ಸುಳ್ಯ : ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ರಸಾಯನಿಕೇತರ ಸ್ಯಾನಿಟೈಸರ್ ಡೈಮಂಡ್ ಡ್ರಾಪ್ ಬಳಕೆ ಕುರಿತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೆವಿಜಿ ಆಯುರ್ವೇದ ಕಾಲೇಜಿನ ಆಡಿಟೋರಿಯಂ ನಲ್ಲಿ ಜು.11 ರಂದು ನಡೆಯಿತು.
ಸಚಿವ ಎಸ್ ಅಂಗಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್, ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮಿ, ಕೆವಿಜಿ ಆಯುರ್ವೇದ ಕಾಲೇಜು ಪ್ರಾಂಶುಪಾಲರಾದ ಡಾ.ಲೀಲಾದರ್ ಡಿ.ವಿ,ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪಿ ಮಹದೇವ್,ತಾಲೂಕು ಅರೋಗ್ಯಾಧಿಕಾರಿ ಡಾ.ನಂದಕುಮಾರ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಡ,ಪುತ್ತೂರು ತಾಲೂಕು ಅರೋಗ್ಯಧಿಕಾರಿ ದೀಪಕ್ ರೈ,ಡೈಮಂಡ್ ಡ್ರಾಪ್ಸ್ ಕಂಪನಿಯ ನಿರ್ದೇಶಕರಾದ ದೀರಜ್,ದಿನೇಶ್ ಅಮಿನ್,ಸತೀಶ್, ಹರೀಶ್ ಮತ್ತಿತರರು ಭಾಗವಹಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ನಿಗದಿಯಾಗಿದೆ ಅದನ್ನು ನಡೆಸುವ ಪೂರ್ವತಯಾರಿಯಾಗಿ ಮಕ್ಕಳ ಅರೋಗ್ಯ ಹಿತದೃಷ್ಟಿಯಿಂದ ರಸಾಯನಿಕೇತರ ಸ್ಯಾನಿಟೈಸರ್ ಬಳಸುವ ಉದ್ದೇಶದಿಂದ ಸುಳ್ಯದಲ್ಲಿ ಡೈಮಂಡ್ ಡ್ರಾಪ್ ಕಂಪನಿಯ ವತಿಯಿಂದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿದೆ ಅದರಿಂದ ಇಡೀ ಕರ್ನಾಟಕದಲ್ಲಿ ನೈಸರ್ಗಿಕ ಸ್ಯಾನಿಟೈಸರ್ ಬಳಕೆಯಾಗಬೇಕೆಂದು ನಮ್ಮ ಅಭಿಲಾಷೆ ಅದರಿಂದ ಸುಳ್ಯದಲ್ಲಿ ಪ್ರಪ್ರಥಮವಾಗಿ ರಸಾಯನಿಕ ಮುಕ್ತ ಸ್ಯಾನಿಟೈಸರ್ ಆಗಬೇಕು ಎಂದು ಸಚಿವ ಅಂಗಾರ ಹೇಳಿದರು.
Click this button or press Ctrl+G to toggle between Kannada and English