ಮಂಗಳೂರು : ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬ ನಾಗರಿಕರಲ್ಲಿ ಅರಿವಿರಬೇಕು ಸಾರ್ವಜನಿಕ ಸ್ಥಳದಲ್ಲಿ ಕೆಲವರು ಪ್ರತಿನಿತ್ಯ ಕಸವನ್ನು ಎಸೆದು ಬ್ಲ್ಯಾಕ್ ಸ್ಪಾಟನ್ನಾಗಿಸಿ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ. ಅಂತಹ ಒಂದು ಸ್ಥಳವನ್ನು ಸ್ವಚ್ಛಗೊಳಿಸಿ ಸಮಾಜಕ್ಕೆ ಸುಂದರ ಸಂದೇಶಕೊಡುವ ಪರಿಸರ ಸಂರಕ್ಷಣೆಯ ವರ್ಣರಂಜಿತ ಚಿತ್ರ ಬಿಡಿಸಿ ಸೆಲ್ಫಿ ಸ್ಪಾಟಾಗಿ ಪರಿವರ್ತಿಸಲು ಮ.ನ.ಪಾ ಸದಸ್ಯ ಕಿರಣ್ ಕುಮಾರ್ ರವರೊಂದಿಗೆ ಕೈ ಜೋಡಿಸಿದ ಶ್ರೀ ನಾಗಬ್ರಹ್ಮ ತರುಣ ವೃಂದ(ರಿ.)ಕೋಡಿಕಲ್. ಹಾಗೂ”pixncil” ಎಂಬ ಖ್ಯಾತ ಕಲಾವಿದರ ತಂಡದ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಅವರು ಬಂಗ್ರಕೂಳೂರು ವಾರ್ಡ್ ಕೋಡಿಕಲ್ ನಲ್ಲಿ ಕಸದರಾಶಿ ತುಂಬಿದ್ದ ಬ್ಲ್ಯಾಕ್ ಸ್ಪಾಟನ್ನು ಸ್ವಚ್ಛಗೊಳಿಸಿ “ಸೆಲ್ಫಿ ಸ್ಪಾಟ್” ನ್ನಾಗಿ ಪರಿವರ್ತಿಸಿದ ಸ್ಥಳವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲ ರಾವ್, ಪಾಲಿಕೆ ಸದಸ್ಯರಾದ ಮನೋಜ್ ಕುಮಾರ್, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಮಹಾನಗರ ಕಾರ್ಯವಾಹ ಮನೋಹರ್ ಕೋಡಿಕಲ್, ಹಿರಿಯರಾದ ಗೋಪಾಲ್ ಕೋಟ್ಯಾನ್, ಹರೀಶ್ ಶೆಟ್ಟಿ, ಕಿರಣ್ ಜೋಗಿ ಹಾಗು ನಾಗರಿಕರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English