪಾಸ್ ರಸ್ತೆಯಾಗಿ ಬಳಸಬಹುದು.ಆದುದರಿಂದ ಈ ರಸ್ತೆಯು ಅನುಕೂಲಕರವಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಶೋಭಾ ಗಿರಿಧರ್, ಮಾಸ್ಟರ್‌ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಮನೋಜ್ ಸುಬ್ರಹ್ಮಣ್ಯ, ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ.ಟಿ, ಚಂದ್ರಶೇಖರ್.ಎ, ಲೋಕೋಪಯೋಗಿ ಇಲಾಖಾ ಅಭಿಯಂತರ ಜಯಪ್ರಕಾಶ್, ಸುಬ್ರಹ್ಮಣ್ಯ ಗ್ರಾ.ಪಂ.ಅಧ್ಯಕ್ಷೆ ಲಲಿತಾ ಗುಂಡಡ್ಕ, ಉಪಾಧ್ಯಕ್ಷೆ ಸವಿತಾ ಭಟ್, ಪಿಡಿಓ ಮುತ್ತಪ್ಪ ಧವಳಗಿ, ಕಾರ್ಯದರ್ಶಿ ಮೋನಪ್ಪ.ಡಿ, ಸದಸ್ಯರಾದ ವೆಂಕಟೇಶ್ ಎಚ್.ಎಲ್, ಭಾರತಿ ದಿನೇಶ್, ನಾರಾಯಣ ಅಗ್ರಹಾರ, ದಿವ್ಯಾ ಯಶೋಧಕೃಷ್ಣ, ಪ್ರಮುಖರಾದ ವೆಂಕಟ್ ವಳಲಂಬೆ, ದಿನೇಶ್ ಸಂಪ್ಯಾಡಿ, ರಾಜೇಶ್ ಎನ್.ಎಸ್, ಚಿದಾನಂದ ಕಂದಡ್ಕ, ಎನ್.ಮಂಜುನಾಥ ರಾವ್, ಗಿರಿಧರ್ ಸ್ಕಂಧ, ಅಚ್ಚುತ್ತ ಗೌಡ, ಗಣೇಶ್ ಪ್ರಸಾದ್ ಎನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English