ಬ್ರಹ್ಮಾವರ: ಫ್ಲ್ಯಾಟ್ ನಲ್ಲಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಎಂಬಲ್ಲಿ ನಡೆದಿದೆ.
ಕೊಲೆಯಾದವರನ್ನು ವಿಶಾಲ ಗಾಣಿಗ(35) ಎಂದು ಗುರುತಿಸಲಾಗಿದೆ.
ವಿಶಾಲ ಗಾಣಿಗ ಅವರ ಪತಿ ವಿದೇಶದಲ್ಲಿದ್ದು, ಗಂಗೊಳ್ಳಿ ಮೂಲದ ವಿಶಾಲ ಅವರು ಇತ್ತೀಚಿಗಷ್ಟೇ ಊರಿಗೆ ಮರಳಿದ್ದರು. ಬ್ರಹ್ಮಾವರದಲ್ಲಿ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಎಂದು ಮನೆಯಲ್ಲಿ ಹೇಳಿಬಂದಿದ್ದ ವಿಶಾಲ ಅವರು ಮನೆಗೆ ವಾಪಾಸಾಗಿರಲಿಲ್ಲ ಎಂದು ಹೇಳಲಾಗಿದೆ.
ವಿಶಾಲ ಭಾನುವಾರ ರಾತ್ರಿಯಿಂದ ಮನೆಯಲ್ಲಿ ಒಬ್ಬರೆ ಇದ್ದರೆನ್ನಲಾಗಿದೆ. ಈ ಅವಧಿಯಲ್ಲಿ ದುಷ್ಕಮಿಗಳು ಫ್ಲ್ಯಾಟ್ ಗೆ ಆಗಮಿಸಿ ಮಹಿಳೆಯನ್ನು ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಸೋಮವಾರ ಸಂಜೆ ವೇಳೆ ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ವಿಶಾಲ ಗಾಣಿಗ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ದುಷ್ಕಮಿಗಳು ಕೊಲೆಗೈದ ಬಳಿಕ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Click this button or press Ctrl+G to toggle between Kannada and English