ಮಂಗಳೂರು : ದಾಸಜನ ಮಂಗಳೂರು ಹಾಗೂ ಮನೋಹರ ಗ್ರಂಥಮಾಲ ಧಾರವಾಡ ಇವುಗಳ ಸಹಮಿಲನದಲ್ಲಿ ಡಾ| ನಾ. ದಾಮೋದರ ಶೆಟ್ಟಿ ರಚಿಸಿದ `ಸರದಿ’ ಕಾದಂಬರಿಯ ಮರು ಚಿಂತನಾ ಕಾರ್ಯಕ್ರಮ ಸಂತ ಅಲೋಷಿಯಸ್ ಕಾಲೇಜಿನ ಸಭಾಂಗಣದಲ್ಲಿ ಇಂದು ಸಂಜೆ 5.30ಕ್ಕೆ ನಡೆಯಿತು.
ದಾರವಾಡದಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ `ಸರದಿ’ ಕಾದಂಬರಿಯ ಮರು ಚಿಂತನಾ ವಿಷಯದಲ್ಲಿ ಶ್ರೀನಿವಾಸ ದೇಶಪಾಂಡೆ ಮಾತಾಡಿದರು. ಓದುಗನಲ್ಲಿ ಕಾದಂಬರಿಯ ವಿಷಯ ವಿಸ್ತಾರಗೊಳ್ಳಲು ಓದುಗರು ಅದರ ವಿಷಯವನ್ನು ಸಂಭಾಷಿಸ ಬೇಕು, ಕೃತಿ ಚಿಕ್ಕದಾದರೂ ಅದರಲ್ಲಿರುವ ಅನೇಕ ವಿಷಯಗಳು ನಮ್ಮ ಬುದ್ದಿ ಚಿಂತನೆಯ ವಿಕಸನಕ್ಕೆ ಸಹಕಾರಿಯಾಗಿದೆ. ಜಾಗತೀಕರಣದ ಬದಲಾವಣೆಯ ವಿಮರ್ಶೆಯ ವಿಷಯಗಳು ನಮ್ಮಲ್ಲಿ ಮೂಡಬೇಕು ಎಂದು ಅವರು ಹೇಳಿದರು. ನಮ್ಮತನವನ್ನು ಹೇಗೆ ಉಳಿಸಿಕೊಳ್ಳಬಹುದು ಎಂಬುದನ್ನು ಈ ಕಾದಂಬರಿಯಲ್ಲಿ ಡಾ| ನಾ. ದಾಮೋದರ ಶೆಟ್ಟಿಯವರು ವಿಸ್ತರಿಸಿ ಹೇಳಿದ್ದಾರೆ ಎಂದು ತಮ್ಮ ಮಾತುಗಳಲ್ಲಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ವಿವೇಕ ರೈ ವಹಿಸಿದ್ದರು. ವೇದಿಕೆಯಲ್ಲಿ ಎ.ಎನ್ ನರಹರಿ ಹಾಗೂ ಡಾ| ನಾ.ದಾ ಶೆಟ್ಟಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English