ಜುಲೈ 13 ರಂದು ಬಾನಂಗಳದಲ್ಲಿ ಮಂಗಳ – ಶುಕ್ರಗ್ರಹಗಳ ಸಂಯೋಗ

8:27 PM, Monday, July 12th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Venus Marsಮಂಗಳೂರು : ಮಂಗಳ-ಶುಕ್ರಗ್ರಹಗಳು ಜು.13ರ ಮಂಗಳವಾರ ಸನಿಹ ಬರಲಿದ್ದು, (Conjunction). ಈ ಗ್ರಹಗಳು ಉಳಿದ ದಿನಗಳಲ್ಲಿ ದೂರದೂರವಿದ್ದರೂ ಆ ದಿನ ಭೂಮಿಯಿಂದ ಆಗಸವನ್ನು ನೋಡಿದಾಗ ಅವು ಸನಿಹವಿದ್ದಂತೆ ಕಾಣಲಿದೆ ಇದು ಖಗೋಳಾಸಕ್ತರಿಗೆ ಒಂದು ಅಪರೂಪದ ಅವಕಾಶವಾಗಿದೆ.

ಗ್ರಹಗಳನ್ನು ಬರಿಗಣ್ಣಿನಿಂದ, ದುರ್ಬೀನಿನಿಂದ ಅಥವಾ ದೂರದರ್ಶಕದಿಂದ ನೋಡಬಹುದು. ಮೋಡವಿರದ ಶುಭ್ರ ಆಕಾಶವಿದ್ದರೆ ಜುಲೈ 13 ರ ರಾತ್ರಿ ಸುಮಾರು 7.20 ಗಂಟೆಗೆ ಪಶ್ಚಿಮ ಮತ್ತು ವಾಯುವ್ಯ ದಿಕ್ಕಿನ ನಡುವೆ ನೋಡಿದಾಗ ಮಂಗಳ ಶುಕ್ರ ಸಂಯೋಗದೊಂದಿಗೆ ಬಾಲಚಂದ್ರ ಮತ್ತು ಮಖಾ ನಕ್ಷತ್ರ ಕಾಣಬಹುದಾಗಿದ್ದು, ನಂತರದ ದಿನಗಳಲ್ಲಿ ಈ ಗ್ರಹಗಳು ದೂರವಾಗುವುದನ್ನು ಸಹ ಕಾಣಬಹುದಾಗಿದೆ.

ಖಗೋಳಾಸಕ್ತರು ಈ ಘಟನೆಯ ಫೋಟೊಗಳನ್ನು outreach@iiap.res.in ಗೆ ಕಳುಹಿಸಬಹುದಾಗಿದೆ. ಉತ್ತಮವಾದವುಗಳನ್ನು ಆನ್‍ಲೈನಲ್ಲಿ ಪ್ರಕಟಿಸುದಾಗಿ ಬೆಂಗಳೂರಿನ ಐಐಎ ಪ್ರಕಟಿಸಲಿದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ| ಕೆ.ವಿ. ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

image description

1 ಪ್ರತಿಕ್ರಿಯೆ - ಶೀರ್ಷಿಕೆ - ಜುಲೈ 13 ರಂದು ಬಾನಂಗಳದಲ್ಲಿ ಮಂಗಳ – ಶುಕ್ರಗ್ರಹಗಳ ಸಂಯೋಗ

  1. ಗಂಗಾಧರ್ ಗಾಂಧಿ, ಮಂಗಳೂರು

    ಪ್ರಕೃತಿ ವೈಚಿತ್ರದ ಒಂದು ಉತ್ತಮ ಮಾಹಿತಿ. ಇಂತಹ ಪ್ರಾಕೃತಿಕ ವಿಸ್ಮಯದ ಸುದ್ದಿ ವಿಜ್ಞಾನಕ್ಕೆ ಮಾತ್ರ ಹೇಳಲು ಸಾಧ್ಯ ಹಾಗಾಗಿ ಇಂತಹ ವಿಷಯಗಳು ಹೆಚ್ಚು ಹೆಚ್ಚು ಮೂಡಿಬರಲಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English