ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ನೂತನ ಅಧ್ಯಕ್ಷೆಯಾಗಿ ಡಾ. ಭಾರತಿ ಪ್ರಕಾಶ್‌

9:43 PM, Wednesday, July 7th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Bharathiಮಂಗಳೂರು: ಮಂಗಳೂರು ಉತ್ತರದ ಇನ್ನರ್‌ ವೀಲ್‌ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ  2020-21 ಸಾಲಿನ ಅಧ್ಯಕ್ಷೆ ನಿರ್ಮಲಾ ಪೈ ಅವರು ನೂತನ ಅಧ್ಯಕ್ಷೆ, ವಿಶ್ವವಿದ್ಯಾನಿಲಯ ಕಾಲೇಜಿನ ಸೂಕ್ಷ್ಮಾಣುಜೀವಿಶಾಸ್ತ್ರ ವಿಭಾಗದ ಮುಖ್ಯಸ್ಥೆಯೂ ಆಗಿರುವ ಡಾ. ಭಾರತಿ ಪ್ರಕಾಶ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಮಹಿಳೆಯರು ಸಮಾಜದಲ್ಲಿನ ವಿಲಕ್ಷಣಗಳನ್ನು ಎದುರಿಸುವಷ್ಟು ಬಲಶಾಲಿಯಾಗಬೇಕು ಎಂದರಲ್ಲದೆ ಇನ್ನರ್‌ ವೀಲ್‌ ಕ್ಲಬ್‌ನ ಹೊಸ ತಂಡವನ್ನು ಅಭಿನಂದಿಸಿದರು. ಗೌರವಾನ್ವಿತ ಅತಿಥಿ ಮಂಗಳೂರು ಉತ್ತರದ ರೋಟರಿ ಕ್ಲಬ್‌ನ ಪಿಡಿಜಿ ರೊಟೇರಿಯನ್ ಕೆ. ಕೃಷ್ಣ ಶೆಟ್ಟಿ, ನೂತನ ಅಧ್ಯಕ್ಷರು ಇಡೀ ವರ್ಷದ ಕಾರ್ಯಕ್ರಮಗಳು ಸುಸೂತ್ರವಾಗಿ ಸಾಗುವಂತೆ ಯೋಜನೆ ರೂಪಿಸಿಕೊಳ್ಳುವ ಅಗತ್ಯವಿದೆ, ಎಂದರು.

ಇದೇ ವೇಳೆ, ವಸಂತಿ ಕಾಮತ್ ಅವರನ್ನು ನೂತನ ಕಾರ್ಯದರ್ಶಿಯಾಗಿ, ಚಂದ್ರಿಕಾ ಭಟ್ ಅವರನ್ನು ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಯಿತು. ಖಜಾಂಚಿಯಾಗಿ ಗೀತಾ ರೈ, ಸಂಪಾದಕರಾಗಿ ದೀಪಾಲಿ ನಹತಾ, ಐಎಸ್‌ಒ ಆಗಿ ಉಷಾ ಸುಧಾಕರ್ ಮತ್ತು ಉಪಾಧ್ಯಕ್ಷರಾಗಿ ಮೀರಾ ಕೃಷ್ಣ ಕಾರ್ಯನಿರ್ವಹಿಸಲಿದ್ದಾರೆ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವಿಶಾಲಕ್ಷಿ ಮತ್ತು ಪದ್ಮಜಾ ನೂತನ ಸದಸ್ಯರಾಗಿ ಆಯ್ಕೆಯಾದರು.

ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪಿಡಿಸಿ ಮಾಲಿನಿ ಹೆಬ್ಬಾರ್ ಮತ್ತು ರಜನಿ ಜೂಮ್ ಮಾಸ್ಟರ್ಸ್ ಆಗಿದ್ದರು. ಪಿಡಿಸಿ ಚಿತ್ರಾ, ಪಿಪಿ ಆರ್‌ಟಿಎನ್‌ ಶಿವಾನಿ ಎಂ.ಸಿ, ಪಿಡಿಸಿ ಮಿತ್ರ ಪ್ರಭು, ಉಷಾ ರವಿರಾಜ್ ಮೊದಲಾದವರು ಭಾಗವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English