ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್ ನಲ್ಲಿ ‘ವನಮಹೋತ್ಸವ’ ಸಪ್ತಾಹ

9:10 PM, Friday, July 9th, 2021
Share
1 Star2 Stars3 Stars4 Stars5 Stars
(No Ratings Yet)
Loading...

Lourdes Schoolಮನೆಗೊ೦ದು ಮರ, ಊರಿಗೊ೦ದು ವನ ಎ೦ಬ ಧ್ಯೇಯವಾಕ್ಯದೊ೦ದಿಗೆ ನಗರದ ಲೂರ್ಡ್ಸ್ ಸೆ೦ಟ್ರಲ್ ಶಾಲೆಯಲ್ಲಿ ಇತ್ತೀಚಿಗೆ ವನಮಹೋತ್ಸವ ಸಪ್ತಾಹವನ್ನು ಆಚರಿಸಲಾಯಿತು. ನಮಗೆ ಶುದ್ಧ ಗಾಳಿ ಹಾಗೂ ಸು೦ದರ ಪರಿಸರ ಇ೦ದಿನ ಅಗತ್ಯ. ಗಿಡಮರಗಳನ್ನು ನೆಡುವ ಮೂಲಕ ಪರಿಸರ ಸ೦ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿ, ಪರಿಸರ ಪ್ರಜ್ಞೆಯ ಅರಿವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎ೦ದು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್‌ನ ಸ೦ಚಾಲಕರಾದ ವ೦ದನೀಯ ಫಾ.ಡಾ.ಜೆ.ಬಿ. ಸಲ್ಡಾನ್ಹಾರವರು ಹೇಳಿದರು. ಅವರು ಲೂರ್ಡ್ಸ್ ಸೆ೦ಟ್ರಲ್ ಸ್ಕೂಲ್‌ನಲ್ಲಿ ‘ವನಮಹೋತ್ಸವ ಸಪ್ತಾಹ’ದ ಕಾರ್‍ಯಕ್ರಮದಲ್ಲಿ ಗಿಡ ನೆಡುವ ಮೂಲಕ ವಿದ್ಯುಕ್ತ ಚಾಲನೆಯನ್ನು ನೀಡಿ, ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಿದ್ದರು.

ಆನ್‌ಲೈನ್ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ – ಪರಿಸರದೊ೦ದಿಗೆ ನಮ್ಮ ಸ೦ಬ೦ಧ ಸದಾ ಹಸುರಾಗಿರಬೇಕು. ಇ೦ದು ಮನೆಯಿ೦ದಲೇ ನಮ್ಮ ವಿದ್ಯಾರ್ಜನೆ ನಡೆಯುತ್ತಿದ್ದು, ನಮ್ಮ ಮನೆಯ೦ಗಳದಲ್ಲಿ ಹಸಿರು ಪರಿಸರವನ್ನು ನಿರ್ಮಿಸುವ೦ತಾಗಬೇಕೆ೦ದು ಶಾಲಾ ಪ್ರಾ೦ಶುಪಾಲರಾದ ವ೦ದನೀಯ ಫಾ. ರಾಬರ್ಟ್ ಡಿ’ಸೋಜರವರು ಹೇಳಿದರು.

ವಿದ್ಯಾರ್ಥಿಗಳಿಗೆ ವಿವಿಧ ಹೂಗಿಡಗಳು, ಗಿಡ ಮೂಲಿಕೆ ಸಸ್ಯಗಳ ಬಗೆಗೆ ಮಾಹಿತಿಯನ್ನು ದೃಶ್ಯ – ಶ್ರವಣದ ಮೂಲಕ ನೀಡಲಾಯಿತು. ವಿದ್ಯಾರ್ಥಿಗಳು ಭಿತ್ತಿ ಪತ್ರಗಳು, ಧ್ಯೇಯ ವಾಕ್ಯಗಳು, ಚಿತ ಪ್ರದರ್ಶನದಿ೦ದ ಪರಿಸರ ಕಾಳಜಿಯನ್ನು ಮೆರೆದರು. ಪರಿಸರಕ್ಕೆ ಸ೦ಬ೦ಧ ಪಟ್ಟ೦ತೆ ವಿವಿಧ ಸ್ಪರ್ಧೆಗಳನ್ನು ಅಯೋಜಿಸಲಾಗಿತ್ತು.

ವೇದಿಕೆಯಲ್ಲಿ ಶಾಲಾ ಪ್ರಾ೦ಶುಪಾಲರಾದ ವ೦ದನೀಯ ಫಾ. ರಾಬರ್ಟ್ ಡಿ’ಸೋಜ, ಉಪಪ್ರಾ೦ಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆ೦ಬರ್ ಪತ್ರಾವೊ ಮತ್ತು ಶಿಕ್ಷಕಿ ಸ೦ಗೀತಾ ಸಾಲಿನ್ಸ್ ವನಮಹೋತ್ಸವದ ಮಹತ್ವವನ್ನು ತಿಳಿಸಿದರು. ಶಿಕ್ಷಕಿ ಲಿಸಾ ಪೆರಿಸ್ ಸ್ವಾಗತಿಸಿ, ಅನಿತಾ ಪಿ೦ಟೊ ವ೦ದಿಸಿದರು. ಶಿಕ್ಷಕಿಯರಾದ ಹರ್ಷಿತಾ ಶೆಟ್ಟಿ, ಫ್ಲಾವಿಯಾ ರೀನಾ ಡಿ’ಕುನ್ಹಾ ಮತ್ತು ಮೇರಿ ಡಿ’ಸೋಜ ಕಾರ್ಯಕ್ರಮವನ್ನು ಸ೦ಯೋಜಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English